'ಅಮರನ್' ಚಿತ್ರದ ಯಶಸ್ಸಿಗೆ ರಾಜ್‌ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್, ರೆಡ್ ಜೈಂಟ್ ಮೂವೀಸ್, ಶಿವಕಾರ್ತಿಕೇಯನ್ ಸೇರಿದಂತೆ ಎಲ್ಲಾ ಚಿತ್ರತಂಡಕ್ಕೆ ಚಿತ್ರಮಂದಿರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪನ್ನೀರ್‌ಸೆಲ್ವಂ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತಮ ಕಥಾಹಂದರವಿರುವ ಚಿತ್ರಗಳು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಎಂಬುದಕ್ಕೆ 'ಅಮರನ್' ಚಿತ್ರದ ಯಶಸ್ಸೇ ಸಾಕ್ಷಿ.