ಲಾಕ್‌ಡೌನ್ ಅಂದ್ರೆ ಏನು? ಈ ಹಳ್ಳಿ ಜನರನ್ನು ನೋಡಿ ಕಲೀಬೇಕು!

First Published Mar 31, 2020, 4:25 PM IST

ಇಡೀ ಜಗತ್ತು ಸದ್ಯ ಕೊರೋನಾ ವೈರಸ್‌ನಿಂದ ಬಳಲುತ್ತಿದೆ. ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಲಾಗಿದೆ. ಜನರನ್ನು ಮನೆಯಿಂದ ಹೊರಬಾರದಂತೆ ತಡೆಯಲಾಗಿದೆ. ಹೀಗಾಗಿ ದೇಶದೆಲ್ಲೆಡೆ ಪೊಲೀಸರು ಜನರು ಹೊರ ಬಾರದಂತೆ ನೋಡಿಕೊಂಡಿದ್ದಾರೆ. ಹೀಗಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಬೇಕಾ ಬಿಟ್ಟಿಯಾಗಿ ತಿರುಗಾಟ ಮುಂದುವರೆಸಿದ್ದಾರೆ. ಆದರೆ ಈ ವಿಚಾರದಲ್ಲಿ ಉತ್ತರ ಭಾರತದ ಕೆಲ ಹಳ್ಳಿಗಳು ಜವಾಬ್ದಾರಿಯುತ ಹೆಜ್ಜೆ ಇರಿಸಿವೆ. ತಮ್ಮ ಹಳ್ಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿದ್ದು, ಖುದ್ದು ಹಳ್ಳಿ ಜನರೇ ಕಾವಲು ನಿಂತಿದ್ದಾರೆ.

ಇದು ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಬೂಂದಕ್ ಎಂಬ ಹಳ್ಳಿಯದ್ದಾಗಿದೆ. ಇಲ್ಲಿನ ಕೆಲ ಗ್ರಾಮಸ್ಥರು ಲಾಠಿ, ದೊಣ್ಣೆ ಹಿಡಿದು ಯಾರೂ ತಮ್ಮ ಊರಿಗೆ ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ.
undefined
ಇದು ಪಂಜಾಬ್‌ನ ಒಂದು ಹಳ್ಳಿಯ ಚಿತ್ರಣ. ಇಲ್ಲೂ ಜನರು ಹಳ್ಳಿಯ ಮುಖ್ಯ ರಸ್ತೆಗಳನ್ನೆಲ್ಲಾ ಬಂದ್ ಮಾಡಿದ್ದಾರೆ.
undefined
ಇದು ರಾಜಸ್ಥಾನದ ಸೀಕರ್ ಜಿಲ್ಲೆಯದ್ದಾಗಿದೆ. ಇಲ್ಲಿನ ಜನರು ಹಳ್ಳಿಯನ್ನು ಬಂದ್ ಮಾಡಿರುವ ಪರಿ ಇದು.
undefined
ಬಿಹಾರದ ಮುಂಗೇರ್ ಜಿಲ್ಲೆಯ ಪಾಟಕ್ ಹಳ್ಳಿಯ ಚಿತ್ರ. ಜನರು ತಮ್ಮ ಮನೆಗೆ ಸಂಪರ್ಕ ಕಲ್ಪಿಸುವ ಗಲ್ಲಿಯನ್ನು ಕೂಡಾ ಬಂದ್ ಮಾಡಿದ್ದಾರೆ.
undefined
ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಅಂಬೇಡ್ಕರ್‌ ನಗರ ಹಳ್ಳಿಯ ದೃಶ್ಯ. ಈ ಹಳ್ಳಿಯ ಮುಖಂಡ ಹಳ್ಳಿಯ ರಸ್ತೆಯನ್ನು ಮುಚ್ಚಿದ್ದಾರೆ, ಅಲ್ಲದೇ ಇಬ್ರನ್ನು ಕಾವಲಿಗೆ ನಿಲ್ಲಿಸಿದ್ದಾರೆ.
undefined
ಹರ್ಯಾಣದ ಹಳ್ಳಿಯೊಂದರ ದೃಶ್ಯ.
undefined
click me!