ಶಾರುಖ್‌ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗೌರಿ ಹೇಳಿದ್ದೇನು?

First Published Jul 7, 2020, 6:59 PM IST

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಬಾಲಿವುಡ್‌ನ ಲವಿಂಗ್‌ ಕಪಲ್‌. ಗೌರಿ ಹಿಂದೂ ಹಾಗೂ ಶಾರುಖ್‌ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ, ಎಂಬುದು ಸಂತೋಷದ ವಿಷಯ. ಈ ಜೋಡಿಯ ಪ್ರೀತಿ ಹಾಗೂ ವೈವಾಹಿಕ ಜೀವನ ಹಲವರಿಗೆ ಸ್ಪೂರ್ತಿ. ಗೌರಿ ಖಾನ್ ಪತಿ ಶಾರುಖ್ ಖಾನ್ ಧರ್ಮದ ಕುರಿತು ಮಾತನಾಡುವಾಗ 'ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ, ಆದರೆ ಇದರರ್ಥ ನಾನು ಮತಾಂತರಗೊಳ್ಳುತ್ತೇನೆ ಎಂದರ್ಥವಲ್ಲ' ಎಂದು ಹೇಳಿದ್ದರು.

ಪತಿಯ ಮುಸ್ಲಿಂ ಧರ್ಮ ಹಾಗೂ ಮಕ್ಕಳು ಆನುಸರಿಸುವ ಧರ್ಮದ ಬಗ್ಗೆ ಗೌರಿಯನ್ವು ಒಮ್ಮೆ ಕೇಳಲಾಗಿತ್ತು.
undefined
ಶಾರುಖ್ ಖಾನ್ ಕಿಂಗ್‌ ಅಫ್‌ ರೊಮ್ಯಾನ್ಸ್.ರೀಲ್ ಲೈಫ್‌ನಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ, ಅವರು ಭಾವಜೀವಿ.
undefined
ಗೌರಿ 1984ರಲ್ಲಿ ದೆಹಲಿಯಲ್ಲಿ ಖಾನ್‌ರನ್ನು ಮೊದಲ ಬಾರಿಗೆ ಭೇಟಿಯಾದರು.ನಂತರ ಕಪಲ್‌ 1991ರಲ್ಲಿ ಸಾಂಪ್ರದಾಯಿಕ ಹಿಂದೂ ಪದ್ಧತಿಯಂತೆ ವಿವಾಹವಾದರು. ಈಗ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂರು ಮಕ್ಕಳ ಹೆಮ್ಮೆಯ ಪೋಷಕರು.
undefined
ಮದ್ವೆ ನಂತರ ಗೌರಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವ ಸಂಬಂಧ ಸಂಬಂಧಿಕರು ಸಾಕಷ್ಟು ಮಾತನಾಡಿಕೊಂಡಿದ್ದರು.
undefined
ಪದೆ ಪದೇ ಧರ್ಮದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಗೌರಿ ರಗಳೆ ಮಾಡಿಕೊಳ್ಳುತ್ತಿದ್ದರು.
undefined
ತಮ್ಮ ತಮ್ಮ ಧರ್ಮದ ಪದ್ಧತಿಗಳನ್ನು ಆಚರಿಸುವ ಈ ಜೋಡಿ, ತಮ್ಮ ಮನೆಯ ಮುಂದೆ ಗಣೇಶನ ವಿಗ್ರಹವನ್ನೂ ಇಟ್ಟಿಕೊಂಡಿದ್ದಾರೆ.
undefined
ಗೌರಿ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ನಲ್ಲಿ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಾಗ, ಮುಸ್ಲಿಂನನ್ನು ವರಿಸಿದ ಸಂಬಂಧ ಎದುರಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದರು.
undefined
ನಾವಿಬ್ಬರೂ ತಮ್ಮಮ್ಮ ಧರ್ಮವನ್ನು ಗೌರವಿಸುತ್ತೇವೆ. ಹೋಳಿ, ದೀಪಾವಳಿಯನ್ನೂ ಮನೆಯಲ್ಲಿ ಆಚರಿಸುತ್ತೇವೆ. ಮಕ್ಕಳೂ ಎರಡು ಧರ್ಮವನ್ನು ಸಮಾನವಾಗಿ ಗೌರವಿಸುತ್ತಾರೆ. ಮುಸ್ಲಿಂ ಧರ್ವವನ್ನು ಗೌರವಿಸುತ್ತೇನೆ ಎಂದ ಮಾತ್ರಕ್ಕೆ, ಆ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆಂದರ್ಥವಲ್ಲ, ಎಂದು ಒಮ್ಮೆ ಹೇಳಿದ್ದರು ಗೌರಿ.
undefined
ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸ, ಗೌರವ ಮುಖ್ಯ. ನಾವು ನಮ್ಮಿಬ್ಬರ ಧರ್ಮಗಳನ್ನೂ ಗೌರವಿಸಿಕೊಳ್ಳುತ್ತೇವೆ. ಇಬ್ಬರ ನಡುವೆಯೂ ಗಾಢವಾದ ಪ್ರೀತಿ, ವಿಶ್ವಾಸವಿದೆ. ಇಷ್ಟಿದ್ದರೆ ಇನ್ನೇನು ಬೇಕು ಎಂದು ಕೇಳುತ್ತಾರೆ ಗೌರಿ.
undefined
click me!