ಅದ್ಯಾವ ಘಳಿಗೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಲು ಆರಂಭಿಸಿದರೂ ಆಮೇಲಿಂದ ರಶ್ಮಿಕಾ ಟೈಮೇ ಬದಲಾಯಿತು. ಇತ್ತ ಅವರ ನಿಶ್ಚಿತಾರ್ಥ ಮುರಿಯಿತು. ಅತ್ತ ಇವರಿಬ್ಬರ ಬಗ್ಗೆ ಗುಸು ಗುಸು ಗಾಸಿಪ್ ಹೆಚ್ಚಾಯಿತು. ಅದರಲ್ಲಿಯೂ ಲಿಪ್ ಲಾಕ್ ಸೀನ್ ಆದ ಮೇಲಂತೂ ಇವರಿಬ್ಬರು ಮದುವೆಯಾಗುತ್ತಾರೆಂದೇ ಹೇಳಲಾಗುತ್ತಿತ್ತು. ಆದರೆ, ತೆಲಗು ಚಿತ್ರರಂಗದಲ್ಲಿ ಈ ಜೋಡಿ ಮಾಡಿದ ಕಮಾಲ್ ಇದೆಯಲ್ಲ, ಅದು ಮಾತ್ರ ಅದ್ಭುತ. ತೆರೆ ಮೇಲೆ ಈ ಜೋಡಿಯ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಪ್ರೀತಿ ಮತ್ತು ಬಾಂಧವ್ಯದ ನಟನೆಯಲ್ಲಿ ಈ ಜೋಡಿಯನ್ನು ಟಾಲಿವುಡ್‌ನಲ್ಲಿ ಮೀರಿಸುವವರೇ ಇಲ್ವಂತೆ! ನೋಡಿ ಈ ಅಪರೂಪದ ಜೋಡಿಯ ಕೆಲವು ಫೋಟೋಗಳು.