'ಹೀರಾಮಂಡಿಯ ಫರೀದಾಬೆನ್ ಸೊನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮುಂಬೈನಲ್ಲಿ ವಿವಾಹವಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇವರಿಬ್ಬರ ಅಂತರ್ಧರ್ಮೀಯ ವಿವಾಹಕ್ಕೆ ಸೊನಾಕ್ಷಿಯ ತಂದೆ, ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರ ಚಿತ್ರಗಳ ಮೂಲಕ ಈ ಇಬ್ಬರೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಸೋನಾಕ್ಷಿ 2010 ರಲ್ಲಿ ದಬಾಂಗ್‌ನೊಂದಿಗೆ ಪಾದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ಬಿಡುಗಡೆಯಾದ ನೋಟ್‌ಬುಕ್ ಆಗಿತ್ತು. ಅವರು 'ಡಬಲ್ ಎಕ್ಸ್‌ಎಲ್'ನಲ್ಲಿ ಒಟ್ಟಿಗೆ ನಟಿಸಿದರು.
ಅಷ್ಟೇ ಅಲ್ಲ, ಇವರಿಬ್ಬರ ಪರಿಚಯ ಮಾಡಿಸಿದ್ದೇ ಸಲ್ಮಾನ್ ಖಾನ್. ನಂತರ ಇಬ್ಬರ ನಡುವೆ ಗೆಳೆತನ ಚಿಗುರಿತು. ಸೋನಾಕ್ಷಿ ಜಹೀರ್ ಜೊತೆಗಿನ ವದಂತಿಯ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು. ಆದರೆ ಈ ಜೋಡಿ ಮಾತ್ರ ತಾವು ಕೇವಲ ಸ್ನೇಹಿತರು ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದ್ದರು.
ಕಳೆದ ವರ್ಷ ಸೋನಾಕ್ಷಿಯ ಹುಟ್ಟುಹಬ್ಬದಂದು ಜಹೀರ್ ತಮ್ಮ ಶೂಟಿಂಗ್ ಸೆಟ್‌ಗಳಿಂದ ಮುದ್ದಾದ ಚಿತ್ರಗಳ ಸರಮಾಲೆಯನ್ನು ಹಂಚಿಕೊಂಡಿದ್ದರು.
ಅದರೊಂದಿಗೆ, 'ಜನ ಏನಾದರೂ ಹೇಳುತ್ತಾರೆ, ಮಾತಾಡುವುದೇ ಜನರ ಕೆಲಸ. ಆದರೆ ನೀನು ಯಾವಾಗಲೂ ನನ್ನ ಮೇಲೆ ಒಲವು ತೋರಬಹುದು, ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದರು.
ಕಳೆದ ವಾರ ಸೊನಾಕ್ಷಿಯ ಹುಟ್ಟುಹಬ್ಬದಂದು, ಜಹೀರ್ ತಮ್ಮ ಮುದ್ದಾದ ಮತ್ತು ಸ್ನೇಹಶೀಲ ಚಿತ್ರಗಳನ್ನು ಒಟ್ಟಿಗೆ ಹರಿಬಿಟ್ಟು, 'ಜನ್ಮದಿನದ ಶುಭಾಶಯಗಳು Sonzzz,' ಎಂದು ಬರೆದಿದ್ದರು.
ಇಷ್ಟಾದರೂ ಇವರಿಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ ಈಗ ಜೋಡಿಯು ಹಸೆಮಣೆ ಏರುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.
ಸೋನಾಕ್ಷಿ ಮುಸ್ಲಿಂ ನಟನನ್ನು ವಿವಾಹವಾಗುತ್ತಿರೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಜೋರಾಗಿವೆ. ರಾಮಾಯಣ ಎಂದೇ ಮನೆ ಹೆಸರಿರುವ, ಮನೆಯಲ್ಲಿ ಎಲ್ಲರ ಹೆಸರೂ ರಾಮಾಯಣದಿಂದಲೇ ಪಡೆದವಾಗಿವೆ. ಆದರೆ, ಇದೀಗ ನಟಿ ಮುಸ್ಲಿಂ ಕೈ ಹಿಡಿಯುತ್ತಿರುವುದು ಸಾಕಷ್ಟು ನೆಟ್ಟಿಗರಿಗೆ ಬೇಸರ ತಂದಿದೆ.