ಚಿರಂಜೀವಿ ಮೊದಲಿನಿಂದಲೂ ಒಳ್ಳೆಯ ಡ್ಯಾನ್ಸರ್ ಅಂತ ಗೊತ್ತೇ ಇದೆ. ಆಗಿನ ಕಾಲದಲ್ಲಿ ಅವರ ಡ್ಯಾನ್ಸ್ ಸಿನಿಮಾ ನಿರ್ಮಾಪಕರನ್ನು ಆಕರ್ಷಿಸುತ್ತಿತ್ತು. ಎಲ್ಲರೂ ಅವರತ್ತ ತಿರುಗಿ ನೋಡುವಂತೆ ಮಾಡುತ್ತಿತ್ತು. ಅಲ್ಲಿಯವರೆಗೆ ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಕೃಷ್ಣಂರಾಜು, ಶೋಭನ್ ಬಾಬು ಹಾರುತ್ತಾ, ಜಿಗಿಯುತ್ತಾ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ನಿಜವಾದ ಡ್ಯಾನ್ಸ್ ಏನು ಅಂತ ಚಿರಂಜೀವಿ ತೋರಿಸಿಕೊಟ್ಟರು. ಹೀಗೆ ಇಂಡಸ್ಟ್ರಿಗೆ ಸುನಾಮಿಯಂತೆ ಎಂಟ್ರಿ ಕೊಟ್ಟರು.