ಬಾಲಿವುಡ್ ನಟಿ ನುಶ್ರಾತ್ ಭರುಚ್ಚಾ ಜನ್ಹಿತ್ ಮೇ ಜಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಜ್ ಶಾಂಡಿಲ್ಯ ಡೈರೆಕ್ಟ್ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಏಪ್ರಿಲ್‌ನಲ್ಲಿ ಶೆಡ್ಯೂಲ್ ಆಗಿದ್ದ ಈ ಸಿನಿಮಾದ ಶೂಟಿಂಗ್ ಅಗಸ್ಟ್‌ಗೆ ಮುಂದೂಡಲಾಗಿದೆ. ನಟಿಯ ಮುಂದಿನ ಈ ಪ್ರಾಜೆಕ್ಟ್ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುತ್ತದೆ. ಇದರಲ್ಲಿ ಅವರು ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಶ್ರಾತ್ ಅವರ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಬಾಲಿವುಡ್ ನಟಿ ನುಶ್ರಾತ್ ಭರುಚ್ಚಾ ರಾಜ್ ಶಾಂಡಿಲ್ಯ ಡೈರೆಕ್ಟ್ ಮಾಡುತ್ತಿರುವ ಜನ್ಹಿತ್ ಮೇ ಜಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

29
ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ, ಸುಶಿಕ್ಷಿತ ಮತ್ತು ಪ್ರಗತಿಪರ ಮಹಿಳೆ ಪಾತ್ರದಲ್ಲಿ ನಟಿಸುತ್ತಿದ್ದಾರೆ ನುಶ್ರಾತ್.

39
ಅವರು ತಮ್ಮ ಸ್ಟೀರಿಯೊಟೈಪ್ ಟಿಪಿಕಲ್ ಗ್ಲಾಮ್ ಪಾತ್ರಗಳಿಂದ ಹೊರಬಂದು, ವಿಶಿಷ್ಟವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಭರುಚ್ಚಾ ಅವರ ಹಿಂದಿನ ಚಿತ್ರಗಳಿಗಿಂತ ಈ ಪಾತ್ರ ಭಿನ್ನವಾಗಿದೆ.

49
ಹೆಣ್ಣೊಬ್ಬಳು ಕಾಂಡೋಮ್ ಸೇಲ್ಸ್ ಗರ್ಲ್ ಆಗಿ ಕಾಣಿಸಿಕೊಳ್ಳುವುದರೆಂದರೆ ಅಷ್ಟು ಸುಲಭದ ಪಾತ್ರ ಮತ್ತು ಕಥೆಯಲ್ಲವೆಂದು ಹೇಳಬಹುದು.

59
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ನುಶ್ರಾತ್ ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

69
ಸಣ್ಣದೊಂದು ಊರಿನಿಂದ ಬಂದು, ಪ್ರಖ್ಯಾತ ಕಂಪನಿಯ ಕಾಂಡೋಮ್ ಮಾರುವ ಯುವತಿಯ ಕಥೆಯುಳ್ಳ ಚಿತ್ರವಿದು.

79
ಕೆಲಸ ಹುಡುಕುತ್ತಿದ್ದ ಯುವತಿಯೊಬ್ಬಳು ಕಾಂಡೋಮ್ ಉತ್ಪಾದನಾ ಕಂಪನಿಯಲ್ಲಿ ಮಾರಾಟ ಮತ್ತು ಪ್ರಚಾರದ ಕಾರ್ಯನಿರ್ವಾಹಕರಾಗಿ ಸೇರಿಕೊಳ್ಳುತ್ತಾಳೆ ಎಂದು ನಿರ್ದೇಶಕ ರಾಜ್ ಶಾಂಡಿಲ್ಯ ಕೂಡ ಒಮ್ಮೆ ನುಶ್ರಾತ್ ಪಾತ್ರದ ಬಗ್ಗೆ ಮಾತಾನಾಡಿದ್ದರು .

89
'ಚಿತ್ರದಲ್ಲಿ, ನುಶ್ರಾತ್ ಮೆಡಿಕಲ್ ಸ್ಟೋರ್ಸ್‌ನಲ್ಲಿ ಕಾಂಡೋಮ್ಸ್ ಮಾರೋ ಜೊತೆ, ವಿವಿಧ ಪ್ರದೇಶಗಳಲ್ಲಿ ಆ ಪ್ರೊಡಕ್ಟ್‌ನ ಪ್ರಚಾರ ನಡೆಸುತ್ತಾರೆ. ಈ ಸಿನಿಮಾ ವೃತ್ತಿಯಿಂದಾಗಿ ವೈಯಕ್ತಿಕ ಜೀವನದಲ್ಲಿ ಎದುರಿಸುವ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಪಾತ್ರ ಮಹಿಳೆಗೆ ಅಪರೂಪವಾಗಿದೆ,' ಎಂದಿದ್ದಾರೆ ಶಾಂಡಿಲ್ಯ.

99
ಈ ಫಿಲ್ಮ್ ಚಂದೇರಿ ಮತ್ತು ಭೋಪಾಲ್‌ನಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಲಾಗಿದೆ ಹಾಗೂ ಸಿನಿಮಾಕ್ಕಾಗಿ ನುಶ್ರಾತ್ ಸ್ಥಳೀಯ ಭಾಷೆಯನ್ನೂ ಕಲಿಯುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿರಾ ದಸ್ತೂರ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.