ದೀಪಿಕಾ ಅಥವಾ ಕತ್ರಿನಾ ಯಾರು ಹೆಚ್ಚು beautiful? ರಣಬೀರ್‌ಗೆ ಕೇಳಿದಾಗ!

First Published | Sep 11, 2021, 11:19 AM IST

ಬಾಲಿವುಡ್‌ ದಿವಾ ಕತ್ರಿನಾ ಕೈಫ್ ಮತ್ತು  ದೀಪಿಕಾ ಪಡುಕೋಣೆ ಇಬ್ಬರೂ ರಣಬೀರ್‌ ಕಪೂರ್‌ರ ಎಕ್ಸ್‌ ಗರ್ಲ್‌ಫ್ರೆಂಡ್ಸ್. ಕತ್ರಿನಾ ಕೈಫ್ ಅಥವಾ ದೀಪಿಕಾ ಪಡುಕೋಣೆ.ಯಾರು ಹೆಚ್ಚು ಸುಂದರ ಎಂದು ರಣಬೀರ್ ಕಪೂರ್ ಅವರನ್ನು ಕೇಳಿಲಾಯಿತು. ಇದಕ್ಕೆ ನಟನ ಉತ್ತರ ಏನಾಗಿತ್ತು? ನೋಡಿ ಇಲ್ಲಿದೆ.  

 ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ನಡುವಿನ ಟ್ರೈಯಾಂಗಲ್‌ ಲವ್‌ ಯಾವಾಗಲೂ ಅವರ ಅಭಿಮಾನಿಗಳಿಗೆ ಆಸಕ್ತಿದಾಯಕ ವಿಷಯ. ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದಾಗ  ಕತ್ರಿನಾ ಕೈಫ್‌ ಹಿಂದೆ ಹೋಗಿ ದೀಪಿಕಾಗೆ ಮೋಸ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 

ಈ ಕಾರಣದಿಂದ ಇಬ್ಬರ ನಡುವಿನ ಸಂಬಂಧ ತುಂಬಾ ಕೆಟ್ಟದಾಗಿ ಕೊನೆಯಾಯಿತು ಮತ್ತು ನಂತರ, ರಣಬೀರ್ ಕತ್ರಿನಾ ಜೊತೆ ಡೇಟಿಂಗ್ ಮಾಡಲು ಆರಂಭಿಸಿದರು. ಇವರಿಬ್ಬರ ನಡುವಿನ ಪ್ರೀತಿ ಜೊತೆಯಲ್ಲಿ ಚಿತ್ರೀಕರಣ ಮಾಡುವಾಗ ಅರಳಿತು. 

Tap to resize

<

ಹಿಂದೊಮ್ಮೆ ದೀಪಿಕಾ ಮತ್ತು ಕೈಫ್‌ ಇಬ್ಬರಲ್ಲಿ ಯಾರು ಹೆಚ್ಚು ಸುಂದರ ಎಂದು ರಣಬೀರ್ ಕಪೂರ್‌ ಅವರನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ನಟ ಏನು ಉತ್ತರಿಸಿದ್ದರು ನೋಡೋಣ .
 

ಕಸಿನ್‌ ಕರೀನಾ ಕಪೂರ್ ಜೊತೆ ರಣಬೀರ್ ಕಾಫಿ ವಿಥ್ ಕರಣ್ ಚಾಟ್‌ ಶೋನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದ ನಿರೂಪಕರಾದ ಕರಣ್ ಜೋಹರ್ ಜೊತೆ ಈ ಜೋಡಿ ತಮಾಷೆಯ ಸಂಭಾಷಣೆಯಲ್ಲಿ ತೊಡಗಿತು. 

ರಾಪಿಡ್‌ ಫೈರ್‌ ರೌಂಡ್‌ನಲ್ಲಿ ಕರಣ್ ಜೋಹರ್ ರಣಬೀರ್ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್  ಯಾರು ಹೆಚ್ಚು ಸುಂದರ ನಟಿ ಎಂದು ಯೋಚಿಸುತ್ತಾರೆ ಎಂದು ಕೇಳಿದರು .

ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಯಾರು ಹೆಚ್ಚು ಸುಂದರ ಎಂದು ರಣಬೀರ್ ಕಪೂರ್ ಅವರನ್ನು ಕೇಳಿದಾಗ ನಟ ಸ್ವಲ್ಪ ಸಹ ಸಮಯ ತೆಗೆದುಕೊಳ್ಳಲಿಲ್ಲ ಮತ್ತು ವೇಗವಾಗಿ ಉತ್ತರಿಸಿದರು. 

ರಣಬೀರ್ ಕಪೂರ್ ಕತ್ರಿನಾ ಕೈಫ್ ಎಂದು ಹೇಳಿದರು. ಆ ಸಮಯದಲ್ಲಿ ರಣಬೀರ್ ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ನಂತರ ಇಬ್ಬರೂ ಅದನ್ನು ಬ್ರೇಕಪ್‌ ಆದರು.

ರಣಬೀರ್ ಪ್ರಸ್ತುತ ಆಲಿಯಾ ಭಟ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಈ ವರ್ಷದ ಕೊನೆಯಲ್ಲಿ ಅವರಿಬ್ಬರು ಮದುವೆಯಾಗುವ ಪ್ಲಾನ್‌ ಹೊಂದಿದ್ದಾರೆ. ಕತ್ರಿನಾ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನೂ ದೀಪಿಕಾ ಪಡುಕೋಣೆ ಅವರು ರಣವೀರ್ ಸಿಂಗ್ ಜೊತೆ ಮದುವೆಯಾಗಿ ಸಂತೋಷದಿಂದದ್ದಾರೆ.
 

Latest Videos

click me!