ಅಭಿಷೇಕ್ ಶರ್ಮಾ ಸಿರೀಸ್‌ 'ಡಕ್ ಔಟ್': ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಆದ ಸೋದರಿ ಕೋಮಲ್!

Published : Feb 21, 2026, 01:15 PM IST

Abhishek Sharma's Sister Komal Trolled for Cricketer's Poor Form ಟಿ20 ವಿಶ್ವಕಪ್‌ನಲ್ಲಿ ಭಾರತದ ಆಟಗಾರ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನಕ್ಕೆ ಅವರ ಸಹೋದರಿ ಕೋಮಲ್ ಶರ್ಮ ಅವರೇ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. 

PREV
18

ಭಾರತದ ಸೂಪರ್‌ಸ್ಟಾರ್ ಅಭಿಷೇಕ್ ಶರ್ಮ ಟಿ20 ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್‌ಗೆ ಅವರ ಸಹೋದರಿಯೇ ಕಾರಣ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್‌ ನಡೆಯಿತ್ತಿದೆ. ಅಭಿಷೇಕ್ ಅವರ ಸಹೋದರಿ ಕೋಮಲ್ ಅವರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಅಭಿಷೇಕ್‌ ಶರ್ಮ ವಿಶ್ವಕಪ್‌ನಲ್ಲಿ ಸ್ಟಾರ್‌ ಆಗ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಆಡಿದ ಮೂರೂ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಒಂದು ಪಂದ್ಯದಿಂದ ಅವರು ಗಾಯದ ಕಾರಣ ಹೊರಗುಳಿದಿದ್ದರು. ಇದರ ಬೆನ್ನಲ್ಲಿಯೇ ಅಭಿಷೇಕ್‌ ಶರ್ಮ ಸೋದರಿ ಕೋಮಲ್‌ ಶರ್ಮ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

28

ಎಕ್ಸ್‌ನಲ್ಲಿ ಇಂಥ ಟ್ರೋಲ್‌ಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಅಭಿಷೇಕ್‌ ಎಲ್ಲೇ ಆಟವಾಡಲು ಹೋದರೂ, ಕೋಮಲ್‌ ಕೂಡ ಅಲ್ಲಿಯೇ ಇರುತ್ತಾಳೆ. ಇದರಿಂದ ಅಭಿಷೇಕ್‌ ಅವರ ಗಮನ ಬೇರೆ ಕಡೆ ಹೋಗುತ್ತದೆ. ಇದು ಅವನ ಆಟ ಹಾಳಾಗಲು ಕಾರಣವಾಗುತ್ತಿದೆ ಎಂದು ಟ್ರೋಲ್‌ ಮಾಡಿದ್ದಾರೆ.

38

ಟೀಮ್‌ ಇಂಡಿಯಾದಲ್ಲಿ ಇರುವ ಇತರ ಪ್ಲೇಯರ್‌ಗಳಿಗೂ ಸೋದರಿಯರು ಇದ್ದಾರೆ. ಆದರೆ, ಯಾರೂ ಕೂಡ ಪ್ರತಿ ಪಂದ್ಯಕ್ಕೂ ಸ್ಟೇಡಿಯಂಗೆ ಬಂದು ಗಮನ ಸೆಳೆಯುವ ಕೆಲಸ ಮಾಡೋದಿಲ್ಲ ಎಂದು ಬರೆದಿದ್ದಾರೆ.

48

ಕೋಮಲ್‌ ಶರ್ಮ ಫಿಸಿಯೋಥೆರಪಿಸ್ಟ್‌ ಆಗಿದ್ದು, ಅಂತಾರಾಷ್ಟ್ರೀಯ ಪಂದ್ಯವೇ ಆಗಲಿ, ಐಪಿಎಲ್‌ ಪಂದ್ಯವೇ ಆಗಲಿ ಅಭಿಷೇಕ್‌ ಶರ್ಮ ಆಡುವಾಗ ಇವರು ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಬಿಸಿಸಿಐ ನಿಯಮಗಳ ಪ್ರಕಾರ, ಆಟಗಾರರ ಕುಟುಂಬ ಸದಸ್ಯರು ಪಂದ್ಯಗಳನ್ನು ವೀಕ್ಷಿಸಲು ಬರುವುದಕ್ಕೆ ಯಾವುದೇ ನಿಷೇಧವಿಲ್ಲ. ಸಾಮಾನ್ಯವಾಗಿ ಭಾರತದ ಪಂದ್ಯಗಳು ದೇಶದಲ್ಲಿಯೇ ಹೆಚ್ಚು ನಡೆಯುವುದರಿಂದ ಕುಟುಂಬ ಸದಸ್ಯರು ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರುತ್ತಾರೆ.

58

ಕಳಪೆ ಪ್ರದರ್ಶನಕ್ಕೆ ಆಟಗಾರರ ಸಹೋದರಿಯರು ಮತ್ತು ಪತ್ನಿಯರನ್ನು ದೂಷಿಸುತ್ತಿರುವುದು ಇದೇ ಮೊದಲಲ್ಲ. ವಿರಾಟ್‌ ಕೊಹ್ಲಿ ಕೆಟ್ಟ ಫಾರ್ಮ್‌ನಲ್ಲಿದ್ದಾಗ ಮೈದಾನಕ್ಕೆ ಬಂದಿದ್ದ ಅವರ ಪತ್ನಿ ಅನುಷ್ಕಾ ಶರ್ಮ ಅವರನ್ನು ಟೀಕಿಸಲಾಗಿತ್ತು. ಕೊಹ್ಲಿ ಸತತ ಕಳಪೆ ಫಾರ್ಮ್‌ನಲ್ಲಿದ್ದರೂ, ಅನುಷ್ಕಾ ಶರ್ಮಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ನಿಭಾಯಿಸುವುದೇ ಹರಸಾಹಸವಾಗುತ್ತಿತ್ತು.

68

ಒಮ್ಮೆ ಸ್ವತಃ ವಿರಾಟ್‌ ಕೊಹ್ಲಿ ಕೂಡ ಇದರ ಬಗ್ಗೆ ಮಾತನಾಡಿದ್ದರು. ಮೈದಾನದಲ್ಲಿ ಕುಟುಂಬದ ಸದಸ್ಯರು ಇರೋದಿ ಮಾನಸಿಕ ಬೆಂಬಲ ನೀಡುತ್ತದೆ. ನಮ್ಮ ಪ್ರದರ್ಶನ ಕೆಟ್ಟದಾಗಿದ್ದಾಗ ಟೀಕೆ ಮಾಡುವವರು, ಉತ್ತಮ ಆಟವಾಡಿದಾಗ ಅವರನ್ನು ಯಾಕೆ ಅಭಿನಂದಿಸಬಾರದು ಎಂದು ಪ್ರಶ್ನೆ ಮಾಡಿದ್ದರು.

78

ಇದರ ನಡುವೆ ಟಿ20 ವಿಶ್ವಕಪ್‌ನಲ್ಲಿ ಇಂದಿನಿಂದ ಸೂಪರ್‌-8 ಹಂತ ಆರಂಭವಾಗುತ್ತಿದೆ. ಅಭಿಷೇಕ್‌ ಶರ್ಮ ಲಯ ಕಂಡುಕೊಳ್ಳದೇ ಇರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಟಿ20ಯಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಅಭಿಷೇಕ್‌, ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು.

88

ಆ ಮೂಲಕ, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20ಐ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆರಂಭಿಕರಲ್ಲಿ ಅಭಿಷೇಕ್ ಕೂಡ ಒಬ್ಬರು. ಪಾಕಿಸ್ತಾನದ ಸಯೀಮ್ ಅಯೂಬ್ ಈ ಮುಜುಗರದ ದಾಖಲೆಯ ಅಗ್ರಸ್ಥಾನದಲ್ಲಿದ್ದಾರೆ. ಸಯೀಮ್ ಆರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ (5). ಥೈಲ್ಯಾಂಡ್ ನ ಚಲೋಮ್ ವಾಂಗ್, ನೇಪಾಳದ ಕುಶಾಲ್, ಇಂಡೋನೇಷ್ಯಾದ ಆಟಗಾರ ಧರ್ಮ ಕೆಸುಮಾ ಮತ್ತು ಬಾಂಗ್ಲಾದೇಶದ ಪರ್ವೇಜ್ ಹೊಸೈನ್ ಕೂಡ ಇದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories