ಶ್ರೀಮಂತಿಕೆ ರಾಜಮನೆತನದ ಹಿನ್ನೆಲೆ ಇದ್ರೂ ಬಾಲಿವುಡ್‌ನಲ್ಲಿ ನೆಲೆ ಕಾಣೋದಕ್ಕಾಗಿ ಭಾರಿ ಕಷ್ಟಪಟ್ಟ ನಟನೀತ

Published : Feb 05, 2025, 04:40 PM IST

ಬಾಲಿವುಡ್‌ನಲ್ಲಿ ನೆಲೆ ಕಾಣಲು ಅನೇಕರು ಬಹಳ ಕಷ್ಟಪಟ್ಟಿರುತ್ತಾರೆ. ಗಟ್ಟಿಯಾದ ಯಾವುದೇ ಹಿನ್ನೆಲೆ ಇಲ್ಲದೇ ಮೇಲೆ ಬಂದ ಅನೇಕ ನಟರಿದ್ದಾರೆ. ಆದರೆ ಶ್ರೀಮಂತಿಕೆ ರಾಜಮನೆತನವೆಂಬ ಹಿನ್ನೆಲೆ ಎರಡೂ ಇದ್ದೂ ಕೂಡ ಬಾಲಿವುಡ್‌ನಲ್ಲಿ ನೆಲೆ ಕಾಣಲು ಬಹಳ ಕಷ್ಟಪಟ್ಟು ಈಗ ಸ್ಟಾರ್ ಆಗಿರುವ ಸ್ಟ್ರಗಲಿಂಗ್ ಸ್ಟಾರ್ ಈ ವಿಜಯ್ ವರ್ಮಾ.

PREV
16
ಶ್ರೀಮಂತಿಕೆ ರಾಜಮನೆತನದ ಹಿನ್ನೆಲೆ ಇದ್ರೂ ಬಾಲಿವುಡ್‌ನಲ್ಲಿ ನೆಲೆ ಕಾಣೋದಕ್ಕಾಗಿ ಭಾರಿ ಕಷ್ಟಪಟ್ಟ ನಟನೀತ

ಸೌತ್ ಇಂಡಿಯನ್ ನಟಿ ತಮನ್ನಾ ಭಟಿಯಾ ಜೊತೆಗಿನ ರಿಲೇಷನ್‌ ಶಿಪ್ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿರುವ ನಟ ವಿಜಯ್ ವರ್ಮಾ, ಇಂದು ಬಾಲಿವುಡ್‌ನ ಯಶಸ್ವಿ ನಟರಲ್ಲಿ ಒಬ್ಬರು. ಆದರೆ ಈ ಯಶಸ್ಸು ಸಿಗುವುದರ ಹಿಂದೆ ಅವರು ಪಟ್ಟ ಶ್ರಮ ಸಣ್ಣದೇನಲ್ಲ,

26
ವಿಜಯ್ ವರ್ಮ

2012ರಲ್ಲಿ ಚಿತ್ತಗಾಂಗ್ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ವಿಜಯ್ ವರ್ಮಾಗೆ, 2017ರಲ್ಲಿ ತೆಲುಗಿನಲ್ಲಿ ನಾನಿ ನಟನೆಯ ಎಂಸಿಎ ಸಿನಿಮಾದಲ್ಲಿ ಮಾಡಿದ ಖಳನಾಯಕನ ಪಾತ್ರ ಒಳ್ಳೆಯ ಹೆಸರು ತಂದು ಕೊಟ್ಟಿತ್ತು, ಪ್ರಸ್ತುತ ಬಾಲಿವುಡ್‌ನಲ್ಲಿ ಫೇಮಸ್ ಎನಿಸಿರುವ ವಿಜಯ್ ವರ್ಮಾ ಮೂಲತಃ ರಾಜಮನೆತನದವರು ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ.

36

ಹಿರಿಯರಿಂದ ಬಂದಂತಹ ಕೋಟಿ ಕೋಟಿಯ ಆಸ್ತಿಯನ್ನು ಹೊಂದಿದ್ದ ಹೈದರಾಬಾದ್‌ ಮೂಲದ ವಿಜಯ್ ವರ್ಮಾ ಮರ್ವಾಡಿ ಬ್ಯುಸಿನೆಸ್‌ ಮ್ಯಾನ್ ಓರ್ವರ ಪುತ್ರ, ಆದರೆ ನಟನೆ ಮೇಲಿನ ಆಸಕ್ತಿಯ ಕಾರಣಕ್ಕೆ ಅದನ್ನೇ ವೃತ್ತಿಯಾಗಿಸಿಕೊಳ್ಳುವ ಕನಸಿನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದರು.

46
ವಿಜಯ್ ವರ್ಮ

ಕುಟುಂಬದ ಮೂಲ ವೃತ್ತಿಯಾದ ವ್ಯಾಪಾರ ಮಾಡಲು ಇಷ್ಟವಿಲ್ಲದ ವಿಜಯ್ ಮುಂಬೈಗೆ ಹೋಗಿ ನಟನೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. 

56
ವಿಜಯ್ ವರ್ಮ

ವಿಲನ್ ಪಾತ್ರಗಳ ಮೂಲಕ ಖ್ಯಾತಿ ಪಡೆದ ಬಳಿಕ ಹೀರೋ  ಆದ ವಿಜಯ್ ವರ್ಮ ಈಗ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದು, ಬಾಲಿವುಡ್‌ನ ಬಹುಬೇಡಿಕೆಯ ನಟ ಎನಿಸಿದ್ದಾರೆ. 

66
ಚಿತ್ರ: Instagram

ಮಿಲ್ಕಿ ಬ್ಯೂಟಿ ತಮನ್ನಾ ಜೊತೆಗಿನ ಪ್ರೀತಿಯ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿರುವ ವಿಜಯ್ ವರ್ಮ ಗೆಳತಿ ತಮನ್ನಾ ಜೊತೆ, ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ನಟಿಸಿದ್ದಾರೆ.

Read more Photos on
click me!

Recommended Stories