ಮೀನಾ ಕುಮಾರಿ ಹಣ ಸಂಪಾದಿಸುತ್ತಿದ್ದರೂ, ಚಿಲ್ಲರೆ ಪೈಸೆಗಾಗಿ ಗಂಡನ ಮುಂದೆ ಕೈ ಚಾಚುತ್ತಿದ್ದರು
ಮದುವೆ ನಂತರ, ಮೀನಾ ಸಂಪಾದಿಸಿದ ಹಣವನ್ನು ಕಮಲ್ ತನ್ನ ಸುಪರ್ದಿಗೆ ತೆಗೆದುಕೊಂಡರು. ಅನ್ನು ಕಪೂರ್ ತಮ್ಮ ಟಾಕ್ ಶೋ ಒಂದರಲ್ಲಿ ಮೀನಾ ಕುಮಾರಿ ಜೀವನದ (life of Meena Kumari) ಬಗ್ಗೆ ಮಾತನಾಡುತ್ತಾ, ಒಂದು ಬಾರಿ ಮೀನಾ ಪತಿ ಬಳಿ ತನಗೆ ಮಸಾಜ್ ಮಾಡುವವಳ ಸಂಬಳದಲ್ಲಿ 2 ರೂಪಾಯಿ ಹೆಚ್ಚಿಸುವಂತೆ ಕೇಳಿದ್ದರಂತೆ, ಆದ್ರೆ ಕಮಲ್ ಜಗಳ ಮಾಡಿ ನಿನಗೆ ಮಸಾಜ್ ಅಗತ್ಯವೇ ಇಲ್ಲ ಎಂದಿದ್ದರಂತೆ. ಸಿಕ್ಕಾಪಟ್ಟೆ ಜಗಳವಾಗಿ ಕೊನೆಗೆ ಕಮಲ್ ಮಸಾಜ್ ಮಾಡುವವಳನ್ನೇ ಕೆಲಸದಿಂದ ತೆಗೆದು ಹಾಕಿದರಂತೆ. ನೀವೇ ಹಣ ಸಂಪಾದಿಸುವಾಗ ಸಣ್ಣ ಮೊತ್ತದ ಹಣಕ್ಕಾಗಿ ನಿಮ್ಮ ಗಂಡನ ಕಡೆಗೆ ಕೈ ಚಾಚುವುದಕ್ಕಿಂತ ಹೆಚ್ಚು ಮುಜುಗರದ ಸಂಗತಿ ಇನ್ನೇನು ಇರುತ್ತೆ ಅಲ್ವಾ? ಇದು ಆತ್ಮಗೌರವವನ್ನು ಹತ್ತಿಕ್ಕುವ ಮಾರ್ಗ. ನಿಮ್ಮನ್ನ ಒಬ್ಬರು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದರೆ, ಖಂಡಿತವಾಗಿಯೂ ಅವರು ನಿಮ್ಮನ್ನ ಪ್ರೀತಿಸುತ್ತಿಲ್ಲ ಅನ್ನೋದು ನೆನಪಿರಲಿ.