ಸ್ಟಾರ್ ನಿರ್ದೇಶಕ ಸುಕುಮಾರ್ ಅವರ ಮಗಳು ಸುಕೃತಿ ವೇಣಿ ಅತ್ಯುತ್ತಮ ಬಾಲ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅವರು ನಟಿಸಿದ್ದ “ಗಾಂಧಿ ತಾತಾ ಚೆಟ್ಟು” ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
ಭಾರತ ಸರ್ಕಾರವು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ತೆಲುಗು ಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿವೆ. ‘ಗಾಂಧಿ ತಾತಾ ಚೆಟ್ಟು’ ಚಿತ್ರಕ್ಕಾಗಿ ಸುಕೃತಿ ವೇಣಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಲಭಿಸಿದೆ.
25
ಅತ್ಯುತ್ತಮ ಬಾಲ ನಟಿ ಸುಕೃತಿ ವೇಣಿ
ಎಲ್ಲರ ಹೃದಯವನ್ನು ತಟ್ಟುವ, ಮನಸ್ಸನ್ನು ಸೆಳೆಯುವ “ಗಾಂಧಿ ತಾತಾ ಚೆಟ್ಟು” ಕಥೆ. ತಾತನಿಗಾಗಿ ಮೊಮ್ಮಗಳು ಏನು ಮಾಡಿದಳು? ಚೆಟ್ಟನ್ನು ಉಳಿಸಲು ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕಾಯಿತು? ಚೆಟ್ಟಿನ ಮಹತ್ವವೇನು? ಎಂಬ ಕಥೆ ಎಲ್ಲರನ್ನೂ ಆಕರ್ಷಿಸಿದೆ. ಸುಕೃತಿ ವೇಣಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
35
ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ
ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ತಂದೆಗೆ ತಕ್ಕ ಮಗಳಾಗಿ ಸುಕೃತಿ ವೇಣಿ ನಿಂತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಗೆದ್ದ ಸುಕೃತಿ ವೇಣಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
“ಗಾಂಧಿ ತಾತಾ ಚೆಟ್ಟು” ಚಿತ್ರಕ್ಕಾಗಿ ಸುಕುಮಾರ್ ಪುತ್ರಿ ಸುಕೃತಿ ವೇಣಿ ತೋಡಿದ ಡೆಡಿಕೇಶನ್ ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ಸುಕೃತಿ ತಲೆ ಬೋಳಿಸಿಕೊಳ್ಳಬೇಕಾಯಿತಂತೆ. ಮೊದಲೇ ಹೇಳಿದ್ರೆ ಮಗಳು ಒಪ್ಪಿಕೊಳ್ಳೋದಿಲ್ಲ ಅಂತ ಸುಕುಮಾರ್ ಭಾವಿಸಿದ್ದರಂತೆ. ಹಾಗಾಗಿ ಪುಷ್ಪ ಚಿತ್ರದಲ್ಲಿ ಫಹಾದ್ ಫಾಸಿಲ್ ತರ ಮೇಕಪ್ ಮಾಡ್ತೀವಿ ಅಂದಿದ್ದರಂತೆ.
55
ಸುಕುಮಾರ್ ಮಗಳು ಹೇಳಿದ್ದೇನು ಗೊತ್ತಾ?
ಆದರೆ ಸುಕುಮಾರ್ ಮಗಳು ಸುಕೃತಿ ಹೇಳಿದ ಮಾತಿಗೆ ಎಲ್ಲರೂ ಶಾಕ್ ಆದರಂತೆ. ಮೇಕಪ್ ಬೇಡ, ನಿಜವಾಗ್ಲೂ ತಲೆ ಬೋಳಿಸಿಕೊಳ್ಳುತ್ತೇನೆ. ಕೂದಲು ಮತ್ತೆ ಬೆಳೆಯುತ್ತದೆ ಅಂದರಂತೆ. ಹೇಳಿದಂತೆ ಆ ಪಾತ್ರಕ್ಕಾಗಿ ಸುಕೃತಿ ನಿಜವಾಗ್ಲೂ ತಲೆ ಬೋಳಿಸಿಕೊಂಡರು. ಮಗಳ ಈ ಡೆಡಿಕೇಶನ್ ನೋಡಿ ಸುಕುಮಾರ್ ಪತ್ನಿ ತಬಿತಾ ಭಾವುಕರಾದರಂತೆ. ಚಿತ್ರಕ್ಕಾಗಿ ಅಷ್ಟೊಂದು ಡೆಡಿಕೇಶನ್ ತೋರಿದ್ದರಿಂದಲೇ ಸುಕೃತಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಲಭಿಸಿದೆ.