ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

First Published | Jun 25, 2020, 7:15 PM IST

ದಕ್ಷಿಣ ಭಾರತೀಯ ಸುಂದರಿ ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯ, ಅದ್ಭುತ ನಟನೆ ಮತ್ತು ಡ್ಯಾನ್ಸ್‌ ಮೂಲಕ ಫುಲ್‌ ಫೇಮಸ್‌. ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ. ಮೇಕಪ್‌ಗೆ ಯಾವಾಗಲೂ ನೋ ಅನ್ನುವ ಇವರದ್ದು ನ್ಯಾಚರಲ್‌ ಬ್ಯೂಟಿ. ತೆಳ್ಳನೆಯ ಬಟ್ಟೆಗಳನ್ನು ಧರಿಸುವುದಿಲ್ಲ ಅಥವಾ ಅತಿಯಾದ ಇಂಟಿಮೇಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲದ ನಟಿಯರಲ್ಲಿ ಒಬ್ಬರು ಸಾಯಿ ಪಲ್ಲವಿ. ಸಿನಿಮಾದಲ್ಲಿ ದೇಹ ಪ್ರದರ್ಶನಕ್ಕೆ ನಿರ್ದೇಶಕರು ಕೇಳಿದಾಗ, ಈ ನಟಿ ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ.

ಸಾಯಿಪಲ್ಲವಿ ಮೇಕಪ್‌ಗೆ ಮಾತ್ರವಲ್ಲ, ಎಕ್ಸ್‌ಪೋಸ್‌ಗೂ ನೋ ಎನ್ನುವ ನಟಿ.
ಸಿನಿಮಾದಲ್ಲಿ ಮೈ ಕಾಣುವ ಡ್ರೆಸ್‌ ತೊಡಲು ಒಪ್ಪುವುದೇ ಇಲ್ಲ ಈ ದಕ್ಷಿಣ ಭಾರತದ ಖಡಕ್ ನಟಿ.
Tap to resize

ಗ್ಲ್ಯಾಮರಸ್‌ ಅಲ್ಲದ ಅವತಾರಗಳಲ್ಲಿ ಸಾಯಿ ಪಲ್ಲವಿ ಸರಳ ಹುಡುಗಿಯ ಪಾತ್ರಗಳನ್ನು ನಿರ್ವಹಿಸುತ್ತಿರುವುದು ಕಂಡುಬಂದಿದೆ,
ಸಮಕಾಲೀನರು ಎಕ್ಸ್‌ಪೋಸ್‌ ಮಾಡಲು ಹಿಂಜರಿಯದ ಕಾಲದಲ್ಲಿ ತೆಳ್ಳನೆಬಟ್ಟೆಗಳನ್ನು ಧರಿಸದೆ ಅಥವಾ ಅತಿಯಾದ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರದ ನಟಿ ಅಂದರೆ ಸಾಯಿ ಪಲ್ಲವಿ.
TOIಗೆ ನೀಡಿದ ಸಂದರ್ಶನದಲ್ಲಿ, ಸಾಯಿ ತಾನು ಎಂದಿಗೂ ಅನ್‌ಕಂಫರ್ಟ್‌ಬಲ್‌ ಎನ್ನಿಸುವ ಮೈ ಕಾಣುವ ಬಟ್ಟೆಗಳನ್ನು ಧರಿಸುವುದಿಲ್ಲ ಮತ್ತು ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ನೀಡುವ ಪಾತ್ರಗಳಿಗೆಅಂಟಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 'ನಾನು ತೋಳಿಲ್ಲದ ಬಟ್ಟೆಗಳನ್ನು ಧರಿಸಲೂ ಇಷ್ಟಪಡುವುದಿಲ್ಲ' ಎಂದಿದ್ದಾರೆ.
ಫಿದಾ ಸಿನಿಮಾದಲ್ಲಿ, ಡಿಸೈನರ್ ದಾವಣಿ ಲಂಗ, ಸೀರೆಗಳು ಮತ್ತು ಕ್ಯಾಶುಯಲ್ ಉಡುಗೆಗಳನ್ನು ಧರಿಸಿ, ನಟಿಯ ಪಕ್ಕದ ಮನೆ ಹುಡುಗಿ ಫೀಲ್‌ ನೀಡುತ್ತಾರೆ.
ನಿರ್ದೇಶಕ ಶೇಖರ್ ಕಮ್ಮುಲಾರ ಒತ್ತಾಯದ ಮೇರೆಗೆ ತಾನು ಇಷ್ಟವಿಲ್ಲದೆ ಕಪ್ಪು ಸ್ಲೀವ್‌ಲೆಸ್‌ ಡ್ರೆಸ್‌ ಧರಿಸಿದ್ದೆ ಎಂದು ಪಲ್ಲವಿ ಹೇಳಿದ್ದಾರೆ. ನಂತರ ಅಂತಹ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಧರಿಸುವುದಿಲ್ಲ ಎಂದುಸ್ಪಷ್ಟಪಡಿಸಿದೆ ಎಂದು ಹೇಳಿದ್ದರು ಪ್ರೇಮಂ ನಟಿ.
'ಜನರು ಹೀರೊಯಿನ್‌ರನ್ನು ಮನಮೋಹಕವಾಗಿ ಚಿತ್ರಿಸಿದಾಗ ವಿಭಿನ್ನವಾಗಿ ನೋಡುತ್ತಾರೆ. ಅದು ನನ್ನೊಂದಿಗೆ ಆಗಬೇಕೆಂದು ನಾನು ಬಯಸುವುದಿಲ್ಲ. ಕಾಲೇಜು ಹುಡುಗಿಯರು ಸಾಮಾನ್ಯವಾಗಿ ಧರಿಸುವ ಕ್ಯಾಶುಯಲ್ ಬಟ್ಟೆಗಳನ್ನು ಧರಿಸಿ ನಾನು ಸಂತೋಷವಾಗಿರುತ್ತೇನೆ,' ಎಂದು ಅವರು ಪ್ರತಿಪಾದಿಸಿದರು.
ಸಿನಿಮಾದ ರೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸದ ಸಾಯಿಯ ನಿರ್ಧಾರವನ್ನು ಇದು ಇನ್ನು ದೃಢಪಡಿಸುತ್ತದೆ. ಯಾವಾಗಲೂ ತನ್ನ ಪ್ರಿನ್ಸಿಪಲ್‌ಗಳಿಗೆ ಅನುಗುಣವಾಗಿ ಕೆಲಸ ಮಾಡಲು ಬಯಸುತ್ತಾರೆ ಪಲ್ಲವಿ.

Latest Videos

click me!