ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ತಂಗಶ್ಶೇರಿ ಬೀಚ್ಗೆ ಭೇಟಿ ಕೊಟ್ಟ ಸಂದರ್ಭ ಕಡಲಿಗೆ ಹಾರಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮುಂದಿನ ಎಸೆಂಬ್ಲಿ ಚುನಾವಣೆಗೆ ಕ್ಯಾಂಪೇನ್ ಮಾಡಲು ಭೇಟಿ ಕೊಟ್ಟಾಗ ಬೀಚ್ಗೆ ಭೇಟಿ ನೀಡಿದ್ದಾರೆ.
ದಡಕ್ಕೆ ಬರುವ ಮುನ್ನ ರಾಹುಲ್ ಗಾಂಧಿ 10 ನಿಮಿಷಗಳ ಕಾಲ ಸಮುದ್ರದಲ್ಲಿ ಈಜಾಡಿದ್ದಾರೆ.
ಬಲೆಗೆ ಬಿದ್ದ ಮೀನು ಹಿಡಿಯಲು ಮೀನುಗಾರರು ಸಮುದ್ರಕ್ಕೆ ಹಾರಿದಾಗ ರಾಹುಲ್ ಗಾಂಧಿಯೂ ಬೋಟ್ನಿಂದ ಸಮುದ್ರಕ್ಕೆ ಹಾರಿದ್ದಾರೆ.
ಅವರು ನಮಗೆ ಹೇಳದೆ ನೀರಿಗೆ ಹಾರಿದರು. ನಮಗೆ ಅಚ್ಚರಿಯಾಯ್ತು, ಆದರೆ ಅವರು ಕೂಲಾಗಿದ್ದರು ಎಂದಿದ್ದಾರೆ ಜೊತೆಗಿದ್ದ ಕಾರ್ಯಕರ್ತರು.
ಸಮುದ್ರದಲ್ಲಿ 10 ನಿಮಿಷಗಳ ಕಾಲ ಈಜಿದ್ದಾರೆ. ಅವರು ಈಜುವುದರಲ್ಲಿ ಎಕ್ಸ್ಪರ್ಟ್ ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಸಮುದ್ರಕ್ಕೆ ಹಾರಿದಾಗ ತಮ್ಮ ಬಟ್ಟೆ ಬದಲಾಯಿಸಿರಲಿಲ್ಲ. ನೀಲ ಟೀಶರ್ಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದರು.
ಸುಮಾರು ಎರಡೂವರೆ ಗಂಟೆಗಳ ಕಾಲ ರಾಹುಲ್ ಗಾಂಧಿ ಸಮುದ್ರ ತೀರದಲ್ಲಿ ಸಮಯ ಕಳೆದಿದ್ದಾರೆ.
ಎಲೆಕ್ಷನ್ ಕ್ಯಾಂಪೇನ್ ಸಂದರ್ಭ ಮೀನುಗಾರರ ಬೇಡಿಕೆ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ