ನಯನತಾರಾ ಐಷಾರಾಮಿ ಜೀವನ (luxury life) ಸಾಗಿಸುತ್ತಿದ್ದು, ಇವರಿಗೆ ಕೇರಳದಲ್ಲಿ, ಚೆನ್ನೈನಲ್ಲಿ ದೊಡ್ಡದಾದ ಬಂಗಲೆ ಇದೆ, ಹಾಗೂ ಮುಂಬೈನಲ್ಲೂ ಕೂಡ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ, ಜೊತೆಗೆ ಹಲವು ಲಕ್ಸುರಿ ಕಾರುಗಳ ಒಡತಿ ಕೂಡ ಹೌದು. ಇವರ ನೆಟ್ ವರ್ತ್ ಸುಮಾರು 200 ಕೋಟಿಗೂ ಅಧಿಕವಾಗಿದೆ. ಅಲ್ಲದೇ ಇವರಿಗೆ ಪ್ರೈವೆಟ್ ಜೆಟ್ ಕೂಡ ಇದೆ. ಕೆಲವೇ ನಟಿಯರು ಮಾತ್ರ ಪ್ರೈವೆಟ್ ಜೆಟ್ ಹೊಂದಿದ್ದು, ಅವರಲ್ಲಿ ಇವರೂ ಒಬ್ಬರು. ಅದಕ್ಕೇ ಹೇಳೋದು ನೋಡಿ ಲೇಡಿ ಸೂಪರ್ ಸ್ಟಾರ್ ಎಂದು.