ಅಡಲ್ಟ್ ಹಾರರ್ ಕಾಮಿಡಿ ಸಿನಿಮಾ ಇರಂಡಂ ಕುತ್ತು ಟ್ರೈಲರ್‌ಗೆ ತಮಿಳಿನ ಪ್ರಮುಖ ನಿರ್ದೇಶಕ ಭರತಿರಾಜ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇರಂಡಂ ಕುತ್ತು ಸಿನಿಮಾ ಟ್ರೈಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಅದರಲ್ಲಿ ಅಕ್ಷೇಪಾರ್ಹ ವಸ್ತು, ವಿಷಯಗಳನ್ನು ವಿರೋಧಿಸಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಹಿರಿಯ ನಿರ್ದೇಶಕ ಭರತಿರಾಜ, ಸರ್ಕಾರ ಹಾಗೂ ಸೆನ್ಸಾರ್ ಬೋರ್ಡ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಂಡಿದ್ದಾರೆ.
ತಮಿಳು ಸಿನಿಮಾದಲ್ಲಿ ಅಷ್ಟು ಅಶ್ಲೀಲತೆ ಬೇಡ ಒಪ್ಪುವುದಿಲ್ಲ ಅವರು ಹೇಳಿದ್ದಾರೆ.
ಸಿನಿಮಾ ಎಂದರೆ ಉದ್ಯಮ ಹೌದು. ಆದರೆ ಬಾಳೆಹಣ್ಣನ್ನು ಒಂದು ಸಿಂಬಲ್ ಆಗಿ ತೆಗೆದುಕೊಂಡು ಅದನ್ನೇ ಜನರಿಗೆ ತೋರಿಸುವುದು ನಿಜಕ್ಕೂ ಬೇಸರವೆನಿಸುತ್ತದೆ. ಅವರ ಮನೆಯಲ್ಲಿ ಹೆಣ್ಮಕ್ಕಳಿಲ್ಲವೇ.. ನಾನು ಹಿರಿಯನಾಗಿ ಇದನ್ನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇರಂಡಂ ಕುತ್ತು ಸಿನಿಮಾ 2018ರಲ್ಲಿ ರಿಲೀಸ್ ಆದ ಇರುಟ್ಟು ಅರಯಲ್ ಮುರಟ್ಟು ಕುತ್ತು ಸಿನಿಮಾದ ಸೀಕ್ವೆಲ್.
ಬುಧವಾರ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್‌ನಲ್ಲಿ ಹಸ್ತಮೈಥುನಕ್ಕೆ ಸಂಬಂಧಿಸಿ ನೇರ ಹೋಲಿಕೆಗಳನ್ನು ಮಾಡಲಾಗಿದೆ.
ಇಬ್ಬರು ಪುರುಷರು ಬಾಳೆಹಣ್ಣು ಹಿಡಿದು ನಿಂತು, ಮಧ್ಯದಲ್ಲಿ ಬಿಕಿನಿಯಲ್ಲಿ ಯುವತಿ ನಿಂತ ಪೋಸ್ಟರ್ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.