2013ರಲ್ಲಿ, ಮುಖೇಶ್ ಅಂಬಾನಿ ಅವರ ಪ್ರೀತಿಯ ಪತ್ನಿ ನೀತಾ ಅಂಬಾನಿ 50ನೇ ವರ್ಷಕ್ಕೆ ಕಾಲಿಟ್ಟಾಗ, ಅವರು ಅದರ ಆಚರಣೆಗಾಗಿ ಮಾಡಿದ ಖರ್ಚಿನಲ್ಲಿ ಮಧ್ಯಮ ವರ್ಗದವರು ಸುಮಾರು 250 ಮನೆಗಳನ್ನು ಕೊಂಡುಕೊಳ್ಳಬಹುದು.
ಬರ್ತ್‌ಡೇ ಪಾರ್ಟಿ ಎಂದರೆ ಎಷ್ಟು ಖರ್ಚಾಗಬಹುದು? ಒಂದು ಲಕ್ಷ? 5 ಲಕ್ಷ? ಇನ್ನೂ ಅದ್ಧೂರಿಯಾಗಿ ಮಾಡುತ್ತೇವೆಂದರೂ ಹತ್ತಿಪ್ಪತ್ತು ಲಕ್ಷ? ಆದರೆ, ಅಂಬಾನಿ ಕುಟುಂಬದಲ್ಲಿ ಆಚರಿಸಿದ ಈ ಬರ್ತ್‌ಡೇ ಪಾರ್ಟಿಗೆ ಖರ್ಚಾಗಿದ್ದು ಬರೋಬ್ಬರಿ 220 ಕೋಟಿ ರುಪಾಯಿ.
210
ಹೌದು, ನೀವು ಸರಿಯಾಗಿ ಓದಿದ್ರಿ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿಯ 50ನೇ ವರ್ಷದ ಹುಟ್ಟುಹಬ್ಬಕ್ಕೆ ಕುಟುಂಬ ಖರ್ಚು ಮಾಡಿದ್ದು 220 ಕೋಟಿ ರುಪಾಯಿಗಳು.
310
ಇದು ಭಾರತದಲ್ಲೇ ಅತಿ ದುಬಾರಿ ಹುಟ್ಟುಹಬ್ಬವೆನಿಸಿಕೊಂಡಿದ್ದು, 10 ವರ್ಷಗಳ ಹಿಂದೆ ಮಾಡಿದ ಖರ್ಚಿನ ವಿವರಗಳು ಈಚೆಗೆ ಮುನ್ನಲೆಗೆ ಬಂದಿವೆ.
410
ಅಂಬಾನಿ ಕುಟುಂಬವು ಜಗತ್ತಿನ ಶ್ರೀಮಂತ ಕುಟುಂಬಗಳಲ್ಲೊಂದು ಎಂಬುದೇನೋ ನಿಜ. ಇವರು ಐಶಾರಾಮಿಯಾಗಿ ಖರ್ಚು ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ನೀತಾ ಅಂಬಾನಿ ಉಪಯೋಗಿಸುವ ಪ್ರತಿ ವಸ್ತುವಿನ ದರವೂ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.
510
ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಅಂಬಾನಿ ನವೆಂಬರ್ 1, 2013 ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
610
ಹುಟ್ಟುಹಬ್ಬವನ್ನು ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ಎರಡು ದಿನಗಳ ಕಾಲ ಆಚರಿಸಲಾಯಿತು. ಅಲ್ಲಿ ಕೊಠಡಿ ದರವು ದಿನವೊಂದಕ್ಕೆ ಇಬ್ಬರಿಗೆ 2 ಲಕ್ಷ ರೂ. ಈ ಸಂದರ್ಭದಲ್ಲಿ ರಿಲಯನ್ಸ್ ಗ್ರೂಪ್ ಒಡೆತನದ 32 ಚಾರ್ಟರ್ಡ್ ಫ್ಲೈಟ್‌ಗಳು, 250 ಅತಿಥಿಗಳು ಜೋಧ್‌ಪುರಕ್ಕೆ ಆಚರಣೆಗಾಗಿ ತೆರಳಿದ್ದರು.
710
ಎರಡು ದಿನಗಳ ಈವೆಂಟ್‌ನಲ್ಲಿ ಧನ್ತೇರಸ್ ಪೂಜೆ, ಧೀರೂಭಾಯಿ ಅಂಬಾನಿ ಅವರ ಮುಖವನ್ನು ಆಕಾಶದಲ್ಲಿ ರೂಪಿಸಿದ ಬೆಳಕಿನ ಪ್ರದರ್ಶನ ಮತ್ತು ಎ ಆರ್ ರೆಹಮಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.
810
ದೀಪಾಲಂಕಾರಕ್ಕಾಗಿ ಸಿಂಗಾಪುರದಿಂದ ವಿಶೇಷ ತಂಡವನ್ನು ತರಿಸಲಾಗಿದ್ದು, ಅಲಂಕಾರಕ್ಕಾಗಿ ಹೂವುಗಳನ್ನು ಥಾಯ್ಲೆಂಡ್‌ನಿಂದ ಆರ್ಡರ್ ಮಾಡಲಾಗಿತ್ತು. ಮಕ್ಕಳ ಮನೋರಂಜನೆಗಾಗಿ ಲಂಡನ್‌ನಿಂದ ಮಕ್ಕಳ ಸ್ನೇಹಿ ಸವಾರಿಗಳನ್ನು ಆರ್ಡರ್ ಮಾಡಲಾಗಿತ್ತು.
910
ಬಿರ್ಲಾಗಳು, ಮಿತ್ತಲ್‌ಗಳು, ಮಹೀಂದ್ರಾ ಕುಟುಂಬ, ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಇಡೀ ಮುಂಬೈ ಇಂಡಿಯನ್ಸ್ ತಂಡ ಸೇರಿದಂತೆ ವ್ಯಾಪಾರ ಉದ್ಯಮಿಗಳು, ನಟರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.
1010
ಇನ್ನು ಅತಿರಂಜಿತ ಆಚರಣೆಗೆ ಹೆಸರಾಗಿರುವ ಅಂಬಾನಿ ಕುಟುಂಬವು, ಇಶಾ ಅಂಬಾನಿ ಅವರ ಮದುವೆಯನ್ನು ಆಯೋಜಿಸಲು 700 ಕೋಟಿ ರೂ.ಗಳನ್ನು ವ್ಯಯಿಸಿತ್ತು.