ಒಂದೆರಡು ಸಿನಿಮಾ ಹಿಟ್ ಆದ್ರೆ ಸಾಕು, ತಮ್ಮಷ್ಟಕ್ಕೆ ತಾವೇ ದೊಡ್ಡವರು ಅಂತ ತಿಳ್ಕೊಳ್ಳೋರು, ಅಹಂಕಾರ ತುಂಬಿಕೊಂಡು ಸಾಮಾನ್ಯ ಜನರನ್ನ ಲೈಟ್ ಆಗಿ ನೋಡೋರು, ಫ್ಯಾನ್ಸ್‌ನ ಲೆಕ್ಕಿಸದೆ ಪೊಗರು ತೋರಿಸೋರು ಇದ್ದಾರೆ. ಆದ್ರೆ ಎಲ್ಲರೂ ಹೀಗೆ ಅಂತ ಅಲ್ಲ. ಕೆಲವರು ಮಾತ್ರ ಹೀಗೆ. ಆದ್ರೆ ಕೆಲವರು ಬ್ಯಾಗ್ರೌಂಡ್ ದೊಡ್ಡದಿದ್ರೂ, ಸ್ಟಾರ್ ಹೀರೋ ಆಗಿದ್ರೂ, ಕೋಟಿ ಕೋಟಿ ದುಡ್ಡಿದ್ರೂ, ಎಲ್ಲದ್ರಲ್ಲೂ ದೊಡ್ಡವರಾಗಿದ್ರೂ ಸರಳವಾಗಿ ಇರ್ತಾರೆ.