ಆದರೆ, ಕನ್ನಡ ಚಿತ್ರರಂಗದಲ್ಲಿ ಈ ತರಹ ಸೇವೆ ಮಾಡಿದವರು ಯಾರೂ ಇಲ್ಲವೆಂದೇ ಹೇಳಬಹುದು. ಕನ್ನಡದಲ್ಲಿ ಶಶಿ ಕುಮಾರ್ ಡ್ಯಾನ್ಸ್ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದಿದ್ದರೂ ಡ್ಯಾನ್ಸ್ ಮಾಸ್ಟರ್ ಇರುತ್ತಿದ್ದರು. ಇನ್ನು ದೊಡ್ಡ ಮನೆಯ ಕುಡಿಗಳಾದ ನಟ ಶಿವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೂಡ ಉತ್ತಮ ಡ್ಯಾನ್ಸರ್ ಆಗಿದ್ದರೂ, ಸ್ವಂತ ಸ್ಟೆಪ್ಸ್ ಮಾಡಿಕೊಂಡಿಲ್ಲ. ಇನ್ನು ನಟ ವಿನೋದ್ ರಾಜ್ ಕುಮಾರ್ ಕೂಡ ಉತ್ತಮ ಡ್ಯಾನ್ಸರ್ ಆಗಿದ್ದರೂ ನೃತ್ಯ ಸಂಯೋಜಕರು ಇಲ್ಲದೇ ಡ್ಯಾನ್ಸ್ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ನೃತ್ಯ ಸಂಯೋಜಕರ ನೆರವಿನಿಂದಲೇ ಹೊಸ ಡ್ಯಾನ್ಸ್ ಮಾಡುತ್ತಾರೆ.