ಪವರ್ ಸ್ಟಾರ್ ಪವನ್ ಕಲ್ಯಾಣ್ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ತಮ್ಮ ನಟನಾ ಜೀವನ ಆರಂಭಿಸಿದರು. ತೊಲಿಪ್ರೇಮ ಚಿತ್ರದಿಂದ ಪವನ್‌ಗೆ ಯುವಜನರಲ್ಲಿ ಕ್ರೇಜ್ ಹೆಚ್ಚಾಯಿತು. ನಂತರ ಪವನ್ ಬದ್ರಿ, ತಮ್ಮುಡು ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಖುಷಿ ಸಿನಿಮಾದಿಂದ ಪವನ್ ಕಲ್ಯಾಣ್ ಟಾಲಿವುಡ್‌ನಲ್ಲಿ ಅಜೇಯ ತಾರೆಯಾಗಿ ಹೊರಹೊಮ್ಮಿದರು. ಆಗ ಬಾಕ್ಸ್ ಆಫೀಸ್‌ನಲ್ಲಿ ಖುಷಿ ಚಿತ್ರ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ.