ಬೆಡ್‌ರೂಮಲ್ಲಿ ಏನಿದೆ ಅನ್ನೋದನ್ನ ರಿವೀಲ್ ಮಾಡಿದ ಮಾಧುರಿ ದೀಕ್ಷಿತ್!

First Published | Sep 11, 2021, 12:32 PM IST

ಕರಣ್‌ ಜೋಹರ್‌ ಅವರ ಫೇಮಸ್‌ ಹಾಗೂ ಕಾಂಟ್ರೋವರ್ಸಿಯಲ್‌ ಚಾಟ್‌ ಶೋ ಕಾಫಿ ವಿಥ್ ಕರಣ್‌ಗೆ ಒಮ್ಮೆ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಇನ್ವೈಟ್‌ ಮಾಡಲಾಗಿತ್ತು. ಆ ಸಮಯದಲ್ಲಿ ಮಾಧುರಿಗೆ ಅವರ ಪತಿ ಶ್ರೀರಾಮ್ ನೆನೆ ಅವರ ಬೆಡ್‌ ರೂಮ್‌ನಲ್ಲಿ ಏನು ಕಾಣಲು ಸಿಗುತ್ತದೆ ಎಂದು ಕೇಳಲಾಯಿತು.ಅದಕ್ಕೆ ನಟಿ ನೀಡಿದ ಉತ್ತರ ಏನು ಗೊತ್ತಾ? 
 

ಒಮ್ಮೆ ಮಾಧುರಿ ದೀಕ್ಷಿತ್ ಕರಣ್‌ ಜೋಹರ್‌ ಅವರ  ಕಾಫಿ ವಿತ್ ಕರಣ್  ಚಾಟ್‌ ಶೋನಲ್ಲಿ  ಬಾಲಿವುಡ್‌ನ ಇನ್ನೊಬ್ಬ ಫೇಮಸ್‌ ನಟಿ ಜೂಹಿ ಚಾವ್ಲಾ ಜೊತೆ ಕಾಣಿಸಿಕೊಂಡರು. ಈ ಇಬ್ಬರು ನಟಿಯರು ತಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮವನ್ನು ಸುಂದರಗೊಳಿಸಿದ್ದರು

ಜೂಹಿ ಮತ್ತು ಮಾಧುರಿ ಇಬ್ಬರೂ ಎಲ್ಲಾ ಪ್ರಶ್ನೆಗಳಿಗೆ ಬುದ್ಧಿ ಮತ್ತು ಹಾಸ್ಯ ತುಂಬಿದ ಉತ್ತರ ನೀಡಿ, ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಈ ಸಮಯದ್ಲಲಿ ಮಾಧುರಿ ದೀಕ್ಷಿತ್ ಅವರ ಪತಿ ಶ್ರೀರಾಮ್ ನೇನೆ ಅವರ ಮಲಗುವ ಕೋಣೆ ಏನು ಸಿಗುತ್ತದೆ ಎಂದು ಕೇಳಲಾಯಿತು.

Tap to resize

ಕಾಫಿ ವಿಥ ಕರಣ್‌ನ ಪ್ರಶ್ನೋತ್ತರ ಸುತ್ತಿನ ಸಮಯದಲ್ಲಿ, ಕರಣ್ ಜೋಹರ್ ಮಾಧುರಿ ದೀಕ್ಷಿತ್ ಅವರನ್ನು ಕೆಲವರ ಬೆಡ್‌ರೂಮ್‌ನಲ್ಲಿ ಏನನ್ನು ಕಾಣುವಿರಿ ಎಂದು ಕೇಳಿದರು. 
 

ಅವರ ಪತಿ ಶ್ರೀರಾಮ್ ನೇನೆ ಅವರ ಮಲಗುವ ಕೋಣೆಯಲ್ಲಿ ಏನು ಸಿಗುತ್ತದೆ ಎಂದು ನಂತರ ಕೇಳಲಾಯಿತು? ನಟಿ ಕರಣ್‌ ಕೇಳಿದ ಪ್ರಶ್ನೆಗೆ ತಕ್ಷಣ ಉತ್ತರಿಸಿದರು ಮತ್ತು ಅವರು,'ಮಾಧುರಿ ದೀಕ್ಷಿತ್' ಎಂದು ಹೇಳಿದರು.

ಮಾಧುರಿಯ ಅವರ ಈ ಉತ್ತರಕ್ಕೆ ಕರಣ್‌ ಹಾಗೂ ಜುಹಿ ನಕ್ಕು ನಟಿಯನ್ನು ರೇಗಿಸಿದ್ದರು. ಅದೇ ಕಾರ್ಯಕ್ರಮದಲ್ಲಿ, ಮಾಧುರಿ ತಮ್ಮ ಪ್ರಸ್ತುತ ನಟಿಯರಲ್ಲಿ ಆಲಿಯಾ ನೆಚ್ಚಿನ ನಟಿ ಎಂದು ಹೇಳಿದರು.

ಈ ದಿನಗಳಲ್ಲಿ ಮಾಧುರಿ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಅದರಲ್ಲಿ ಅವರು ತನ್ನ ಪತಿ, ಡಾಕ್ಟರ್‌ ಶ್ರೀರಾಮ್ ನೆನೆ ಜೊತೆ ಇರುವ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

Latest Videos

click me!