ಹಸಿವು ತಾಳಲಾರದೆ ಪಿಎಂ ಮೋದಿಗೆ ಫೋನ್ ಮಾಡಿದ ಅನಾಥರು: ಓಡೋಡಿ ಬಂದ ಅಧಿಕಾರಿಗಳು!

First Published | Apr 4, 2020, 1:11 PM IST

ಲಾಕ್‌ಡೌನ್ ಮುಂದುವರೆಯುತ್ತಿರುವಂತೆ ಜನರೆದುರಿನ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಲಾಕ್‌ಡೌನ್‌ನಿಂದಾಗಿ ಬಡ ವರ್ಗದ ಜನರ ಬಳಿ ಇದ್ದ ಹಣ, ದಿನಸಿ ಎಲ್ಲವೂ ಖಾಲಿಯಾಗಿ ಹಸಿವಿನಿಂದ ಕಂಗಾಲಾಗಿದ್ದಾರೆ. ಇದಕ್ಕೊಂದು ಉದಾಹರಣೆ ಭಾಗಲ್ಪುರದಲ್ಲಿ ಕಂಡು ಬಂದಿದೆ. ಇಲ್ಲಿ ಮೂರು ದಿನಗಳಿಂದ ಹಸಿವಿನಿಂದಿದ್ದ ಮೂವರು ಅನಾಥ ಸಹೋದರಿಯರು ಪತ್ರಿಕೆಯಲ್ಲಿ ಕಂಡು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಸಹಾಯವಾಣಿ ಸಂಖ್ಯೆ 1800118797 ಕರೆ ಮಾಡಿ, ತಮ್ಮ ಪರಿಸ್ಥಿತಿ ತಿಳಿಸಿದ್ದಾರೆ.

ಈ ಮೂವರು ಅನಾಥ ಹೆಣ್ಮಕ್ಕಳ ಫೋನ್ ಸ್ವೀಕರಿಸಿದ ಎನ್ನಲ್ಲೇ ಪ್ರಧಾನ ಮಂತ್ರಿ ಕಚೇರಿ ಎಚ್ಚೆತ್ತುಕೊಂಡಿದ್ದು, ಈ ಮಾಹಿತಿಯನ್ನು ಸ್ಥಳೀಯ ಆಡಳಿತಾಧಿಕಾರಿಗಳಿಗೆ ರವಾನಿಸಿದೆ. ಪಿಎಂಒ ಕಚೇರಿಯಿಂದ ಕರೆ ಬಂದ ಬೆನ್ನಲ್ಲೇ ಆತಂಕಗೊಂಡ ಅಧಿಕಾರಿಗಳು, ಅರ್ಧ ತಾಸಿನಲ್ಲಿ ತಯಾರಾದ ಊಟ ಹಾಗೂ ದಿನಸಿಯೊಂದಿಗೆ ಅನಾಥ ಮಕ್ಕಳ ಮನೆಗೆ ತಲುಪಿದ್ದಾರೆ.
undefined
PMO ಕಚೇರಿಯಿಂದ ಫೋನ್ ಬರುತ್ತಿದ್ದಂತೆಯೇ ಜಗಧೀಶ್ಪುರ್ ಸಿಒ ಸೋನು ಭಗತ್ ಭೋಜನ ಹಾಗೂ ದಿನಸಿಯೊಂದಿಗೆ ಅನಾಥ ಮಕ್ಕಳ ಮನೆಗೆ ದೌಡಾಯಿಸಿದ್ದಾರೆ. ಹಾಗೂ ಅವರಿಗೆ ಹೊಟ್ಟೆ ತುಂಬಾ ಊಟ ನೀಡಿದ್ದಾರೆ.
undefined

Latest Videos


ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಒ ಭಗತ್ ಈ ಮಕ್ಕಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಪಿಎಂಒ ಸಹಾಯವಾಣಿಗೆ ಕರೆ ಮಾಡಿದ್ದರು. ಅಲ್ಲಿಂದ ಜಿಲ್ಲಾ ಕಚೇರಗೆ ಈ ಸೂಚನೆ ರವಾನಿಸಲಾಯ್ತು. ಮಾಹಿತಿ ಸಿಗುತ್ತಿದ್ದಂತೆಯೇ ಅರ್ಧ ಗಂಟೆಯೊಳಗೆ ಈ ಮಕ್ಕಳಿಗೆ ಊಟ ಒದಗಿಸಿದ್ದೇವೆ. ಅಲ್ಲದೇ ದಿನಸಿಗಳನ್ನೂ ನೀಡಿದ್ದು, ಮುಂದೆ ಸಹಾಯ ಬೇಕಿದ್ದರೆ ತಿಳಿಸುವಂತೆ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದೇವೆ ಎಂದಿದ್ದಾರೆ.
undefined
ಮೂರು ದಿನಗಳಿಂದ ಹಸಿವಿನಿಂದಿದ್ದ ಈ ಮಕ್ಕಳು ಬರಾರಿ ಠಾಣಾ ವ್ಯಾಪ್ತಿಯ ಖಂಜರ್ಪುರ್‌ನಲ್ಲಿದ್ದರು. ಈ ಮೂವರಲ್ಲಿ ಗೌರಿ ಕುಮಾರಿ ಎಲ್ಲರಿಗಿಂತ ಹಿರಿಯಳು. ಇವರು ಮೂರು ವರ್ಷದ ಹಿಂದೆ ನಡೆದಿದ್ದ ರೈಲು ಅಪಘಾತದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.
undefined
ಇನ್ನು ತಾಯೊ ಹಾಗೂ ಅಣ್ಣ ಒಂಭತ್ತು ವರ್ಷದ ಹಿಂದೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ತಾವು ನಾಲ್ವರು ಮಕ್ಕಳು ಎಲ್ಲರಿಗಿಂತ ಕಿರಿಯ ತಂಗಿ ಅತ್ತೆ ಚಿಕ್ಕಮ್ಮನ ಮನೆಯಲ್ಲಿದ್ದಾಳೆಂದು ಗೌರಿ ತಿಳಿಸಿದ್ದಾಳೆ.
undefined
ಇನ್ನು ತಂದೆ ಸಾವನ್ನಪ್ಪಿದ ಬಳಿಕ ಮೂವರು ಸಹೋದರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಹೆಗಲ ಮೇಲಿದೆ. ಇದೇ ಕಾರಣದಿಂದ ಕೇವಲ ಎಂಟನೇ ತರಗತಿಗೆ ತಾನು ಓದು ನಿಲ್ಲಿಸಬೇಕಾಯ್ತು ಎಂಬುವುದು ಗೌರಿ ಮಾತು. ಅಲ್ಲದೇ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ತಾನು ಹಾಗೂ ತಂಗಿ ಆಶಾ ನೆರೆ ಹೊರೆಯವರ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಾಳೆ.
undefined
ಗೌರಿ ತಾನು ಶಿಕ್ಷಣ ನಿಲ್ಲಿಸಿದ ಬಳಿಕ ಮೂರನೇ ತಂಗಿಯನ್ನು ಶಾಲೆಗೆ ಕಳುಹಿಸಿದ್ದಾಳೆ.
undefined
click me!