369 ಕಾರುಗಳ ಓನರ್ ಸೌತ್‌ನ ಈ ಸೂಪರ್‌ ಸ್ಟಾರ್‌!

First Published Sep 7, 2020, 3:45 PM IST

ದಕ್ಷಿಣ ಸಿನಿಮಾದ ಸೂಪರ್‌ಸ್ಟಾರ್ ಮಲಯಾಳಂ ನಟ ಮಮ್ಮುಟ್ಟಿಗೆ 69 ವರ್ಷದ ಸಂಭ್ರಮ. ಮಮ್ಮುಟ್ಟಿ ಸೆಪ್ಟೆಂಬರ್ 7, 1951ರಂದು ಕೇರಳದ ಆಲಪ್ಪುಳದಲ್ಲಿ ಒಂದು ರೈತ ಕುಟುಂಬದಲ್ಲಿ ಜನಿಸಿದರು. ನಟನ ಪೂರ್ಣ ಹೆಸರು ಮುಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾಣಿಪರಂಬಿಲ್, ಸಿನಿಮಾಕ್ಕಾಗಿ ಮಮ್ಮುಟ್ಟಿ ಎಂದು ಬದಲಾಯಿಸಿಕೊಂಡರು. ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ಮಮ್ಮುಟ್ಟಿಗೆ ಕಾರುಗಳ ಬಗ್ಗೆ ಸಖತ್‌ ಕ್ರೇಜ್.‌ ಕೇವಲ 15-20 ಕಾರುಗಳಲ್ಲ, 369 ಕಾರುಗಳಿವೆ ಈ ಸೂಪರ್ ಸ್ಟಾರ್ ಬಳಿ.

ಕೆಲವು ವರ್ಷಗಳ ಹಿಂದೆ ದೇಶದ ಮೊದಲ ಮಾರುತಿ -800 ಖರೀದಿಸುವ ಇಚ್ಛೆಯನ್ನು ಮಮ್ಮುಟಿ ವ್ಯಕ್ತಪಡಿಸಿದ್ದರು. ಮಮ್ಮುಟ್ಟಿ ತಮ್ಮ ಕಾರುಗಳಿಗಾಗಿ ಪ್ರತ್ಯೇಕ ಗ್ಯಾರೇಜ್ ನಿರ್ಮಿಸಿದ್ದಾರೆ. ಕಾರು ಓಡಿಸುವ ಕ್ರೇಜ್ ಇದೆ ಮುಮ್ಮಟಿಗೆ.
undefined
ಮಮ್ಮುಟ್ಟಿ ಸೌತ್‌ನಲ್ಲಿ ಆಡಿ ಕಾರು ಖರೀದಿಸಿದ ಮೊದಲ ಸ್ಟಾರ್‌.ನಮ್ಮ ದೇಶದ ಮಾರುತಿ ಕಾರು ಸಖತ್‌ ಇಷ್ಷ. ನಟನ ಮೊದಲ ಕಾರು ಮಾರುತಿಯದೇ ಆಗಿತ್ತು ಹಾಗೂ ಅವರ 369 ಕಾರುಗಳ ಕಲೆಕ್ಷನ್‌ನಲ್ಲಿ ಮಾರುತಿಯ ಮೂರು ಮಾಡೆಲ್‌ ಕಾರುಗಳಿವೆ.
undefined
ಮೆಗಾಸ್ಟಾರ್ ಮಮ್ಮುಟ್ಟಿ ಸಂಗ್ರಹದಲ್ಲಿ ಜಾಗ್ವಾರ್ XJL (ಕ್ಯಾವಿಯರ್) ಲೇಟೆಸ್ಟ್‌. ಪೆಟ್ರೋಲ್ ಹಾಗೂ ಡೀಸೆಲ್ಎರಡೂ ಆವೃತ್ತಿಗಳಿವೆ. ಅಷ್ಠೇ ಅಲ್ಲ ಅದರ ನೋಂದಣಿ ಸಂಖ್ಯೆ ಕೆಎಲ್ 7 ಬಿಟಿ 369. ಅಲ್ಲದೇ ಈ ನಟನ ಬಹುತೇಕ ಕಾರುಗಳ ಸಂಖ್ಯೆಯಲ್ಲಿ 369 ಇರುತ್ತದೆ.
undefined
ಇದಲ್ಲದೆ, ಮಮ್ಮುಟ್ಟಿಯ ಬಳಿ ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್ಸಿ 200, ಫೆರಾರಿ, ಮರ್ಸಿಡಿಸ್ ಮತ್ತು ಆಡಿ , ಪೋರ್ಷೆ, ಟೊಯೋಟಾ ಫಾರ್ಚೂನರ್, Mini Cooper S, F10 BMW 530d ಮತ್ತು 525d, E46 BMW M3, Mitsubishi Pajero Sport, Mitsubishi Pajero Sport, ವೋಕ್ಸ್‌ವ್ಯಾಗನ್ ಪಾಸಾಟ್ X2 ಮತ್ತು ಅನೇಕ ಎಸ್‌ಯುವಿಗಳು ಇವೆ. ಮಾಡಿಫೈಡ್‌ಐಷರ್‌ನ ಕಾರವಾನ್ ಸಹ ಇವರ ಬಳಿ ಇದೆ.
undefined
ಮಮ್ಮುಟ್ಟಿ 1979ರಲ್ಲಿ ಸುಲಾಫತ್‌ರನ್ನು ವಿವಾಹವಾದರು. ಮಗ ದುಲ್ಕಿರ್ ಸಲ್ಮಾನ್ ಮತ್ತು ಮಗಳು ಕುಟ್ಟಿ ಸುರುಮಿ. ದುಲ್ಕಿರ್ ಸಲ್ಮಾನ್ ಸೌತ್‌ನ ಪ್ರಸಿದ್ಧ ನಟ.
undefined
ಮಮ್ಮುಟ್ಟಿ ಮಗ ದುಲ್ಕಿರ್ ಸಲ್ಮಾನ್ವಾಸ್ತುಶಿಲ್ಪಿ ಅಮಲ್ ಸೂಫಿಯಾರನ್ನು ಡಿಸೆಂಬರ್ 22, 2011 ರಂದು ಮದುವೆಯಾಗಿದ್ದಾರೆ. ಅಮಲ್ ಉತ್ತರ ಭಾರತೀಯ ಮುಸ್ಲಿಂ, ಅವರ ಕುಟುಂಬವು ನಂತರ ದಕ್ಷಿಣಕ್ಕೆ ಸ್ಥಳಾಂತರಗೊಂಡಿತು. 5 ಮೇ 2017 ರಂದು ದುಲ್ಕಿರ್ ಸಲ್ಮಾನ್ ಮಗಳ ತಂದೆಯಾದರು.
undefined
ದುಲ್ಕಿರ್ 2012 ರ ಮಲಯಾಳಂ ಚಿತ್ರ 'ಸೆಕೆಂಡ್ ಶೋ' ಮೂಲಕ ಚಿತ್ರರಂಗಕ್ಕೆಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. ದುಲ್ಕಿರ್ ಚೆನ್ನೈ ಮೂಲದ ವೆಬ್ ಪೋರ್ಟಲ್, ಕಾರು ವ್ಯಾಪಾರ ಮತ್ತು ದಂತ ವ್ಯಾಪಾರ ಚೈನ್‌ಮಾಲೀಕರೂ ಹೌದು.
undefined
ಮಮ್ಮುಟ್ಟಿಗೆ ಇಬ್ಬರು ಕಿರಿಯ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಕೊಟ್ಟಾಯಂನ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಅಧ್ಯಯನವನ್ನು ಮಾಡಿದರು. 1960ರಲ್ಲಿ ತಂದೆ ಎರ್ನಾಕುಲಂಗೆ ಸ್ಥಳಾಂತರಗೊಂಡರು. ಇಲ್ಲಿ ಅವರು ತಮ್ಮ ಶಾಲಾ ಶಿಕ್ಷಣ ಮತ್ತು ನಂತರ ಎರ್ನಾಕುಲಂ ಕಾನೂನು ಕಾಲೇಜಿನಿಂದ LLBಪೂರ್ಣಗೊಳಿಸಿದರು
undefined
ಮಮ್ಮುಟ್ಟಿ ಮತ್ತು ದಕ್ಷಿಣ ಚಿತ್ರಗಳ ನಟ ಮೋಹನ್ ಲಾಲ್ ಫ್ರೆಂಡ್ಸ್‌. 56 ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಎಲ್ಲಾ ಚಿತ್ರಗಳು ಸೂಪರ್‌ಹಿಟ್ ಆಗಿವೆ.
undefined
ಚಿಕ್ಕ ವಯಸ್ಸಿನಲ್ಲಿಯೇ, ಮಮ್ಮುಟ್ಟಿ ಸಿಗರೇಟಿನ ಚಟಕ್ಕೆ ಒಳಗಾಗಿದ್ದರು. ಆದರೆ ನಂತರ ಅವನು ತನ್ನ ಮಕ್ಕಳ ಸಲುವಾಗಿ ಇದನ್ನು ತ್ಯಜಿಸಿದರು.ಎರ್ನಾಕುಲಂನ ಪನಂಪಿಲ್ಲಿ ನಗರದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ ಈ ನಟ.
undefined
click me!