ಸತತವಾಗಿ 8 ಸಿನಿಮಾಗಳನ್ನೂ ₹200 ಕೋಟಿ ಕ್ಲಬ್ ಸೇರಿಸಿದ ಏಕೈಕ ಭಾರತೀಯ ನಟ!

Published : May 16, 2025, 03:25 PM ISTUpdated : May 16, 2025, 04:25 PM IST

ಬಾಕ್ಸ್ ಆಫೀಸ್‌ನಲ್ಲಿ ಭಾರತೀಯ ಸಿನಿಮಾಗಳು 100 ಮತ್ತು 200 ಕೋಟಿ ಕ್ಲಬ್ ತಲುಪುವುದು ಸಾಮಾನ್ಯ. ಆದರೆ ಒಬ್ಬ ಸ್ಟಾರ್‌ನ 8 ಸಿನಿಮಾಗಳು ಸತತವಾಗಿ ಈ ಕ್ಲಬ್‌ಗೆ ಸೇರಿವೆ. ಯಾರು ಆ ಸ್ಟಾರ್ ನಟ? ಆತನ 8 ಸಿನಿಮಾಗಳ ಪಟ್ಟಿ ನೋಡಿ..

PREV
17
ಸತತವಾಗಿ 8 ಸಿನಿಮಾಗಳನ್ನೂ ₹200 ಕೋಟಿ ಕ್ಲಬ್ ಸೇರಿಸಿದ ಏಕೈಕ ಭಾರತೀಯ ನಟ!

ನಾವು ಹೇಳ್ತಿರೋ ಸ್ಟಾರ್ ತಮಿಳು ಸಿನಿಮಾದ ಸೂಪರ್‌ಸ್ಟಾರ್ ಥಲಪತಿ ವಿಜಯ್. 2017ರಲ್ಲಿ ಬಂದ 'ಮರ್ಸಲ್' ಅವರ ಮೊದಲ 200 ಕೋಟಿ ಸಿನಿಮಾ. ಇದರ ನಿರ್ದೇಶಕ ಅಟ್ಲಿ ಕುಮಾರ್. ವಿಶ್ವಾದ್ಯಂತ 257 ಕೋಟಿ ರೂ. ಆದಾಯ ಗಳಿಸಿತ್ತು.

27

2018ರಲ್ಲಿ ವಿಜಯ್ ನಟಿಸಿದ 'ಸರ್ಕಾರ್' 253 ಕೋಟಿ ಗಳಿಸಿತು. ಇದರ ನಿರ್ದೇಶಕ ಎ.ಆರ್. ಮುರುಗದಾಸ್. 2019ರಲ್ಲಿ ಅಟ್ಲಿ ಕುಮಾರ್ ನಿರ್ದೇಶನದ 'ಬಿಗಿಲ್' ವಿಶ್ವಾದ್ಯಂತ 304 ಕೋಟಿ ರೂ. ಆದಾಯ ಗಳಿಸಿತು.

37

ಕೋವಿಡ್ ನಂತರ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾಗಳು ಫ್ಲಾಪ್ ಆಗ್ತಿದ್ದಾಗ, 2021ರಲ್ಲಿ ವಿಜಯ್ 'ಮಾಸ್ಟರ್' 243 ಕೋಟಿ ರೂ. ಆದಾಯ ಗಳಿಸಿತು. ಇದರ ನಿರ್ದೇಶಕ ಲೋಕೇಶ್ ಕನಕರಾಜ್.

47

ಇನ್ನು 2022ರಲ್ಲಿ ವಿಜಯ್ 'ಬೀಸ್ಟ್' ಭರ್ಜರಿ ಹವಾ ಕ್ರಿಯೇಟ್ ಮಾಡಿತ್ತು. ಈ ಸಿನಿಮಾ ಸೋಲುತ್ತದೆ ಎಂದು ನಿರೀಕ್ಷೆ ಮಾಡಿದ್ದನ್ನು ಸುಳ್ಳು ಮಾಡಿ 235 ಕೋಟಿ  ರೂ. ಆದಾಯ ಗಳಿಸುವ ಮೂಲಕ 200 ಕೋಟಿ ಕ್ಲಬ್ ಸೇರಿತು. ಇದರ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್.

57

2023 ರಲ್ಲಿ ವಿಜಯ್ 'ವಾರಿಸು' ಮತ್ತು 'ಲಿಯೋ' ಸಿನಿಮಾಗಳಲ್ಲಿ ನಟಿಸಿದರು. ಎರಡೂ ಸಿನಿಮಾಗಳು ಕ್ರಮವಾಗಿ 303 ಕೋಟಿ ಮತ್ತು 618 ಕೋಟಿ ರೂ. ಆದಾಯವನ್ನು ಗಳಿಸಿದವು. ಲಿಯೋ ಸಿನಿಮಾ ಅತ್ಯಂತ ಯಶಸ್ವಿಯಾಯಿತು.

67

2024ರಲ್ಲಿ ವಿಜಯ್ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' 460 ಕೋಟಿ ರೂ. ಆದಾಯವನ್ನು ಗಳಿಸಿತು. ಇದರ ನಿರ್ದೇಶಕ ವೆಂಕಟ್ ಪ್ರಭು.

77

 ಇದೀಗ ನಟ ದಳಪತಿ ವಿಜಯ್ 'ಜನ ನಾಯಕನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಿರ್ದೇಶಕ ಹೆಚ್. ವಿನೋದ್. ಈ ಸಿನಿಮಾ 9 ಜನವರಿ 2026ರಂದು ಬಿಡುಗಡೆಯಾಗಲಿದೆ.

Read more Photos on
click me!

Recommended Stories