ತಮ್ಮನ ಮದುವೆಗೆ ಸಿನಿಮಾ ಇಂಡಸ್ಟ್ರಿಯಿಂದ ಒಬ್ಬರೇ ಸ್ಟಾರ್ ಹೀರೋನ ಕರೆದಿದ್ರು ಸೌಂದರ್ಯ. ಅವರು ಯಾರು ಅಂತೀರಾ? ವಿಕ್ಟರಿ ವೆಂಕಟೇಶ್. ವೆಂಕಟೇಶ್ ಮಾತ್ರ ಸೌಂದರ್ಯ ತಮ್ಮನ ಮದುವೆಗೆ ಬಂದಿದ್ರು. ಮದುವೆ ಜೋಡಿಗೆ ಆಶೀರ್ವಾದ ಮಾಡಿದ್ರು. ಸೌಂದರ್ಯ, ವೆಂಕಟೇಶ್ ಜೊತೆಯಾಗಿ ಸಾಕಷ್ಟು ಸಿನಿಮಾ ಮಾಡಿದ್ರು. ಸುಮಾರು ಎಂಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ರು. ಅದ್ರಲ್ಲಿ `ರಾಜ`, `ಪವಿತ್ರ ಬಂಧನ`, `ಇಂಟ್ಲೋ ಇಲ್ಲಾಳು ವಂಟಿಂಟ್ಲೋ ಪ್ರಿಯುರಾಲು`, `ಜಯಂ ಮನದೇರ`, `ದೇವಿಪುತ್ರುಡು`, `ನಿನ್ನೇ ಪ್ರೇಮಿಸ್ತ`, `ಪೆಳ್ಳಿ ಚೇಸುಕೊಂಡಮ್` ಇದಾವೆ. ಇದ್ರಲ್ಲಿ ಒಂದು ಎರಡು ಬಿಟ್ಟರೆ ಉಳಿದವು ಸೂಪರ್ ಹಿಟ್ ಆಗಿದ್ವು. ಹಾಗಾಗಿ ವೆಂಕಿ, ಸೌಂದರ್ಯ ಹಿಟ್ ಜೋಡಿ ಅಂತ ಫೇಮಸ್ ಆಗಿದ್ರು.