ಕೊರೋನಾ ತಾಂಡವ: ಯಾವ ಮಾಸ್ಕ್‌ ಎಷ್ಟು ಸೇಫ್‌? ಇಲ್ಲಿದೆ ವಿವರ

First Published | Apr 1, 2020, 3:47 PM IST

ಚೀನಾದ ವುಹಾನ್‌ನಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ವಿಶ್ವದ ಇನ್ನೂರು ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಇಟಲಿ, ಸ್ಪೇನ್, ಅಮೆರಿಕಾ ಹಾಗೂ ಇರಾನ್‌ನಲ್ಲಿ ಕೊರೋನಾ ತಾಂಡವಕ್ಕೆ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗಿರುವಾಗ ಕೊರೋನಾದಿಂದ ರಕ್ಷಿಸಿಕೊಳ್ಳಲು ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಹಾಗಾದ್ರೆ ಯಾವ ಮಾಸ್ಕ್ ಬೆಸ್ಟ್? ಯಾವುದನ್ನು ಮುಖಕ್ಕೆ ಹಾಕಿಕೊಂಡರೆ ಕಡಿಮೆ ಅಪಾಯ? ಇಲ್ಲಿದೆ ಸಂಪೂರ್ಣ ವಿವರ

ಎನ್‌95- ಅತಿ ಹೆಚ್ಚು ಸುರಕ್ಷಿತ ವೈರಸ್‌-95%, ಬ್ಯಾಕ್ಟೀರಿಯಾ-100%, ಧೂಳು-100% , ಪರಾಗ ಕಣ-100% ಹೀಗೆ ಎಲ್ಲಾ ರೀತಿಯಲ್ಲಿ ಇದು ಸುರಕ್ಷಿತವಾಗಿಡುತ್ತದೆ.
ಸರ್ಜಿಕಲ್‌ ಮಾಸ್ಕ್‌: ವೈದ್ಯಕೀಯ ಬಳಕೆಗೆ| ವೈರಸ್‌-95% , ಬ್ಯಾಕ್ಟೀರಿಯಾ-80%, ಧೂಳು-80%, ಪರಾಗ ರೇಣು -80%: ರಕ್ಷಣೆ ಒದಗಿಸುವ ವಿಚಾರದಲ್ಲಿ ಇದು ಎರಡನೇ ಸ್ಥಾನದಲ್ಲಿದೆ.
Tap to resize

ಎಫ್‌ಎಫ್‌ಪಿ1 ಮಾಸ್ಕ್‌| ವೈರಸ್‌-95% , ಬ್ಯಾಕ್ಟೀರಿಯಾ-80%, ಧೂಳು-80%, ಪರಾಗ ರೇಣು-80%: ಇದು ಮೂರನೇ ಸ್ಥಾನದಲ್ಲಿದ್ದು, ಅಪಾಯವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತದೆ.
ಆ್ಯಕ್ಟಿವ್‌ ಕಾರ್ಬನ್‌, ವಾಸನೆ ನಿಯಂತ್ರಣಕ್ಕೆ | ವೈರಸ್‌-10%, ಬ್ಯಾಕ್ಟೀರಿಯಾ-50%, ಧೂಳು-50%, ಪರಾಗ ಕಣ-50%: ಇದು ವಾಸನೆ ನಿಯಂತ್ರಣಕ್ಕೆ ಅತಿ ಸೂಕ್ತ, ಮಾರಕ ವೈರಸ್‌ಗಳಿಂದ ರಕ್ಷಣೆ ಸಿಗುವುದು ಬಲು ಕಷ್ಟ
ಬಟ್ಟೆಯ ಮಾಸ್ಕ್‌ ಡೈಯಿಂಗ್‌ ಕೆಲಸಕ್ಕೆ| ವೈರಸ್‌-0%, ಬ್ಯಾಕ್ಟೀರಿಯಾ-50%, ಧೂಳು-50%, ಪರಾಗ ರೇಣು-50% : ಇದು ಧೂಳೊರೆಸುವ ಕೆಲಸಕ್ಕೆ ಸೂಕ್ತ. ಧೂಳು ಮೊದಲಾದುವನ್ನು ತಡೆಯುತ್ತದೆಯಾದರೂ, ವೈರಸ್‌ ನಿಯಂತ್ರಣ ಅಸಾಧ್ಯ
ಸ್ಪಾಂಜ್‌ ಮಾಸ್ಕ್‌, ಫ್ಯಾಷನ್‌ಗಾಗಿ: ವೈರಸ್‌-00%, ಬ್ಯಾಕ್ಟೀರಿಯಾ-05%, ಧೂಳು-05%, ಪರಾಗ ರೇಣು-05%: ಈ ಮಾಸ್ಕ್ ಧರಿಸುವುದಕ್ಕಿಂತ ಸುಮ್ಮನಿದ್ದರೇ ಒಳಿತು. ಕೇವಲ ಫ್ಯಾಷನ್‌ಗಾಗಿ ಇದನ್ನು ಬಳಸಬಹುದಷ್ಟೇ. ಧೂಳನ್ನೂ ತಡೆಯಲು ಕೂಡಾ ಇದರಿಂದ ಅಸಾಧ್ಯ.
ಕೊರೋನಾ ವೈರಸ್‌ ಭೀತಿ ಹೆಚ್ಚಾಗಿದಾಗಿನಿಂದ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಈ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ನಕಲಿ ಮಾಸ್ಕ್‌ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ಗುಣಮಟ್ಟದಿಂದ ಕೂಡಿವೆಯೇ ಅಥವಾ ಕಳಪೆಯೇ ಎಂಬುದನ್ನು ಕಾಮನ್‌ ಸೆನ್ಸ್‌ ಮೂಲಕ ಪತ್ತೆಹಚ್ಚಬಹುದು. ಸರ್ಜಿಕಲ್‌ ಮಾಸ್ಕ್‌ಗಳು ಮೆಡಿಕಲ್‌ ಸ್ಟೋರ್‌ಗಳಲ್ಲಿ ದೊರೆಯುತ್ತವೆ ಮತ್ತು 3 ಲೇಯರ್‌ ಹೊಂದಿರುತ್ತವೆ.
ಕೊರೋನಾ ವೈರಸ್‌ ಭೀತಿ ಹೆಚ್ಚಾಗಿದಾಗಿನಿಂದ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಈ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ನಕಲಿ ಮಾಸ್ಕ್‌ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ಗುಣಮಟ್ಟದಿಂದ ಕೂಡಿವೆಯೇ ಅಥವಾ ಕಳಪೆಯೇ ಎಂಬುದನ್ನು ಕಾಮನ್‌ ಸೆನ್ಸ್‌ ಮೂಲಕ ಪತ್ತೆಹಚ್ಚಬಹುದು. ಸರ್ಜಿಕಲ್‌ ಮಾಸ್ಕ್‌ಗಳು ಮೆಡಿಕಲ್‌ ಸ್ಟೋರ್‌ಗಳಲ್ಲಿ ದೊರೆಯುತ್ತವೆ ಮತ್ತು 3 ಲೇಯರ್‌ ಹೊಂದಿರುತ್ತವೆ.
ಇನ್ನು ಎನ್‌95 ಅಥವಾ ಎಫ್‌ಎಫ್‌ಪಿ1 ಮಾಸ್ಕ್‌ಗಳ ಮೇಲೆ ಕೇವಲ ಎನ್‌95 ಅಥವಾ ಎಫ್‌ಎಫ್‌ಪಿ1 ಎಂದು ಬರೆದಿದ್ದರೆ ಸಾಲದು, ಅದರ ಜೊತೆಗೆ ಟಿಸಿ ಅಪ್ರೂವಲ್‌ ನಂಬರ್‌, ಮಾಡೆಲ್‌ ನಂಬರ್‌, ಲಾಟ್‌ ನಂಬರ್‌, NಐOಖಏ ಎಂಬ ಹೆಸರು ಅಥವಾ ಲೋಗೋ ಮುಂತಾದವು ಇರುತ್ತವೆ. ಆಯಾ ಮಾಸ್ಕ್‌ ತಯಾರಕ ಕಂಪನಿಯ ವೆಬ್‌ಸೈಟಿಗೆ ಹೋದರೆ ಮಾಸ್ಕ್‌ನ ಪೂರ್ಣ ವಿವರ ಹಾಗೂ ಪರವಾನಗಿ ಸಂಖ್ಯೆ ಇತ್ಯಾದಿಗಳು ಸಿಗುತ್ತವೆ.

Latest Videos

click me!