ರಜನಿಕಾಂತ್ ಬೋಳು ತಲೆಗೆ ಕಾರಣವೇನು? ಕೊನೆಗೂ ಸೀಕ್ರೆಟ್ ಬಿಚ್ಚಿಟ್ಟ ಸೂಪರ್ ಸ್ಟಾರ್ ಆಪ್ತಮಿತ್ರ!

Published : Jun 21, 2025, 12:14 PM IST

ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದು ಹೇಗೆ? ಮೊದಲ ಅವಕಾಶ ಸಿಕ್ಕಿದ್ದು ಹೇಗೆ? ಸ್ಟೈಲಿಶ್ ರಜನಿ ತಲೆಬೋಳು ಆಗಿದ್ದೇಕೆ? ರಜನಿ ಆಪ್ತಮಿತ್ರ ಏನಂದ್ರು?

PREV
18

ಸಾಮಾನ್ಯ ಬಸ್ ಕಂಡಕ್ಟರ್ ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್. 72ರಲ್ಲೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಜನಿ ಸಿನಿಮಾಗೆ ಬರಲು ಕಾರಣ ಆಪ್ತ ಮಿತ್ರ ರಾಜ್ ಬಹದ್ದೂರ್. ಇಬ್ಬರೂ ಕರ್ನಾಟಕದಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ರು. ರಜನಿ ಸ್ಟೈಲ್ ನೋಡಿ ರಾಜ್ ಬಹದ್ದೂರ್ ಸಿನಿಮಾಗೆ ಹೋಗಲು ಸಲಹೆ ಕೊಟ್ರು.

28

1970ರಲ್ಲಿ ರಜನಿ ಕಂಡಕ್ಟರ್, ನಾನು ಡ್ರೈವರ್. ಬಸ್ಸಲ್ಲೇ ಮೊದಲು ಭೇಟಿ. 53 ವರ್ಷದಿಂದ ಸ್ನೇಹ. ರಜನಿ ಸ್ಟಾರ್ ಆದ್ರೂ ನಮ್ಮ ಸ್ನೇಹ ಹಾಗೇ ಇದೆ. ದೇಹ ಬೇರೆ, ಆದ್ರೆ ಪ್ರಾಣ ಒಂದೇ.

38

ನಾವಿಬ್ಬರೂ ನಾಟಕ ಮಾಡ್ತಿದ್ವಿ. ರಜನಿ ಲೀಡ್ ರೋಲ್, ನಾನು ಸಣ್ಣ ಪಾತ್ರ. ಅವರ ನಟನೆಗೆ ನಾನೇ ಫಿದಾ ಆಗ್ತಿದ್ದೆ. ಸಿನಿಮಾಗೆ ಹೋಗಲು ಹೇಳಿದೆ. ನಾಟಕದಲ್ಲಿ ರಜನಿಗೆ ಜನ ವಿಷಲ್ ಹೊಡೀತಿದ್ರು. ಸ್ಟಾರ್ ಆಗ್ತಾರೆ ಅಂತ ಅನಿಸ್ತು.

48

ನಿನ್ನ ಕಣ್ಣಲ್ಲಿ ಶಕ್ತಿ ಇದೆ. ಚೆನ್ನೈಗೆ ಹೋಗಿ ಫಿಲ್ಮ್ ಇನ್ಸ್ಟಿಟ್ಯೂಟ್‌ಗೆ ಸೇರು ಅಂದೆ. ರಜನಿಕಾಂತ್ ಕುಟುಂಬ ಬಡತನದಲ್ಲಿತ್ತು. ನಾನು ನಿಮ್ಮ ಕುಟುಂಬ ನೋಡ್ಕೋತೀನಿ ಅಂದೆ.

58

ರಜನಿಕಾಂತ್ ಕನ್ನಡ ನಾಟಕ ಮಾಡಿದ್ರು. ಅದನ್ನ ಬಾಲಚಂದರ್ ನೋಡಿ ನೀನು ತಮಿಳು ಕಲಿ ಅಂದ್ರು. ರಜನಿಗೆ ತಮಿಳು ಬರಲ್ಲ. ನಾನು ತಮಿಳು ಕಲಿಸಿದೆ.

68

ಒಂದು ತಿಂಗಳಲ್ಲಿ ರಜನಿ ತಮಿಳು ಕಲಿತರು. ಬಾಲಚಂದರ್‌ಗೆ ತೋರಿಸಿದ್ರು. ಅಪೂರ್ವ ರಾಗಂಗಳ್ ಸಿನಿಮಾದಲ್ಲಿ ಚಾನ್ಸ್ ಸಿಕ್ತು. ಬಾಲಚಂದರ್ ರಜನಿಗೆ ಸ್ಟೈಲ್ ನೋಡಿ ಫ್ರೀಡಂ ಕೊಟ್ರು. ರಜನಿ ಸಿಗರೇಟ್, ಕನ್ನಡಕ ಸ್ಟೈಲ್ ನೋಡಿ ಜನ ಫಿದಾ ಆದ್ರು.

78

ರಜನಿಗೆ ಸಿನಿಮಾ ಆಫರ್ಸ್ ಬಂತು. ರಾತ್ರಿ ಹಗಲು ಎನ್ನದೇ ಸಿನಿಮಾ ಶೂಟಿಂಗ್ ಮಾಡಿ170 ಸಿನಿಮಾ ಮಾಡಿದ್ರು. ಪದ್ಮಶ್ರೀ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಿಕ್ತು. ಜನರ ಮನಸ್ಸಲ್ಲಿ ರಜನಿ ವಿಶೇಷ ಸ್ಥಾನ ಪಡೆದರು.

88

ಕಂಡಕ್ಟರ್ ಆಗಿದ್ದಾಗಲೂ ರಜನಿ ಸ್ಟೈಲಿಶ್. ಟಿಕೆಟ್ ಕೊಡುವಾಗಲೂ ಸ್ಟೈಲಿಶ್. ಜೊತೆಗೆ ಹೇರ್ ಸ್ಟೈಲ್ ಮೇಂಟೈನ್ ಮಾಡ್ತಿದ್ರು. ಇನ್ನು ಜಾಸ್ತಿ ಹೇರ್ ಸ್ಟೈಲ್ ಮಾಡಿದ್ದರಿಂದ ರಜನಿ ತಲೆ ಬೋಳಾಯ್ತು. ವಿಶೇಷವಾಗಿ ಸಿಗರೇಟ್ ಅನ್ನು ಸ್ಟೈಲ್ ಆಗಿ ಹೊಡಿತಿದ್ರು ಎಂದರು ರಾಜ್ ಬಹದ್ದೂರ್.

Read more Photos on
click me!

Recommended Stories