ಇದೇನಿದು ಮದ್ವೆ ಬಗ್ಗೆ ಮಾತನಾಡ್ತಿದ್ದಾರೆ ದೇವರಕೊಂಡ, ಹುಡುಗಿ ಯಾರೋ?

Published : Jul 13, 2023, 05:47 PM ISTUpdated : Jul 13, 2023, 05:52 PM IST

'ಕುಶಿ'  (Kushi) ಚಿತ್ರದಲ್ಲಿ ಸಮಂತಾ ರುತ್‌ ಪ್ರಭು (Samantha Ruth Prabhu)  ಅವರ ಜೊತೆ ವಿಜಯ್ ದೇವರಕೊಂಡ (Vijay Devarakonda) ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ಅಂದರೆ ಜುಲೈ 12ರಂದು ಈ ಸಿನಿಮಾದ ಆರಾಧ್ಯ ಎಂಬ ಹೆಸರಿನ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಬೆನ್ನಲ್ಲೇ ವಿಜಯ್‌ ಅವರು ತಮ್ಮ ವೈವಾಹಿಕ ಜೀವನ ಹೇಗೆ ಇರಬೇಕೆಂದು ಹೇಳಿಕೊಂಡಿದ್ದಾರೆ. ಹೇಗಪ್ಪ ಇರುತ್ತೆ ಈ ರೊಮ್ಯಾಂಟಿಕ್ ಹೀರೋ ಮ್ಯಾರೀಡ್ ಲೈಫ್?

PREV
18
ಇದೇನಿದು ಮದ್ವೆ ಬಗ್ಗೆ ಮಾತನಾಡ್ತಿದ್ದಾರೆ ದೇವರಕೊಂಡ, ಹುಡುಗಿ ಯಾರೋ?

ವಿಜಯ್ ದೇವರಕೊಂಡ ಅವರು ಹೆಚ್ಚು ಬೇಡಿಕೆಯಿರುವ ದಕ್ಷಿಣದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಮತ್ತು  ಅವರಿಗೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಅವರ ಕೊನೆಯ ಚಿತ್ರ 'ಲೈಗರ್' ದೊಡ್ಡ ಸೋಲು ಕಂಡರೂ, ನಟನ ಬೇಡಿಕೆ ಇನ್ನೂ ಕಡಿಮೆ ಆಗಿಲ್ಲ.

28

ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ಕುಶಿ' ಬಿಡುಗಡೆಯ ಬಗ್ಗೆ ಥ್ರಿಲ್ ಆಗಿದ್ದಾರೆ, ಇದರಲ್ಲಿ ಅವರು ಸಮಂತಾ ರುತ್ ಪ್ರಭು ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
 

38
Kushi

ಶಿವ ನಿರ್ವಾಣ ನಿರ್ದೇಶನದ ಕುಶಿ ಕೂಡ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾಗುತ್ತಿದೆ. ಕುಶಿ ಒಂದು ರೋಮ್ಯಾಂಟಿಕ್-ಕಾಮಿಡಿ ಸಂಗೀತದ ಚಿತ್ರವಾಗಿದ್ದು, ಇದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

48

ಜುಲೈ 12 ರಂದು  ಚಿತ್ರದ ಎರಡನೇ ಮ್ಯೂಸಿಕಲ್ ಸಿಂಗಲ್ 'ಆರಾಧ್ಯ'  ಬಿಡುಗಡೆಯಾಗಿದ್ದು ನಟ ಪ್ರಸ್ತುತ ತಮ್ಮ ಚಲನಚಿತ್ರವನ್ನು ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ.

58

ಈ ಸಂದರ್ಭದಲ್ಲಿ, ವಿಜಯ್ ಅವರು ಆರಾಧ್ಯ ಜೊತೆಗಿನ ಅವರ ಸಂಬಂಧ ಮತ್ತು ಅವರ ವೈವಾಹಿಕ ಜೀವನ ಹೇಗೆ ಇರಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಮಾತನಾಡಿದರು. 

68

 'ಆರಾಧ್ಯ ತುಂಬಾ ಪ್ರೀತಿಸುವಯುವ ಜೋಡಿಯ ಬಗ್ಗೆ  ಹಾಡು. ಮದುವೆಯಾದ ಒಂದು ವರ್ಷದ ನಂತರ ನಿಮಗೆ ನಿಮ್ಮದೇ ಆದ ಜಾಗ ಮತ್ತು ನಿಮ್ಮದೇ ಆದ ಅನ್ಯೋನ್ಯತೆ ಇರುತ್ತದೆ. ನಿಮಗೆ ಎಲ್ಲಾ ಸಮಯವಿರುತ್ತದೆ ಮತ್ತು  ಆ ವ್ಯಕ್ತಿ  ನಿಮಗೆ ಎಲ್ಲವೂ ಆಗಿರುತ್ತಾರೆ. ಆದ್ದರಿಂದ, ಇದು ಮದುವೆಯ ನಂತರದ ಸುಂದರ ಸಮಯದ ಬಗ್ಗೆ' ಎಂದು ವಿಜಯ್‌ ಹಾಡಿನ ಬಗ್ಗೆ ಹೇಳಿದ್ದಾರೆ


 

78

'ಯಾವುದೋ ರೀತಿಯಲ್ಲಿ, ಈ ಹಾಡಿನ ಬಹಳಷ್ಟು ಕ್ಷಣಗಳು ನನ್ನ ಜೀವನದಿಂದ, ನಾನು ಅನುಭವಿಸಿದ ಅನುಭವಗಳಿಂದ ಬಂದಿವೆ. ನಾನು ಮದುವೆಯಾಗಿಲ್ಲ. ಆದರೆ ಕೆಲವು ರೀತಿಯಲ್ಲಿ, ನಾನು ಮದುವೆಯಾದಾಗ, ನಾನು ಈ ರೀತಿ ನೋಡಲು ಬಯಸುತ್ತೇನೆ. ನನ್ನ ವೈವಾಹಿಕ ಜೀವನ ಹೀಗಿರಬೇಕು ಎಂದು ಬಯಸುತ್ತೇನೆ' ಎಂದು ವಿಜಯ್‌ ಹಂಚಿಕೊಂಡಿದ್ದಾರೆ.

88

ಕುಶಿಯ ಹೊರತಾಗಿ,  ವಿಜಯ್‌ ಅವರು  ಎರಡು ಇನ್ನೂ ಹೆಸರಿಡದ ಯೋಜನೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಒಂದು ವಿಡಿ 12 ಗೌತಮ್ ತಿನ್ನನೂರಿ ಮತ್ತು ಇನ್ನೊಂದು ಗೀತಾ ಗೋವಿಂದಂ ನಿರ್ದೇಶಕ ಪರಶುರಾಮ್ ಪೆಟ್ಲಾ ಅವರೊಂದಿಗೆ.

Read more Photos on
click me!

Recommended Stories