ಅನುಷ್ಕಾರ ಬಾಲ್ಯದ‌ ಫೋಟೋ ನೋಡಿ ಮಗು ನಿಮ್ಮನ್ನು ಹೋಲುತ್ತದಾ ಕೇಳ್ತಾ ಇದ್ದಾರೆ ನೆಟ್ಟಿಗ್ಗರು!

First Published | Jan 20, 2021, 5:40 PM IST

ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೇ  ಜನವರಿ 11 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಈ ವಿಷಯವನ್ನು ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ ಈ ವರೆಗೆ ಮಗುವಿನ ಯಾವುದೇ ಫೋಟೋವನ್ನು ಬಿಡುಗಡೆ ಮಾಡಿಲ್ಲ ಈ ಸೆಲೆಬ್ರೆಟಿ ಕಪಲ್‌. ಅದೇ ಸಮಯದಲ್ಲಿ. ಅನುಷ್ಕಾರ  ಚೈಲ್ಡ್‌ ಹುಡ್‌ ಫೋಟೋಗಳು ಸಖತ್‌ ವೈರಲ್‌ ಆಗಿದ್ದು ಮಗು ಅಮ್ಮನನ್ನು ಹೋಲುತ್ತದೆಯಾ ಎಂದು ನೆಟ್ಟಿಗರು ಗೆಸ್‌ ಮಾಡುತ್ತಿದ್ದಾರೆ.

ಹೊಸ ಅತಿಥಿಯ ಆಗಮನದಿಂದ ಅನುಷ್ಕಾ ಮತ್ತು ವಿರಾಟ್ ದಂಪತಿಗಳ ಸಂತೋಷಕ್ಕೆ ಮಿತಿಯಿಲ್ಲ. ಟೀಮ್‌ ಇಂಡಿಯಾದ ನಾಯಕ ಮತ್ತು ಬಾಲಿವುಡ್‌ನ ಸ್ಟಾರ್‌ ನಟಿ ತಮ್ಮ ಜೀವನದ ಅತ್ಯುತ್ತಮ ಸಮಯವನ್ನು ಎಂಜಾಯ್‌ ಮಾಡುತ್ತಿದ್ದಾರೆ.
ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ವಿರಾಟ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳ ಸಹಾಯ ತೆಗೆದುಕೊಂಡರು.
Tap to resize

ಆದರೆ ಅವರು ತಮ್ಮ ಮಗಳ ಯಾವುದೇ ಚಿತ್ರಗಳನ್ನು ಇದುವರೆಗೂ ಹಂಚಿಕೊಂಡಿಲ್ಲ. ಯಾವುದೇ ಫೋಟೋಗಳನ್ನು ಕ್ಲಿಕ್ ಮಾಡದಂತೆ ಪಾಪಾರಾಜಿಗಳನ್ನು ಸಹ ವಿನಂತಿಸಿದರು.
ಇದೇ ಸಮಯದಲ್ಲಿ ಮಮ್ಮಿ ಅನುಷ್ಕಾ ಮಗುವಾಗಿದ್ದಾಗ ಫೊಟೋಗಳು ಇಂಟರ್‌ನೆಟ್‌ನಲ್ಲಿ ರೌಂಡ್‌ ಹಾಕುತ್ತಿದ್ದು ಮಗು ಹೀಗೆ ಇರಬಹುದಾ ಎಂದು ಊಹಿಸುತ್ತಿದ್ದಾರೆ.
ಅನುಷ್ಕಾರ ಮುಖವು ಹೆಚ್ಚು ಬದಲಾಗಿಲ್ಲ. ಅದೇ ಸುಂದರ ಮುಖ ಹಾಗೂ ಸ್ಮೈಲ್‌ ಹೊಂದಿದ್ದಾರೆ ಇಂದಿಗೂ.
ನಟಿ ಆಗಾಗ್ಗೆ ತನ್ನ ಬಾಲ್ಯದ ಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದರು ಮತ್ತು 'ಲಿಟ್ಲ್ ಮಿ' ಎಂದು ಕ್ಯಾಪ್ಷನ್‌ ನೀಡಿದ್ದರು.
ಮಗು ಅವರೊಂದಿಗೆ ಹೋಲಿಕೆಯನ್ನು ಹೊಂದಿದ್ದಾಳಾ? ಎಂದು ಗೆಸ್‌ ಮಾಡುತ್ತಿದ್ದಾರೆ ಫ್ಯಾನ್ಸ್‌.
ಅವರ ಹೆಣ್ಣು ಮಗು ಹೇಗೆ ಕಾಣುತ್ತದೆ ಎಂದು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

Latest Videos

click me!