ಸಿದ್ಧವಾಗುತ್ತಿದೆ ವಿಶ್ವದ ಅತಿ ದುಬಾರಿ ಸಿನಿಮಾ: ಮಜಾ ಅಂದ್ರೆ ಇದು ಸೂಪರ್‌ ಫ್ಲಾಪ್‌ ಅಂತೆ!

Published : Jun 05, 2025, 06:13 PM IST

ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಜಾನರಾದಲ್ಲಿ ಹೊರಹೊಮ್ಮುತ್ತಿರುವ ಈ ಸಿನಿಮಾದಲ್ಲಿ ಕಲಾವಿದರ ಸಂಭಾವನೆಗೆಂದೇ 214 ಕೋಟಿ ರು.ಗೂ ಅಧಿಕ ಮೊತ್ತ ನೀಡಲಾಗುತ್ತಿದೆಯಂತೆ.

PREV
15

ವಿಶ್ವದ ಅತೀ ದುಬಾರಿ ಸಿನಿಮಾವೊಂದರ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ. ಮಾರ್ವಲ್‌ ಸಿನಿಮ್ಯಾಟಿಕ್‌ ಯೂನಿವರ್ಸ್‌ ನಿರ್ಮಿಸುತ್ತಿರುವ ಈ ಸಿನಿಮಾದ ಒಟ್ಟು ಬಜೆಟ್‌ 4600 ಕೋಟಿ ರು.ಗೂ ಅಧಿಕ ಎನ್ನಲಾಗಿದೆ.

25

ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಜಾನರಾದಲ್ಲಿ ಹೊರಹೊಮ್ಮುತ್ತಿರುವ ಈ ಸಿನಿಮಾದಲ್ಲಿ ಕಲಾವಿದರ ಸಂಭಾವನೆಗೆಂದೇ 214 ಕೋಟಿ ರು.ಗೂ ಅಧಿಕ ಮೊತ್ತ ನೀಡಲಾಗುತ್ತಿದೆಯಂತೆ.

35

ಖ್ಯಾತ ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ಇದರಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕ್ರಿಸ್ ಇವಾನ್ಸ್, ಕ್ರಿಸ್ ಹ್ಯಾಮ್ಸ್​ವರ್ತ್, ಪೆಡ್ರೊ ಪ್ಯಾಸ್ಕಲ್, ಟಾಮ್ ಹಿಡಲ್​ಸ್ಟನ್, ವಾನೆಸ್ಸಾ, ಫ್ಲಾರೆನ್ಸ್ ಮೊದಲಾದವರು ಮುಖ್ಯಪಾತ್ರಗಳಲ್ಲಿದ್ದಾರೆ.

45

ನಿರ್ದೇಶಕರ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ. ಎಲ್ಲ ಅಂದುಕೊಂಡಂತಾದರೆ ಮುಂದಿನ ವರ್ಷ ಅಂದರೆ 2026ರ ಡಿಸೆಂಬರ್‌ನಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ.

55

ಮಜಾ ಅಂದರೆ ಈ ಹಿಂದೆ ಅತ್ಯಧಿಕ ಗಳಿಕೆ ಕಂಡ ಖ್ಯಾತ ಹಾಲಿವುಡ್‌ ಸಿನಿಮಾಗಳಾದ ‘ಜುರಾಸಿಕ್‌ ಪಾರ್ಕ್’, ‘ಲಾರ್ಡ್‌ ಆಫ್‌ ವಿಂಗ್ಸ್‌’ನಂಥಾ ಸಿನಿಮಾಗಳಷ್ಟು ಈ ಚಿತ್ರ ಗಳಿಕೆ ಮಾಡಿದರೂ ಇದು ಸೂಪರ್‌ ಫ್ಲಾಪ್‌ ಸಿನಿಮಾ ಎನಿಸಿಕೊಳ್ಳಲಿದೆಯಂತೆ!

Read more Photos on
click me!

Recommended Stories