ಪತಿಯನ್ನು ಭಯೋತ್ಪಾದಕ ಎಂದು ಟ್ರೋಲ್‌ ಮಾಡೋರ ಬಗ್ಗೆ ಉರ್ಮಿಳಾ ರಿಯಾಕ್ಷನ್

Suvarna News   | Asianet News
Published : Dec 20, 2020, 07:15 PM ISTUpdated : Dec 20, 2020, 07:25 PM IST

ಬಾಲಿವುಡ್‌ನಲ್ಲಿ 'ಚಮ್ಮ ಚಮ್ಮಾ' ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಉರ್ಮಿಳಾ ಮಾತೋಂಡ್ಕರ್ ಈ ದಿನಗಳಲ್ಲಿ ರಾಜಕೀಯದಿಂದ ಹೆಚ್ಚು ಸಕ್ರಿಯರಾಗಿದ್ದಾರೆಂದು ತೋರುತ್ತದೆ. ಇತ್ತೀಚೆಗೆ, ನಟಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈಗ ಉರ್ಮಿಳಾ ಸಂದರ್ಶನವೊಂದರಲ್ಲಿ ತನ್ನ ನೋವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಕಾಶ್ಮೀರಿ ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಅವರನ್ನು ಪಾಕಿಸ್ತಾನಿಗಳು ಮತ್ತು ಭಯೋತ್ಪಾದಕರು ಎಂದು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಉರ್ಮಿಳಾ ಹೇಳುತ್ತಾರೆ. 

PREV
111
ಪತಿಯನ್ನು ಭಯೋತ್ಪಾದಕ ಎಂದು ಟ್ರೋಲ್‌ ಮಾಡೋರ ಬಗ್ಗೆ ಉರ್ಮಿಳಾ ರಿಯಾಕ್ಷನ್

'ನನ್ನ ಗಂಡನನ್ನು ಪಾಕಿಸ್ತಾನಿ ಮತ್ತು ಭಯೋತ್ಪಾದಕ ಎಂದು ಕರೆಯಲಾಗುತ್ತಿದೆ. ಕೆಲವರು ನನ್ನ ವಿಕಿಪೀಡಿಯಾ ಪುಟವನ್ನು ತಿರುಚಿದ್ದಾರೆ ಮತ್ತು ಅಲ್ಲಿ ನನ್ನ ತಾಯಿಗೆ ರುಖ್ಸಾನಾ ಅಹ್ಮದ್ ಮತ್ತು ತಂದೆಯ ಹೆಸರು ಶಿವೇಂದ್ರ ಸಿಂಗ್ ಎಂದು ಹೆಸರಿಸಿದ್ದಾರೆ. ಈ ಇಬ್ಬರು ದೇಶದಲ್ಲಿ ಎಲ್ಲಿ ವಾಸಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನನ್ನ ತಂದೆಯ ಹೆಸರು ಶ್ರೀಕಾಂತ್ ಮಾತೋಂಡ್ಕರ್ ಮತ್ತು ತಾಯಿಯ ಹೆಸರು ಸುನೀತಾ'  ಎಂದು ಸಂದರ್ಶನದಲ್ಲಿ ಹೇಳಿದ ಉರ್ಮಿಳಾ. 

211

'ನನ್ನ ಪತಿ ಕಾಶ್ಮೀರಿ ಮುಸ್ಲಿಂ. ನಾವಿಬ್ಬರೂ ನಮ್ಮ ಧರ್ಮಗಳನ್ನು ಸಮಾನವಾಗಿ ಅನುಸರಿಸುತ್ತೇವೆ. ಇದಕ್ಕಾಗಿಯೇ ಕೆಲವರು ನನ್ನ ಪತಿ ಮತ್ತು ಅವರ ಕುಟುಂಬವನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ' ಎಂದು  ಉರ್ಮಿಳಾ ಮತ್ತಷ್ಟು ಹೇಳಿದರು.

311

2019 ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಉರ್ಮಿಲಾ ಮಾತೋಂಡ್ಕರ್ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದರು.

411

'ಅತ್ತೆ ಮಾವ ಕಾಶ್ಮೀರದಲ್ಲಿದ್ದಾರೆ. ಇಬ್ಬರಿಗೂ ಮಧುಮೇಹ ಮತ್ತು ರಕ್ತದೊತ್ತಡಗಳಿವೆ. ನನ್ನ ಪತಿ 22 ದಿನಗಳ ಕಾಲ ತನ್ನ ಹೆತ್ತವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಏಕೆಂದರೆ ಅಲ್ಲಿ ಇಂಟರ್ನೆಟ್ ಮತ್ತು ಫೋನ್ ಸ್ಥಗಿತಗೊಂಡಿದೆ. ಅವರು ಅಗತ್ಯವಿರುವ ಔಷಧಿಗಳನ್ನು ಹೊಂದಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದ್ದರು ರಂಗೀಲಾ ನಟಿ. 
 
511

9 ವರ್ಷದ ಕಿರಿಯ  ಮೊಹ್ಸಿನ್ ಮಿರ್ ಅಖ್ತರ್ ಅವರನ್ನು ಉರ್ಮಿಳಾ ಮಾರ್ಚ್ 3,2016 ರಂದು ವಿವಾಹವಾದರು. ಮೊಹ್ಸಿನ್ ಕಾಶ್ಮೀರ ಮೂಲದ ಉದ್ಯಮಿ ಮತ್ತು ಮಾಡೆಲ್‌. ಮೊಹ್ಸಿನ್ ಜೋಯಾ ಅಖ್ತರ್ ನಿರ್ದೇಶನದ ಲಕ್ ಬೈ ಚಾನ್ಸ್ ನಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ, ಅವರು ಫರ್ಹಾನ್ ಅಖ್ತರ್ ಜೊತೆ  ಮಾಡೆಲ್‌  ಆಗಿ ಕಾಣಿಸಿಕೊಂಡರು. 

611

ಕಾಶ್ಮೀರದ ಬ್ಯುಸಿನೆಸ್‌ ಫ್ಯಾಮಿಲಿಯ  ಮೊಹ್ಸಿನ್  ಯಾವಾಗಲೂ ಮಾಡೆಲ್ ಆಗಬೇಕೆಂಬ ಕನಸು ಕಂಡಿದ್ದರು. ಇದಲ್ಲದೆ,  ಮೊಹ್ಸಿನ್, ಶಿಲ್ಪಾ ಶುಕ್ಲಾ ಜೊತೆ  'ಮುಂಬೈ ಮಾಸ್ಟ್ ಕಲಾಂದರ್' ನಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೂ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾಗೆ ಮೊಹ್ಸಿನ್ ಮಾಡೆಲ್‌ ಆಗಿದ್ದಾರೆ. 

711

2018 ರ   ಬ್ಲ್ಯಾಕ್ಮೇಲ್‌ ಸಿನಿಮದಾ ಲ್ಲಿ ಐಟಂ ಸಾಂಗ್‌  'ಬೆವಾಫಾ ಬ್ಯೂಟಿ' ನಲ್ಲಿ ಕಾಣಿಸಿಕೊಂಡರ ನಂತರ   ಬಹಳ ಸಮಯದಿಂದ ಚಿತ್ರಗಳಿಂದ ದೂರವಾಗಿದ್ದಾರೆ.  

811

ಡಕಾಯಿಟ್, ಮಿರಾಕಲ್, ದ್ರೋಹಿ, ಕನೂನ್, ರಂಗೀಲಾ, ಜುಡೈ, ರಾಸಾ, ಸತ್ಯ, ಮಾಸ್ಟ್, ಜಂಗ್ಲೀ, ತೆಹ್ಜೀಬ್, ಏಕ್ ಹಸೀನಾ ಥಿ, ಸ್ಪೀಡ್ ಮುಂತಾದವು ನಟಿಯ ಪ್ರಮುಖ ಸಿನಿಮಾಗಳಾಗಿವೆ.

911

ಫೆಬ್ರವರಿ 4, 1974 ರಂದು ಮುಂಬೈನಲ್ಲಿ ಜನಿಸಿದ ಉರ್ಮಿಳಾ ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟಿಯಾಗಿ ಊರ್ಮಿಳಾರ ಮೊದಲ ಚಿತ್ರ 'ನರಸಿಂಹ', ಆದರೆ   ರಾಮ್ ಗೋಪಾಲ್ ವರ್ಮಾ ಅವರ 'ರಂಗೀಲಾ' ಸಿನಿಮಾದ ಮೂಲಕ ಗಮನಸೆಳೆದರು. 

1011

1995 ರಲ್ಲಿ, 'ರಂಗೀಲಾ' ಚಿತ್ರದಲ್ಲಿ ಕೆಲಸ ಮಾಡುವಾಗ, ರಾಮ್ ಗೋಪಾಲ್ ವರ್ಮಾ  ಉರ್ಮಿಳಾರಿಗೆ ಫಿದಾ ಆಗಿದ್ದರು. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ರಾಮ್ ಗೋಪಾಲ್ ಮತ್ತು ಉರ್ಮಿಳಾರ ಸಂಬಂಧ  ತುಂಬಾ ಸುದ್ದಿಯಲ್ಲಿತ್ತು.

1111

ಸೆಪ್ಟೆಂಬರ್ 2019 ರಲ್ಲಿ ಉರ್ಮಿಳಾ ಕಾಂಗ್ರೆಸ್ ಪಕ್ಷವನ್ನು ತೊರೆದರು. ಇತ್ತೀಚೆಗೆ ಅವರು ಮಹಾರಾಷ್ಟ್ರ ಕೆಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲಿ ಶಿವಸೇನೆ ಸೇರಿದ್ದಾರೆ.

click me!

Recommended Stories