70 ವರ್ಷವಾದರೂ ಮಾಸದ ಜೀನತ್‌ ಅಮನ್‌ ಚಾರ್ಮ್‌: ನಟಿಯ ಪೋಟೋ ವೈರಲ್‌!

Published : Nov 09, 2022, 03:29 PM IST

ಜೀನತ್ ಅಮನ್ (Zeenat Aman) ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಈಗ ಜೀನತ್ ಅಮಾನ್ ಅವರು ರಿಯಾಲಿಟಿ ಶೋ, ಸ್ವಯಂವರ್: ಮಿಕಾ ದಿ ವೋಹ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಆಕಾಂಕ್ಷಾ ಪುರಿ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಅವರ ಇತ್ತೀಚಿನ ಚಿತ್ರೀಕರಣದ ಚಿತ್ರ ವೈರಲ್ ಆಗಿದೆ ಮತ್ತು ಅವರ ಫ್ಯಾನ್ಸ್‌ ನಟಿಯ ಫೋಟೋ ನೋಡಿ ಫುಲ್‌ ಫಿದಾ ಆಗಿ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ.

PREV
17
70 ವರ್ಷವಾದರೂ ಮಾಸದ ಜೀನತ್‌ ಅಮನ್‌ ಚಾರ್ಮ್‌: ನಟಿಯ ಪೋಟೋ ವೈರಲ್‌!

ನಟಿ ಆಕಾಂಕ್ಷಾ ಪುರಿ ಅವರು ಹಿರಿಯ ನಟಿ ಜೀನತ್ ಅಮನ್ ಅವರ ಜೊತೆಯ ಫೋಟೋವನ್ನು ತಮ್ಮ Instagram ಹ್ಯಾಂಡಲ್‌ಗೆ  ಹಂಚಿಕೊಂಡಿದ್ದಾರೆ. ಜೀನತ್ ಅಮಾನ್ ಹಿಂದೆ ನಿಂತಿರುವ ಎರಡು ಫೋಟೋಗಳನ್ನು ಆಕಾಂಕ್ಷಾ  ಪೋಸ್ಟ್‌ ಮಾಡಿದ್ದಾರೆ. 

27

'ಸಾರ್ವಕಾಲಿಕ ಅತ್ಯಂತ ಸುಂದರ, ಆಕರ್ಷಕ ಮತ್ತು ವರ್ಚಸ್ವಿ ವ್ಯಕ್ತಿಯೊಂದಿಗೆ ಪರದೆಯನ್ನು ಹಂಚಿಕೊಳ್ಳವುದು ಆಶಿರ್ವಾದ. ನಿಮ್ಮ ಎವರ್‌ಗ್ರೀನ್‌ ಸೌಂದರ್ಯದಿಂದ ಸಂಪೂರ್ಣವಾಗಿ ಮಂತ್ರಮುಗ್ಧವಾಗಿದ್ದೇನೆ  ಜೀನತ್ ಅಮನ್ ಮಾಮ್' ಎಂದು ಆಕಾಂಕ್ಷಾ ಪುರಿ ಕ್ಯಾಪ್ಷನ್‌ ನೀಡಿದ್ದಾರೆ

37

ಈ ಫೋಟೋ ಚಿತ್ರೀಕರಣದ ಸಮಯದಾಗಿದೆ. ಇದರಲ್ಲಿ , ಜೀನತ್ ಕಪ್ಪು ಸನ್‌ ಗ್ಲಾಸ್‌ ಜೊತೆ ಸಿಲ್ವರ್‌ ಮತ್ತು ಬಿಳಿ ಕಲರ್‌ ಬಟ್ಟೆಯನ್ನು ಧರಿಸಿದ್ದರು. ಅವರು ಮುತ್ತಿನ ಹಾರಗಳನ್ನು ಧರಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ವೈರಲ್‌ ಆಗಿದೆ ಮತ್ತು  ಅಭಿಮಾನಿಗಳು ಪೋಸ್ಟ್‌ಗೆ ಬಾರೀ ಸಂಖ್ಯೆಯಲ್ಲಿ  ಪ್ರತಿಕ್ರಿಯಿಸಿದ್ದಾರೆ.  

47

'ಇದನ್ನು ಅಮೂಲ್ಯ ನೋಟ ಎಂದು ಕರೆಯಲಾಗುತ್ತದೆ' ಎಂದು ಒಬ್ಬ ಬಳಕೆದಾರ ಬರೆದರೆ,  'ತುಂಬಾ ಸುಂದರ' ಎಂದು ಇನ್ನೊಬ್ಬರು ಬರೆದಿದ್ದಾರೆ. ಹಿರಿಯ ನಟಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಅಭಿಮಾನಿಗಳು ಬೆಂಕಿ ಮತ್ತು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ

57

'ಸಾರ್ವಕಾಲಿಕ ನೆಚ್ಚಿನ ದಿವಾ' ಜೀನತ್ ಅಮನ್ ಅವರ ಇತ್ತೀಚಿನ ಫೋಟೋಗಳು ಅಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಅನೇಕರು ಹಿರಿಯ ನಟಿಯನ್ನು ಆಕೆಯ ನೋಟಕ್ಕಾಗಿ ಹೊಗಳಿದರು ಮತ್ತು ಅವರನ್ನು   ಎವರ್ಗ್ರೀನ್, ಆಕರ್ಷಕ' ಮತ್ತು 'ಸುಂದರ' ಎಂದು ಕರೆದರು.  

67

ಮಾಜಿ ಮಿಸ್ ಇಂಡಿಯಾ ಕ್ವೀನ್ ಮತ್ತು ಲೆಜೆಂಡರಿ ನಟಿ ಜೀನತ್ ಅಮಾನ್ 70 ರ ದಶಕದಿಂದಲೂ ಮನರಂಜನಾ ಉದ್ಯಮವನ್ನು ಆಳುತ್ತಿದ್ದಾರೆ. ಜೀನತ್ ಅಮನ್ 1971 ರ ಹುಲ್ಚುಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 

77

ಅವರು ಕೊನೆಯದಾಗಿ 2019 ರಲ್ಲಿ ಅಶುತೋಷ್ ಗೋವಾರಿಕರ್ ಅವರ ಪ್ರಿಯರ್ಡ್‌ ಡ್ರಾಮಾ ಪಾಣಿಪತ್‌ನಲ್ಲಿ ಕಾಣಿಸಿಕೊಂಡರು ಮತ್ತು ಇತ್ತೀಚೆಗೆ ಎರಡು ವೆಬ್ ಸರಣಿಗಳಲ್ಲಿ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories