ಸೂಪರ್‌ ಸ್ಟಾರ್‌ ರಾಜೇಶ್ ಖನ್ನಾರ 7 ವರ್ಷದ ಲಿವಿನ್ ರಿಲೇಷನ್ ಶಿಪ್‌ ಗೆ ಹುಳಿ ಹಿಂಡಿದ ಕ್ರಿಕೆಟರ್‌!

ಸತತ 15 ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ಏಕೈಕ ಬಾಲಿವುಡ್ ಸೂಪರ್‌ಸ್ಟಾರ್ ರಾಜೇಶ್ ಖನ್ನಾ. 1969 ರಿಂದ 1971 ರವರೆಗೆ, ರಾಜೇಶ್ ಖನ್ನಾ ಅವರ ಒಂದೇ ಒಂದು ಚಿತ್ರವೂ ವಿಫಲವಾಗಲಿಲ್ಲ ಮತ್ತು ಅದು ಅವರನ್ನು ಭಾರತದ ಮೊದಲ ಸೂಪರ್‌ಸ್ಟಾರ್ ಆಗಿ ಮಾಡಿತು. ಆದರೆ ಅವರ ವೈಯಕ್ತಿಕ ಜೀವನದಲ್ಲಿ 7 ವರ್ಷ ಸ್ಟಾರ್‌ ನಟಿ ಜೊತೆ ಲೀವಿಂಗ್‌ನಲ್ಲಿದ್ದರೂ ಓರ್ವ ಕ್ರಿಕೆಟರ್‌ ನಿಂದ ಸಂಬಂಧ ಹಾಳಾಯ್ತು.

ಸುಮಾರು 4 ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ಮೋಹಕ ನಾಯಕ, ತಮ್ಮ ವಿಶಿಷ್ಟ ಶೈಲಿ, ನಿಷ್ಕಳಂಕ ನಟನೆ, ಮೋಹಕ ಮುಖದಿಂದಾಗಿ ಹುಡುಗಿಯರ ನೆಚ್ಚಿನ ನಟರಾಗಿದ್ದರು. ಅವರಿಗೆ ಆಗಿನ ಕಾಲದ ಅತ್ಯಂತ ಸುಂದರ ನಟಿ ಎನಿಸಿಕೊಂಡಾಕೆಯ ಜೊತೆಗೆ ಸಂಬಂಧವಿತ್ತು. ಮದುವೆ ಹಂತಕ್ಕೆ ಹೋಗಿದ್ದ ಆ ಸಂಬಂಧ ಕ್ರಿಕೆಟ್‌ ಆಟಗಾರನಿಂದಾಗಿ ಮುರಿದು ಬಿತ್ತು.

ರಾಜೇಶ್ ಖನ್ನಾ ತಮ್ಮ 24 ನೇ ವಯಸ್ಸಿನಲ್ಲಿ 1966 ರ 'ಆಖ್ರಿ ಖಾತ್' ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟದಾಗಿ ಸೋತಿತು. ಅವರ ಮೊದಲ ಚಿತ್ರದಂತೆ, ರಾಜೇಶ್ ಖನ್ನಾ ಅವರ ಪ್ರೇಮಕಥೆಯೂ 7 ವರ್ಷಗಳ ನಂತರ ವಿಭಜನೆಯಾಯಿತು. 


ರಾಜೇಶ್ ಖನ್ನಾ ಅವರು ತಮ್ಮ ಕಾಲದ ಸೂಪರ್‌ ಹಿಟ್‌ ಮತ್ತು ಸುಂದರ ನಾಯಕಿ ಅಂಜು ಮಹೇಂದ್ರು ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಇಂಡಸ್ಟ್ರಿಯಲ್ಲಿ ಅವರ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್‌ ಇದ್ದವು. ಮಾಧ್ಯಮ ವರದಿಗಳ ಪ್ರಕಾರ, ರಾಜೇಶ್ ಖನ್ನಾ ಮತ್ತು ಅಂಜು ಮಹೇಂದ್ರು ಸುಮಾರು 7 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು ಆದರೆ ಕ್ರಿಕೆಟಿಗರೊಬ್ಬರು ಅವರ ಸಂಬಂಧದಲ್ಲಿ ಹುಳಿ ಹಿಂಡಿದರು. ಈ ಬಿರುಕು ಅವರು ಬೇರ್ಪಟ್ಟು  ತಮ್ಮ ಪ್ರತ್ಯೇಕ ಜೀವನಕ್ಕೆ ಹೋಗಲು ಕಾರಣವಾಯಿತು.

ಡಿಸೆಂಬರ್ 29, 1942 ರಂದು ಭಾರತದ ಅಮೃತಸರದಲ್ಲಿ ಜನಿಸಿದ ರಾಜೇಶ್ ಖನ್ನಾ ಬಾಲ್ಯದಿಂದಲೂ ಕಲಾಭಿಮಾನಿಯಾಗಿದ್ದರು. ರಾಜೇಶ್ ಖನ್ನಾ ಅಧ್ಯಯನದಲ್ಲಿ ಉತ್ತಮವಾದುದಲ್ಲದೆ, ತುಂಬಾ ಸುಂದರವಾಗಿದ್ದರು. ಈ ವಿಶ್ವಾಸದಿಂದಲೇ ರಾಜೇಶ್ ಖನ್ನಾ ಸಿನಿಮಾ ನಾಯಕನಾಗಲು ಮುಂಬೈಗೆ ಬಂದರು.  
 

 24 ನೇ ವಯಸ್ಸಿನಲ್ಲಿ, ರಾಜೇಶ್ ಖನ್ನಾ 'ಆಖ್ರಿ ಖಾತ್' ಚಿತ್ರದಲ್ಲಿ ನಾಯಕನಾಗಿ ಕೆಲಸ ಮಾಡಿದರು. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫ್ಲಾಪ್ ಆಗಿದ್ದರೂ. ಆದರೆ ರಾಜೇಶ್ ಖನ್ನಾ ಛಲ ಬಿಡದೆ ಪರಿಶ್ರಮ ಪಟ್ಟರು. ನಂತರ 1969 ರ ವರ್ಷ ಬಂದಿತು ರಾಜೇಶ್ ಖನ್ನಾ ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ವ್ಯಾಪಾರ ಮಾಡಲು ಪ್ರಾರಂಭಿಸಿದವು. 2 ವರ್ಷಗಳಲ್ಲಿ ರಾಜೇಶ್ ಖನ್ನಾ ಅವರ ಸತತ 15 ಚಿತ್ರಗಳು ಸೋಲೋ ಹಿಟ್ ಆಗಿದ್ದವು. 

1971 ರಲ್ಲಿ ಬಿಡುಗಡೆಯಾದ 'ಹಾಥಿ ಮೇರೆ ಸಾಥಿ' ಚಿತ್ರವು ದಶಕದ ಅತ್ಯಂತ ಸೂಪರ್ಹಿಟ್ ಚಲನಚಿತ್ರವಾಯಿತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಅವಧಿಯಲ್ಲಿ ರಾಜೇಶ್ ಖನ್ನಾ ಅವರು ಸೂಪರ್ ಸ್ಟಾರ್ ಎಂದು ಸಾಭೀತು ಪಡಿಸಿದರು. ರಾಜೇಶ್ ಖನ್ನಾ ಅವರ ಅಭಿಮಾನಿಗಳ ಸಂಖ್ಯೆ ಉತ್ತುಂಗದಲ್ಲಿತ್ತು. ಈ ಸಮಯದಲ್ಲಿ ರಾಜೇಶ್ ಖನ್ನಾ ಸುಂದರ ನಾಯಕಿ ಅಂಜು ಮಹೇಂದ್ರು ಅವರನ್ನು ಪ್ರೀತಿಸುತ್ತಿದ್ದರು. ರಾಜೇಶ್ ಖನ್ನಾ ಮತ್ತು ಅಂಜು ಮಹೇಂದ್ರು ನಡುವಿನ ಸಂಬಂಧವನ್ನು ಯಾರಿಂದಲೂ ಮುಚ್ಚಿಟ್ಟಿರಲಿಲ್ಲ. 

ಇಬ್ಬರೂ ಸುಮಾರು 7 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು ಆದರೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಗ್ಯಾರಿ ಸೋಬರ್ಸ್ ರಾಜೇಶ್ ಖನ್ನಾ ಮತ್ತು ಅಂಜು ಮಹೇಂದ್ರು ನಡುವಿನ ಭಿನ್ನಾಭಿಪ್ರಾಯಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ.  ವಾಸ್ತವವಾಗಿ, ರಾಜೇಶ್ ಖನ್ನಾ ಮದುವೆಗೆ ತಯಾರಿ ನಡೆಸುತ್ತಿದ್ದರು ಮತ್ತು ಅಂಜು ಮಹೇಂದ್ರು ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಬಯಸಿದ್ದರು.

1971 ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಗ್ಯಾರಿ ಸೋಬರ್ಸ್ ಅವರೊಂದಿಗೆ ಅಂಜು ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಸುತ್ತಲು ಪ್ರಾರಂಭಿಸಿದ ನಂತರ ಅವರ ಸಂಬಂಧದ ಕುಸಿತವು ಪ್ರಾರಂಭವಾಯಿತು. ಈ ವಿಷಯ ತಿಳಿದ ರಾಜೇಶ್ ಖನ್ನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಾದ ನಂತರ ರಾಜೇಶ್ ಖನ್ನಾ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾದರು. ನಟಿಯರಾದ ಟ್ವಿಂಕಲ್‌ ಖನ್ನಾ ಮತ್ತು ರಿಂಕೆ ಖನ್ನಾ ಎಂಬ ಇಬ್ಬರು ಹೆಣ್ಣು ಮಕ್ಕಳ ಪೋಷಕರಾದರು.

ತಮ್ಮ ಬ್ರೇಕಪ್‌ನ ನಂತರ ಅಂಜು ಮಹೇಂದ್ರು ಸ್ಟಾರ್‌ಡಸ್ಟ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, "ರಾಜೇಶ್ ಖನ್ನಾ ತುಂಬಾ ಸಂಪ್ರದಾಯವಾದಿ ನಂಬಿಕೆಯ ವ್ಯಕ್ತಿಯಾಗಿದ್ದರು ಆದರೆ ಅವರು ಯಾವಾಗಲೂ ಆಧುನಿಕ ಹುಡುಗಿಯರನ್ನು ಇಷ್ಟಪಡುತ್ತಿದ್ದರು. ಈ ಗೊಂದಲದಿಂದಾಗಿ ನಮ್ಮ ಸಂಬಂಧವು ಬೇರ್ಪಟ್ಟಿದೆ. ನಾನು ಸ್ಕರ್ಟ್ ಧರಿಸಿದ್ದರೆ.  ಸೀರೆಯೇ ಉತ್ತಮ ಎಂದು ಹೇಳುತ್ತಿದ್ದರು, ನಾನು ಸೀರೆ ಉಡುವಾಗ ಸ್ಕರ್ಟ್ ಧರಿಸುವಂತೆ ಸಲಹೆ ನೀಡುತ್ತಿದ್ದರು ಎಂದಿದ್ದಾರೆ.

Latest Videos

click me!