ಅವರು ಸಹ ಸಂಬಂಧಪಟ್ಟ ಸಿನಿಮಾದ ಬಗ್ಗೆ ಒಂದು ಮಾತು ಸಹ ಮಾತನಾಡದೆ, ಅವರ ಹಳೆಯ ಕಥೆಗಳನ್ನು ಮಾತನಾಡಿ ಸಮಯ ವ್ಯರ್ಥ ಮಾಡುತ್ತಾರೆ. ಜೊತೆಗೆ ಕಾಮಿಡಿ ಎಂಬ ಹೆಸರಿನಲ್ಲಿ ಬೇಡವಾದ ಗೇಲಿ, ಕಿಂಡಲ್‌ಗಳು ಮತ್ತು ಅಶ್ಲೀಲ ಮಾತುಗಳು ಸರಾಗವಾಗಿ ಬರುತ್ತದೆ. ಈಗ ಹೊಸದಾಗಿ ಇನ್ಸ್ಟಾ ಇನ್ಫ್ಲುಯೆನ್ಸರ್‌ಗಳು ಎಂದು ಒಂದು ಗುಂಪು, ಸ್ವಾರಸ್ಯವೇ ಇಲ್ಲದ ಸಿನಿಮಾಗಳನ್ನು ಸಹ ಸೂಪರ್ ಆಗಿ ಇದೆ ಎಂದು ಹಬ್ಬಿಸಿಬಿಡುತ್ತಾರೆ. ಪತ್ರಕರ್ತರಿಗಿಂತ ಮೊದಲೇ ಅವರಿಗೆ ಸಿನಿಮಾ ತೋರಿಸುತ್ತಾರೆ. ಕಾರಣ, ಸಿನಿಮಾ ಪತ್ರಕರ್ತರು ಸಿನಿಮಾ ನೋಡಿದರೆ ಸಿನಿಮಾ ಬಗ್ಗೆ ನಿಜವಾದ ವಿಮರ್ಶೆಗಳನ್ನು ಹೇಳಿಬಿಡುತ್ತಾರೆ. ಆದರೆ ಇನ್ಫ್ಲುಯೆನ್ಸರ್‌ಗಳು 'ಗಮನ'ಕ್ಕೆ ತಕ್ಕಂತೆ ಸಿನಿಮಾವನ್ನು ಆಹಾ ಓಹೋ ಎಂದು ಹೊಗಳಿ ತಳ್ಳುತ್ತಾರೆ.