24 ವರ್ಷ ವಯಸ್ಸಿನ ಇವರು ಮೊದಲು ಪರಿಚಯವಾಗಿದ್ದು ಕನ್ನಡ ಚಿತ್ರಗಳ ಮೂಲಕ. ಸಿನಿಮಾ ಮೇಲಿನ ಆಸಕ್ತಿಯಿಂದ 20ನೇ ವಯಸ್ಸಿನಲ್ಲಿಯೇ ಮುಗಿಲ್‌ಪೇಟೆ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದು ಹೆಚ್ಚಿನ ಖ್ಯಾತಿ ತಂದುಕೊಡಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಕನ್ನಡದ ನಂತರ ಮಲಯಾಳಂ, ಮರಾಠಿ ಚಿತ್ರಗಳಲ್ಲಿ ನಟಿಸಿದ ನಂತರ ಈಗ ತಮಿಳಿನಲ್ಲಿ ಪರಿಚಯವಾಗಿದ್ದಾರೆ. ಇವರು ನಟಿಸಿದ ಡ್ರ್ಯಾಗನ್ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಯಿತು.