ಈ ಸಿನಿಮಾದಲ್ಲಿ ಪ್ರಭಾಸ್ ನಟನೆ ಅದ್ಭುತ, ಆ ಹೈಟ್, ಪರ್ಸನಾಲಿಟಿ, ಆಕ್ಟಿಂಗ್, ಆಕ್ಷನ್ ಸೀನ್ಸ್ ಜೊತೆಗೆ ಟೋನ್ಡ್ ಬಾಡಿಯಿಂದ ಬೆಚ್ಚಿ ಬೀಳುವಂತೆ ಮಾಡಿದ್ರು ಯಂಗ್ ರೆಬೆಲ್ ಸ್ಟಾರ್. ಪ್ರಭಾಸ್, ಅನುಷ್ಕಾ ಕಾಂಬಿನೇಷನ್ ಈ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಯ್ತು. ಆದರೆ ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಒಂದು ನ್ಯೂಸ್ ವೈರಲ್ ಆಯ್ತು. ಬಾಹುಬಲಿ ಸಿನಿಮಾದಲ್ಲಿ ಹೀರೋ ಆಗಿ ಮೊದಲು ಪ್ರಭಾಸ್ ಅಂದುಕೊಂಡಿರಲಿಲ್ಲವಂತೆ ರಾಜಮೌಳಿ. ಈ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹೀರೋ ಆಗಿ ಸೂರ್ಯ ಅವರನ್ನು ಅಂದುಕೊಂಡಿದ್ದರಂತೆ ಜಕ್ಕಣ್ಣ. ಇದರಲ್ಲಿ ನಿಜ ಎಷ್ಟಿದೆಯೋ ಗೊತ್ತಿಲ್ಲ ಆದರೆ ಸೂರ್ಯಗೆ ಆಫರ್ ಕೂಡ ಕೊಟ್ಟಿದ್ದರಂತೆ.