ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದಲೇ ಲೈಫ್ ಸೆಟಲ್ ಮಾಡಿಕೊಂಡ ಮತ್ತೊಬ್ಬ ಸ್ಟಾರ್ ನಟಿ!

Published : Jun 24, 2025, 06:21 PM IST

ಒಂದು ಕಾಲದ ಸ್ಟಾರ್ ನಟಿ ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದ ಇನ್ನೊಬ್ಬ ಸ್ಟಾರ್ ನಟಿಗೆ ಲೈಫೇ ಸೆಟ್ ಆಗಿದೆ. ಯಾರದು ಅಂತ ಗೊತ್ತಾ?

PREV
16

ದಕ್ಷಿಣ ಭಾರತದ ಸ್ಟಾರ್ ನಟಿ ಸೌಂದರ್ಯ. ಸಿನಿಮಾ ಇಷ್ಟವಿಲ್ಲದಿದ್ದರೂ ಅಪ್ಪನ ಒತ್ತಾಯಕ್ಕೆ ನಟನೆಗೆ ಬಂದರು. ಆಮೇಲೆ ಸ್ಟಾರ್ ನಟಿಯಾದರು. ಈಗ ಅವರೇ ಭೂಮಿ ಮೇಲಿಲ್ಲದ ಕಾರಣ ಅವರಿಗೆ ಸಂಬಂಧಿಸಿದ ಪ್ರತಿಯೊಂದು ಘಟನೆಗಳೂ ಇತಿಹಾಸವಾಗಿವೆ.

26

ನಟಿ ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದ ಮತ್ತೊಬ್ಬ ನಟಿ ಖುಷ್ಬೂ ಅವರ ಲೈಫೇ ಸೆಟ್ ಆಯ್ತು. ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾ ನಿರ್ದೇಶಕರನ್ನೇ ನಟಿ ಖುಷ್ಬೂ ಮದುವೆ ಮಾಡಿಕೊಂಡು, ಸಿನಿಮಾ ಮತ್ತು ಜೀವನ ಎರಡನ್ನೂ ಸೆಟಲ್ ಮಾಡಿಕೊಂಡರು.

36

'ಮುರೈ ಮಾಮನ್‌' ಸಿನಿಮಾದಿಂದ ಸುಂದರ್‌ ಸಿ ಜೊತೆ ಪ್ರೀತಿ: ಇನ್ನು ನಟಿ ಖುಷ್ಬೂ ಈಗ ಆಯ್ದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜಬರ್ದಸ್ತ್’ ಶೋನಲ್ಲಿ ಜಡ್ಜ್ ಆಗಿದ್ದಾರೆ. ಈ ವೇಳೆ ತಮ್ಮ ಪತಿ ಸುಂದರ್ ಅವರೊಂದಿಗಿನ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ.

46

ಖುಷ್ಬೂಗೆ ಪ್ರಪೋಸ್ ಮಾಡಿದ್ದ ಸುಂದರ್: ಚಿತ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸುಂದರ್ ಸಿ ಅವರು ನಟಿ ಖುಷ್ಬೂಗೆ ವಿಚಿತ್ರವಾಗಿ ಪ್ರಪೋಸ್ ಮಾಡಿದ್ದರಂತೆ. ಮುಂದೆ ನಮಗೆ ಹುಟ್ಟಲಿರುವ ಮಕ್ಕಳು ಹೇಗಿರುತ್ತಾರೆ ಎಂದು ಕೇಳುವ ಮೂಲಕ ಮದುವೆ ಪ್ರಸ್ತಾಪ ಮುಂದಿಟ್ಟಿದ್ದರಂತೆ.

56

ಸ್ಟಾರ್ ನಿರ್ದೇಶಕನಾಗಿದ್ದ ಸುಂದರ್‌ ಅವರು ಪ್ರೀತಿ, ಪ್ರೇಮಕ್ಕೆ ಆಸ್ಪದ ನೀಡದೇ ನೇರವಾಗಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ, ಸುಂದರ್ ಅವರ ಪ್ರಪೋಸ್ ಅನ್ನು ಕೂಡಲೇ ಖುಷ್ಬೂ ಒಪ್ಪಿಕೊಂಡಿದ್ದಾರಂತೆ. ಮದುವೆಯಾದ ನಂತರ ಇದೀಗ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.

66

ಇನ್ನು ಸುಂದರ್ ನಿರ್ದೇಶನದ ಸಿನಿಮಾಗೆ ಮೊದಲು ನಟಿಯಾಗಿ ಆಯ್ಕೆಯಾಗಿದ್ದು, ಅಂದಿನ ಸ್ಟಾರ್ ನಟಿ ಸೌಂದರ್ಯ. ಆದರೆ, ಸೌಂದರ್ಯ ಅವರು ಬಹುಭಾಷೆಗಳಲ್ಲಿ ತುಂಬಾ ಬ್ಯೂಸಿ ಆಗಿದ್ದರಿಂದ ಸಿನಿಮಾಗೆ ಡೇಟ್ ಕೊಡಲಾಗದೇ ರಿಜೆಕ್ಟ್ ಮಾಡಿದ್ದರು. ಇದಾದ ನಂತರ ನಟಿ ಮೀನಾಗೆ ಈ ಸಿನಿಮಾದ ಆಫರ್ ಹೋಗಿತ್ತು. ಆದರೆ, ಅನ್ಯ ಕಾರಣಕ್ಕೆ ಮೀನಾ ಅವರು ಕೂಡ ಸಿನಿಮಾದಿಂದ ದೂರ ಉಳಿದರು.

ಒಂದು ವೇಳೆ ಸೌಂದರ್ಯ ಅಥವಾ ಮೀನಾ ‘ಮುರೈ ಮಾಮನ್‌’ ಸಿನಿಮಾ ಮಾಡಿದರೆ ಖುಷ್ಬೂ-ಸುಂದರ್ ಜೋಡಿ ಆಗ್ತಿರಲಿಲ್ಲ ಅಂತ ಖುಷ್ಬೂ ಹೇಳಿದ್ದಾರೆ.

Read more Photos on
click me!

Recommended Stories