ಯಾರ ವೃತ್ತಿ ಜೀವನವು (career life) ಯಾವ ರೀತಿಯ ತಿರುವು ತೆಗೆದುಕೊಳ್ಳುತ್ತದೆ ಅನ್ನೋದನ್ನು ನಾವು ಹೇಳಲು ಸಾಧ್ಯವಿಲ್ಲ. ಕೇವಲ ರೂ. 500 ರೂಪಾಯಿಗಾಗಿ ಹೋಟೆಲ್‌ನಲ್ಲಿ ಕೆಲಸ ಮಾಡಿದ ಹುಡುಗಿ ಈಗ ದೇಶದ ಟಾಪ್ ನಾಯಕಿಯರಲ್ಲಿ ಒಬ್ಬಳು. ಈಕೆ ಈಗ ಒಂದು ಚಿತ್ರಕ್ಕಾಗಿ 4 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾಳೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗಿ ಸಿನಿಮಾರಂಗದ ಯಾವುದೇ ಹಿನ್ನೆಲೆಯಿಲ್ಲದೆ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ್ದೇ ಒಂದು ರೋಚಕ ಕಥೆ. ಒಂದೊಂದೇ ಹೆಜ್ಜೆ ಇಡುತ್ತಾ, ಸ್ಟಾರ್ ನಾಯಕಿಯಾದಳು (Star heroine). ಸರಣಿ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಟಾಪ್ ನಾಯಕಿಯಾಗಿ ಮೆರೆಯುತ್ತಿರುವ ಇವರು ಲಕ್ಕಿ ನಾಯಕಿ ಎಂಬ ಟ್ಯಾಗ್ ಪಡೆದುಕೊಂಡಿದ್ದಾರೆ. ಈ ನಟಿ ಯಾರು ಗೊತ್ತಾ?
ಇಷ್ಟೊತ್ತು ಹೇಳಿರುವ ನಟಿ ಬೇರೆ ಯಾರೂ ಅಲ್ಲ ನಾಯಕಿ ಸಮಂತಾ (Samantha Ruth Prabhu). ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಮಂತಾ ಶಾಲಾ ದಿನಗಳಲ್ಲೇ ತನ್ನ ಖರ್ಚಿಗಾಗಿ ಸಂಪಾದಿಸಲು ಆರಂಭಿಸಿದರು. ಮಾಡೆಲಿಂಗ್‌ನಲ್ಲೇ ಕರಿಯರ್ ಮುಂದುವರಿಸಲು ಬಯಸಿದ ನಟಿ, ಸಣ್ಣ, ಪುಟ್ಟ ಜಾಹೀರಾತುಗಳಲ್ಲಿ ನಟಿಸಿದರು. ಇದರಲ್ಲಿ ಸಿಗುತ್ತಿದ್ದ ಹಣವನ್ನು ತನ್ನ ಪಾಕೆಟ್ ಮನಿಯಾಗಿ ಬಳಸುತ್ತಿದ್ದರು.
ಸಮಂತಾ ಒಮ್ಮೆ ಹೋಟೆಲ್‌ನಲ್ಲಿ ಹೋಸ್ಟ್ (host) ಆಗಿ ಕೆಲಸ ಮಾಡಿದ್ದರಂತೆ. ಇದಕ್ಕಾಗಿ ಸಮಂತಾ 500 ರೂ. ಪಡೆದಿದ್ದರಂತೆ. ಅದು ಅವರ ಮೊದಲ ಗಳಿಕೆ. ಈ ವಿಷ್ಯವನ್ನು ಸಮಂತಾ ತಮ್ಮ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಒಂದು ಕಾಲದಲ್ಲಿ ಕೇವಲ 500 ರೂ.ಗೆ ಕೆಲಸ ಮಾಡುತ್ತಿದ್ದ ಸಮಂತಾ ಈಗ ಒಂದು ಸಿನಿಮಾಗೆ ಕೋಟಿ ಪಡೆಯುವ ನಟಿಯರ ಸಾಲಿನಲ್ಲಿ ನಿಲ್ಲುತ್ತಾರೆ.
ಸದ್ಯ ಕೋಟಿ ಗಟ್ಟಲೆ ಬಜೆಟ್ ನ ಸಿನಿಮಾ, ಸೀರೀಸ್ ಗಳಲ್ಲಿ ನಟಿಸುವ ಸಮಂತಾ, 4 ರಿಂದ 5 ಕೋಟಿ ಒಂದು ಸಿನಿಮಾದಿಂದ ಪಡೆಯುತ್ತಾರೆ. ಸಮಂತಾ ತೆಲುಗು, ತಮಿಳು, ಅಷ್ಟೇ ಯಾಕೆ ಬಾಲಿವುಡ್ ನಲ್ಲಿ ಛಾಪು ಮೂಡಿಸಿದ್ದಾರೆ. ಮತ್ತೊಂದೆಡೆ, ವೆಬ್ ಸೀರೀಸ್ ಗಳನ್ನೂ ಸಹ ಮಾಡಿದ್ದಾರೆ ಸಮಂತಾ. ದಿ ಫ್ಯಾಮಿಲಿ ಮ್ಯಾನ್ (The Family Man) 2ನಲ್ಲಿ ಸಮಂತಾ ಚಾಲೆಂಜಿಂಗ್ ರೋಲ್ ಮಾಡಿದ್ದರು. ಸದ್ಯದಲ್ಲೇ ಇವರ ಇನ್ನೊಂದು ವೆಬ್ ಸೀರೀಸ್ ಸಿತಾದಲ್ ರಿಲೀಸ್ ಆಗಲಿದೆ.
ಸಮಂತಾ ಅವರ ಕರಿಯರ್ ಆರಂಭದ ಬಗ್ಗೆ ಹೇಳೋದಾದರೆ, ನಿರ್ದೇಶಕ ಗೌತಮ್ ಮೆನನ್ ಅವರ ಎಮಯಾ ಚೆಸಾವೆ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು ಈ ಚೆಲುವೆ. 2010ರಲ್ಲಿ ಬಿಡುಗಡೆಯಾದ ಎಮಾಯಾ ಚೆಸಾವೆ ಸೂಪರ್ ಹಿಟ್ ಆಗಿತ್ತು. ಬೃಂದಾವನಂ, ದೂಕುಡು, ಈಗ ಚಿತ್ರಗಳೊಂದಿಗೆ ಸರಣಿ ಹಿಟ್ ಚಿತ್ರಗಳನ್ನು ನೀಡಿದ ನಟಿ, ಟಾಲಿವುಡ್ ನ ಎಲ್ಲಾ ಸ್ಟಾರ್ ನಾಯಕರ ಜೊತೆ ತೆರೆ ಹಂಚಿಕೊಂಡು, ಸೂಪರ್ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ.
ಯು ಟರ್ನ್ (U Turn) ಮತ್ತು ಓಹ್ ಬೇಬಿಯಂತಹ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿ ಸಹ, ಸಮಂತಾ ಯಶಸ್ಸನ್ನು ಸಾಧಿಸಿದ್ದಾರೆ. ಸಮಂತಾ ಪ್ರಸ್ತುತ ಮಾ ಇಂಟಿ ಬಂಗಾರಂ ಎಂಬ ಚಿತ್ರ ಮಾಡುತ್ತಿದ್ದಾರೆ. ಇವರು ಈ ಸಿನಿಮಾದ ನಿರ್ಮಾಪಕಿ ಕೂಡ ಹೌದು. ಅಷ್ಟೇ ಅಲ್ಲ ಸಮಂತಾ ಸಾಕಿ ಎಂಬ ಡ್ರೆಸ್ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.