ವಿನೋದ್‌ ಮೆಹ್ರಾ ಮತ್ತು ರೇಖಾ ಸಂಬಂಧ: ಬಾಯಿಬಿಟ್ಟ ನಟನ ಪುತ್ರಿ ಸೋನಿಯಾ ಮೆಹ್ರಾ!

First Published | Feb 10, 2021, 2:59 PM IST

70ರ ದಶಕದ ಬಾಲಿವುಡ್‌ ನಟ ವಿನೋದ್‌ ಮೆಹ್ರಾ ಅವರ ಪುತ್ರಿ ಸೋನಿಯಾ ಮೆಹ್ರಾ ಈ ದಿನಗಳಲ್ಲಿ ಮೀಡಿಯಾದ ಹೈಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನಿಯಾ ಮೆಹ್ರಾ ಸಿನಿಮಾ ಕ್ಷೇತ್ರದಿಂದ ದೂರ ಹೋಗಿ ದುಬೈನಲ್ಲಿ ವಾಸಿಸುತ್ತಿದ್ದಾರೆ, ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ರಾಗಿಣಿ ಎಮ್‌ಎಮ್‌ಎಸ್‌ ಸಿನಿಮಾದ ನಂತರ ಸೋನಿಯಾ ಸಿನಿಮಾಕ್ಕೆ ಗುಡ್‌ ಬೈ ಹೇಳಿದ್ದರು. 2007ರಲ್ಲಿ ವಿಕ್ಟೋರಿಯಾ ನಂಬರ್‌-203 ಸಿನಿಮಾದ ಮೂಲಕ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಅವರು ಯಶಸ್ಸು ಕಾಣಲಿಲ್ಲ. ಈ ನಡುವೆ ಇಂಟರ್‌ವ್ಯೂವ್‌ವೊಂದರಲ್ಲಿ ಅವರ ತಂದೆ ವಿನೋದ್‌ ಮೆಹ್ರಾ ಮತ್ತು ನಟಿ ರೇಖಾರ ನಡುವಿನ ರಿಲೆಷನ್‌ ಬಗ್ಗೆ ಮಾತಾನಾಡಿದ್ದಾರೆ. ತಂದೆಯೊಂದಿಗಿನ ರೇಖಾ ಸಂಬಂಧದ ಬಗ್ಗೆ ಅವರು ಹೇಳಿದ್ದಿಷ್ಟು. 

ಸೋನಿಯಾಗೆ ಅವರ ತಂದೆ ವಿನೋದ್‌ ಮೆಹ್ರಾರ ಯಾವ ಸಿನಿಮಾ ಇಷ್ಟ? ಯಾವ ಸಿನಿಮಾ ಮತ್ತೆ ನಿರ್ಮಾಣಗೊಳ್ಳಲಿ ಎಂದು ಬಯಸುತ್ತಾರೆಂಬ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಶ್ನಿಸಲಾಗಿತ್ತು.ಘರ್‌ ಮತ್ತು ಬರ್ನಿಂಗ್‌ ಟ್ರೈನ್‌ ತುಂಬಾ ಇಷ್ಷ ಎಂದು ಮಗಳು ಹೇಳಿದ್ದಾರೆ.
undefined
ರೇಖಾರನ್ನು 3-4 ಸಾರಿ ಭೇಟಿ ಮಾಡಿದ್ದೆ. ನಾವು ಫಂಕ್ಷನ್‌ಗಳಲ್ಲಿ ಮೀಟ್‌ ಆಗಿದ್ದೆವು. ರೇಖಾ ತುಂಬಾ ಒಳ್ಳೆಯ ಹಾಗೂ ಇಂಟರೆಸ್ಟಿಂಗ್‌ ಲೇಡಿ ಎಂದು ಹೇಳಿದ್ದಾರೆ ಸೋನಿಯಾ.
undefined
Tap to resize

ರೇಖಾ ಮತ್ತು ವಿನೋದ್‌ರ ರಿಲೆಷನ್‌ಶಿಪ್‌ ಬಗ್ಗೆ ಕೇಳಿದಾಗ 'ನಂಗೆ ಈ ಬಗ್ಗೆ ಮಾತನಾಡಲು ಇಷ್ಟವಿಲ್ಲ. ನನಗದು ಗೊತ್ತೂ ಇಲ್ಲ. ಅದು ನಾನು ಹುಟ್ಟುವ ಮುಂಚಿನ ಮಾತು. ಇದನ್ನು ಹೊರತು ಪಡಿಸಿ ನನಗೆ ಅವರ ಜೀವನದ ಬಗ್ಗೆ ಕಾಮೆಂಟ್‌ ಮಾಡುವ ಯಾವ ಅಧಿಕಾರವೂ ಇಲ್ಲ. ನನ್ನ ಗೊತ್ತಿರುವ ಪ್ರಕಾರ ಅವರಿಬ್ಬರು ತುಂಬಾ ಒಳ್ಳೆ ಫ್ರೆಂಡ್ಸ್,‌' ಎಂದಿದ್ದಾರೆ ವಿನೋದ್ ಮೆಹ್ರಾ ಮಗಳು.
undefined
ಈ ವಿಷಯದ ಬಗ್ಗೆ ನಾನು ತಾಯಿಯಲ್ಲೂ ಎಂದಿಗೂ ಏನೂಕೇಳಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಪಾಸ್ಟ್‌ ಇರುತ್ತದೆ. ನನ್ನ ತಾಯಿ ವಿಷಯ ಹೇಳಲು ಬಯಸಿದ್ದರೆ ಖಂಡಿತ ಹೇಳುತ್ತಿದ್ದರು,' ಎಂದಿದ್ದಾರೆ ವಿನೋದ್‌ ಮೆಹ್ರಾ ಪುತ್ರಿ.
undefined
ರೇಖಾ ಮತ್ತು ವಿನೋದ್‌ ಮೆಹ್ರಾ ಮದುವೆಯಾಗಿದ್ದರು ಮತ್ತು ನಟನ ತಾಯಿ ಹಾಗೂ ರೇಖಾರ ಮೊದಲ ಭೇಟಿ ಚೆನ್ನಾಗಿರಲಿಲ್ಲ ಎಂದು ಯಾಸೀರ್‌ ಉಸ್ಮಾನ್‌ ಬರೆದಿರುವ ರೇಖಾ :ದಿ ಅನ್ಟೋಲ್ಡ್‌ ಸ್ಟೋರಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
undefined
ಆದರೆ, ವಿನೋದ್‌ ಮೆಹ್ರಾ ಅವರನ್ನು ಮದುವೆಯಾಗಿರಲಿಲ್ಲ ಎಂದು ಸಿಮಿ ಗ್ರೆವಾಲ್‌ ಶೋನಲ್ಲಿ ರೇಖಾ ಸ್ಪಷ್ಟ ಪಡಿಸಿದ್ದಾರೆ.
undefined
ವಿನೋದ್ ಮೆಹ್ರಾ ಅವರ ಮೊದಲ ಪತ್ನಿ ಮೀನಾ ಬ್ರೋಕಾ. ಮದುವೆಯಾಗಿದ್ದರೂ, ನಟ ಬಿಂದಿಯಾ ಗೋಸ್ವಾಮಿಗೆ ಮನ ಸೋತರು ಮತ್ತು ಇಬ್ಬರು ಮದುವೆಯಾದರು. 4 ವರ್ಷಗಳ ಕಾಲ ನಡೆದ ಅವರ ಸಂಬಂಧನಂತರ ಮುರಿದು ಬಿತ್ತು, ನಂತರ ವಿನೋದ್ ಕಿರಣ್ ಎಂಬ ಮಹಿಳೆಯನ್ನು ಮದುವೆಯಾದರು ಮತ್ತು ಕೊನೆಯವರೆಗೂ ಅವರೊಂದಿಗೆ ವಾಸಿಸುತ್ತಿದ್ದರು.
undefined
ವಿನೋದ್ ಮೆಹ್ರಾ ಅಕ್ಟೋಬರ್ 30, 1990 ರಂದು ನಿಧನರಾದರು.
undefined
ಲಾಲ್ ಪತ್ತರ್‌, ಅನುರಾಗ್, ಸಬ್‌ ಸೇ ಬಡೆ ರೂಪೈಯಾ, ನಾಗಿನ್, ಸಜನ್ ಬಿನಾ ಸುಹಾಗನ್, ಘರ್ ದಾದಾ, ದಿ ಬರ್ನಿಂಗ್‌ ಟ್ರೈನ್‌, ಕರ್ತವ್ಯ್‌, ಅಮರ್‌ದೀಪ್‌, ಠಕ್ಕರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
undefined

Latest Videos

click me!