ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ನಟರಿಗೆ ಯಾವಾಗಲೂ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಇದೆ. ಕಾಲಿವುಡ್‌ನ ಎಂಜಿಆರ್, ತೆಲುಗು ಚಿತ್ರರಂಗದ ಎನ್‌ಟಿಆರ್, ಮಲಯಾಳಂನ ನೆಡುಮುಡಿ ವೇಣು, ಕನ್ನಡ ಚಿತ್ರರಂಗದ ರಾಜ್‌ಕುಮಾರ್ ಹೀಗೆ ಭಾರತೀಯ ಚಿತ್ರರಂಗವನ್ನೇ ತಮ್ಮ ನಟನೆಯಿಂದ ಮಿಂಚಿಸಿದ ದಕ್ಷಿಣ ಭಾರತದ ಹಲವು ನಟರಿದ್ದಾರೆ. ಇಂದೂ ಕೂಡ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ನಟರಿಗೆ ಒಳ್ಳೆಯ ಹೆಸರಿನ ಜೊತೆ ಅಪಾರ ಅಭಿಮಾನಿ ಬಳಗವಿದೆ.