ನಿಶ್ಚಿತಾರ್ಥ ತುಂಬಾ ಸರಳವಾಗಿ ಮತ್ತು ಸೂಪರ್ ಆಗಿ ನಡೆಯಿತು. ಆ ವಿಷಯದಲ್ಲಿ ನಾನು ಸಂತೋಷವಾಗಿದ್ದೇನೆ ಎಂದು ಶೋಭಿತಾ ಹೇಳಿದ್ದಾರೆ. ಸಂಪ್ರದಾಯಗಳು ಎಂದರೆ ನನಗೆ ತುಂಬಾ ಇಷ್ಟ. ಅದೇ ರೀತಿ ಕುಟುಂಬ ಸದಸ್ಯರನ್ನು ಮತ್ತು ನಮ್ಮ ಸಂಸ್ಕೃತಿಯನ್ನು ನಾನು ತುಂಬಾ ಗೌರವಿಸುತ್ತೇನೆ. ಮದುವೆಯಾಗಿ, ಮಕ್ಕಳನ್ನು ಹೆತ್ತು, ಕುಟುಂಬದವರೊಂದಿಗೆ ಸಂತೋಷವಾಗಿರಬೇಕೆಂದು ಯಾವಾಗಲೂ ಬಯಸುತ್ತೇನೆ.