ನಟ ಸೂರ್ಯನ ಮೊದಲ ಕ್ರಶ್ ಜ್ಯೋತಿಕಾ ಅಲ್ಲವಂತೆ, ಅಣ್ಣನ ಸೀಕ್ರೆಟ್ ಬಿಚ್ಚಿಟ್ಟ ಕಾರ್ತಿ

First Published | Nov 12, 2024, 8:50 AM IST

ಸೂರ್ಯ - ಜ್ಯೋತಿಕ ಪ್ರೀತಿಸಿ ಮದುವೆಯಾದ್ರು, ಆದ್ರೆ ಸೂರ್ಯ ಮೊದಲು ಪ್ರೀತಿಸಿದ್ದು ಜ್ಯೋತಿಕಾ ಅವರನ್ನಲ್ಲವಂತೆ! ಜ್ಯೋತಿಕಗಿಂತ ಮುಂಚೆ ಒಬ್ಬ ನಟಿನ ಮೇಲೆ ಸೂರ್ಯಗೆ ಒನ್ ಸೈಡ್ ಲವ್ ಇತ್ತಂತೆ! ಸೋದರನ ಮೊದಲ ಕ್ರಶ್ ಬಗ್ಗೆ ಕಾರ್ತಿ ಮಾತನಾಡಿದ್ದಾರೆ. 

ಸ್ಟಾರ್ ಹೀರೋ ಮಿಸ್ಟರ್ ಪರ್ಫೆಕ್ಟ್. ತುಂಬಾ ಡೀಸೆಂಟ್ ಹೀರೋ. ಆ ನಟನ ಸಿನಿಮಾಗಳು ಕೂಡ ಹಾಗೇ ಇರುತ್ತವೆ. ಸೂರ್ಯ ಅವರನ್ನು ಪ್ರೀತಿಸುವವರು ಕೂಡ ಆತನಲ್ಲಿ ಇದೇ ಗುಣಗಳನ್ನು ನೋಡಿ ಅಭಿಮಾನಿಸ್ತಾರೆ. ನಟಿ ಜ್ಯೋತಿಕರನ್ನ ಪ್ರೀತಿಸಿ ಮದುವೆಯಾಗಿ, ಹಲವು ವರ್ಷಗಳ ಕಾಲ ಚೆನ್ನೈನಲ್ಲಿದ್ದ ಸೂರ್ಯ, ಇದೀಗ ಮಡದಿಯ ಸಂತೋಷಕ್ಕಾಗಿ ಮುಂಬೈಗೆ ಶಿಫ್ಟ್ ಆಗಿದ್ದಾರೆ.

ಆದ್ರೆ ಸೂರ್ಯ ಜ್ಯೋತಿಕಗಿಂತ ಮುಂಚೆ ಬೇರೆ ನಟಿಯೊಬ್ಬರನ್ನು ಇಷ್ಟಪಟ್ಟಿದ್ರಾ? ನಟನ ಮೊದಲ ಕ್ರಶ್ ಜ್ಯೋತಿಕ ಅಲ್ಲವೇ? ಸೂರ್ಯ ಒನ್ ಸೈಡ್ ಲವ್ ಮಾಡಿದ ನಟಿ ಯಾರು? ಸೂರ್ಯನ ಸೀಕ್ರೆಟ್ ರಿವೀಲ್ ಮಾಡಿದ ತಮ್ಮ ಕಾರ್ತಿ ಯಾವ ನಟಿಯ ಹೆಸರು ಹೇಳಿದ್ರು? 

Tap to resize

ಸೂರ್ಯ

ಸೂರ್ಯ ನಟನೆಗ ಕಂಗುವಾ ತೆರೆ ಮೇಲೆ ಅಪ್ಪಳಿಸಲು ಸಿದ್ಧವಾಗಿದೆ. ಈ ಸಿನಿಮಾ ತೆಲುಗು, ತಮಿಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಶಿವ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ನಟ ಸೂರ್ಯ ಅವರಿಗ ಕನ್ನಡ, ತೆಲುಗಿನಲ್ಲಿ ಎಷ್ಟು ಕ್ರೇಜ್ ಇದೆ ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 

ಸೂರ್ಯ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಶೋಗೆ ಅತಿಥಿಯಾಗಿ ಹಾಜರಾದರು. ಈ ಶೋನಲ್ಲಿ ಸೂರ್ಯ ಬಾಲಕೃಷ್ಣ ಜೊತೆ ತುಂಬಾ ಒಳ್ಳೆಯ ಸಮಯ ಕಳೆದರು. ಈ ವೇಳೆ ಅನೇಕ ವಿಷಯಗಳನ್ನು ಸೂರ್ಯ ಹಂಚಿಕೊಂಡರು. ತಮ್ಮ ಅಭಿಮಾನದ ನಟಿ ಯಾರೆಂದು ಕೂಡ ರಿವೀಲ್ ಮಾಡಿದರು.

ಬಾಲಯ್ಯ ಸೂರ್ಯನಿಗೆ 'ನಿಮ್ಮ ಮೊದಲ ಕ್ರಶ್ ಯಾರು?' ಅಂತ ಕೇಳಿದ್ರು. ಆದ್ರೆ ಸೂರ್ಯ ಉತ್ತರಿಸದೆ ತಪ್ಪಿಸಿಕೊಂಡರು. ಬಾಲಯ್ಯ ಸೂರ್ಯನ ತಮ್ಮ ಕಾರ್ತಿಗೆ ಫೋನ್ ಮಾಡಿ, 'ಜ್ಯೋತಿಕ ಅಲ್ಲದೆ ಸೂರ್ಯ ಇಷ್ಟಪಟ್ಟ ನಟಿ ಯಾರು?' ಅಂತ ಕೇಳಿದ್ರು. ಕಾರ್ತಿ ತುಂಬಾ ಇಂಟರೆಸ್ಟಿಂಗ್ ವಿಷಯ ಹೇಳಿದ್ರು.

ಸೀನಿಯರ್ ನಟಿ ಗೌತಮಿ ಅವರು ಸೂರ್ಯನ ಮೊದಲ ಕ್ರಶ್ ಅಂತ ಕಾರ್ತಿ ರಿವೀಲ್ ಮಾಡಿದ್ರು. ಆ ನಟಿ ಮತ್ತು ಆಕೆಯ ಸಿನಿಮಾಗಳೆಂದರೆ ಸೂರ್ಯಗೆ ತುಂಬಾ ಇಷ್ಟವಂತೆ. ಗೌತಮಿ ಸೂರ್ಯಗಿಂತ ಐದಾರು ವರ್ಷ ದೊಡ್ಡವರು. ಸೂರ್ಯಗೆ ಸಂಬಂಧಿಸಿದ ಈ ವಿಷಯ ಈಗ ವೈರಲ್ ಆಗ್ತಿದೆ.

Latest Videos

click me!