ಒಂದು ಕಾಲದಲ್ಲಿ ಸೂಪರ್‌ಸ್ಟಾರ್ ಆಗಿದ್ದ ಸುಮನ್, ಚಿರಂಜೀವಿ, ರಜನಿಕಾಂತ್ ಅಂತಹ ಟಾಪ್ ಸ್ಟಾರ್‌ಗಳಿಗೆ ಪೈಪೋಟಿ ನೀಡಿದ್ದರು. ಕೆಲವರ ಪಿತೂರಿಗೆ ಬಲಿಯಾಗಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹಿನ್ನಡೆ ಅನುಭವಿಸಿದರು. ನೀಲಿ ಚಿತ್ರ ಆರೋಪದಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದ್ದರು. ಆ ಸಮಯದಲ್ಲಿ ಜೈಲಿನಲ್ಲಿ ತನನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಬಹಿರಂಗಪಡಿಸಿದ್ದಾರೆ.