ಶ್ರೀಲೀಲಾ ತುಂಬಾ ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣ್ಕೊಂಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಆದ್ರೆ ಆ ಸಿನಿಮಾಗಳೆಲ್ಲಾ ಹಿಟ್ ಆದ್ವಾ ಅಂತ ಪ್ರಸನ್ನ ಬೆಜವಾಡ ಪ್ರಶ್ನಿಸಿದ್ದಾರೆ. 2 ಗಂಟೆ ಕಥೆ ಆಡಿಯನ್ಸ್‌ಗೆ ಎಂಗೇಜಿಂಗ್ ಆಗಿ ಅನ್ನಿಸಬೇಕು. ಆವಾಗ ಹಾಡುಗಳು, ಡ್ಯಾನ್ಸ್‌ಗಳು ಕಥೆಗೆ ಬೋನಸ್ ಆಗ್ತವೆ. 'ಧಮಾಕಾ' ಚಿತ್ರದಲ್ಲಿ ಕೂಡ ಶ್ರೀಲೀಲಾ ಬೋನಸ್ ಆದ್ರು ಅಂತ ಪ್ರಸನ್ನ ಹೇಳಿದ್ದಾರೆ. ಪ್ರಸನ್ನ ಕಾಮೆಂಟ್ಸ್‌ಗೆ ನೆಟಿಜನ್ಸ್ ರಿಯಾಕ್ಟ್ ಮಾಡ್ತಿದ್ದಾರೆ. ಶ್ರೀಲೀಲಾಗೆ ಕ್ರೆಡಿಟ್ ಕೊಡದೆ ಕಡೆಗಣಿಸ್ತಿದ್ದಾರಾ ಅನ್ನೋ ಅಭಿಪ್ರಾಯ ವ್ಯಕ್ತವಾಗ್ತಿದೆ. ಈ ಚಿತ್ರದಲ್ಲಿ ಶ್ರೀಲೀಲಾ, ರವಿತೇಜ ನಡುವಿನ ಏಜ್ ಗ್ಯಾಪ್ ಬಗ್ಗೆ ಕೂಡ ಅವಾಗ ಚರ್ಚೆ ಆಗಿತ್ತು. ಈಗ ಶ್ರೀಲೀಲಾ ವಯಸ್ಸು 23 ವರ್ಷ, ರವಿತೇಜ ವಯಸ್ಸು 57 ವರ್ಷ.