ಚೀನಾ ಗಡಿ ಖ್ಯಾತೆ: ಬೆಳ್ಳಂಬೆಳಗ್ಗೆ ಲಡಾಖ್‌ಗೆ ಬಂದಿಳಿದ ಪ್ರಧಾನಿ ಮೋದಿ..!

First Published | Jul 3, 2020, 11:55 AM IST

ಮುಖ್ಯ ಸೇನಾ ಅಧಿಕಾರಿ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವನೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜು.03ರಂದು ಲೆಹ್‌ಗೆ ಬಂದಿಳಿದಿದ್ದಾರೆ. ಇಲ್ಲಿವೆ ಫೋಟೋಸ್

ಮೇ ಆರಂಭದಿಂದಲೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪಡೆಗಳೊಂದಿಗೆ ವಿವಾದ ನಡೆಯುತ್ತಿರುವ ಕೇಂದ್ರಬಿಂದುವಾಗಿರುವ ಯೂನಿಯನ್ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದಾರೆ.
undefined
ಆರಂಭದಲ್ಲಿ ಮುಖ್ಯ ಸೇನಾ ಅಧಿಕಾರಿ ಜನರಲ್ ಬಿಪಿನ್ ರಾವತ್ ಅವರು ಪರಿಸ್ಥಿತಿ ತಿಳಿದುಕೊಳ್ಳಲು ಲಾಡಾಖ್‌ಗೆ ಭೇಟಿ ನೀಡುತ್ತಾರೆ ಎನ್ನಲಾಗಿತ್ತು. ವಿಮಾನದಿಂದ ಪ್ರಧಾನಿ ಮೋದಿ ಇಳಿದಾಗಲೇ ಅವರು ಭೇಟಿ ಕೊಟ್ಟಿರುವ ಸುದ್ದಿ ಬಹಿರಂಗವಾಗಿದೆ.
undefined

Latest Videos


ಪ್ರಧಾನಿ ಮೋದಿ ಗಡಿ ಪ್ರದೇಶಕ್ಕೆ ಭೇಟಿ ನೀಡಿರುವುದು ಲಡಾಖ್‌ನ ಗಲ್ವಾನ್ ಕಣಿವೆ ಹಾಗೂ ಪನ್‌ಗಾಂಗ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಗೆ ಇನ್ನಷ್ಟು ಉತ್ಸಾಹ ತುಂಬಲಿದೆ.
undefined
ಲೆಹ್ ಸಮೀಪ ಆರ್ಮಿ ಹೆಡ್ ಕ್ವಾರ್ಟರ್ಸ್‌ನಲ್ಲಿ ಪ್ರಧಾನಿ ಮೋದಿ ಭೇಟಿ ಬಗ್ಗೆ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಹಾಗೂ 14 ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮಾತನಾಡಿದ್ದಾರೆ.
undefined
ಝನ್ಸ್‌ಕರ್ ಶ್ರೇಣಿ ಹಾಗು ಸಿಂಧೂ ನದಿ ತೀರದ ಮಧ್ಯವಿರುವ ಈ ಪ್ರದೇಶ 11000 ಫೀಟ್ ಎತ್ತರದಲ್ಲಿದೆ.ಜೂ.15ರಂದು ನಡೆದ ದಾಳಿಯಲ್ಲಿ ಗಾಯಗೊಂಡ 15 ಸೈನಿಕರನ್ನು ಪ್ರಧಾನಿ ಭೇಟಿಯಾಗಲಿದ್ದು, ಲೇಹ್ ಸಮೀಪ ಥಿಕ್ಸೆಯಲ್ಲಿ ಯೋಧರೊಂದಿಗೆ ಮಾತನಾಡಲಿದ್ದಾರೆ.
undefined
click me!