ಸೀರೆಯಲ್ಲಿ ಅತಿಲೋಕ ಸುಂದ್ರಿ ನಮ್ ಪಟಾಕ ಪೋರಿ… ಸೀರೆ ಜೊತೆ ಅಮ್ಮ, ಅಜ್ಜಿಯ ಪ್ರೀತಿ ನೆನಪಿಸಿಕೊಂಡ ನಟಿ

First Published | Nov 13, 2024, 5:08 PM IST

ಪಟಾಕಿ ಪೋರಿ ನಭಾ ನಟೇಶ್ ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತುಂಬಾನೆ ಮುದ್ದಾಗಿ ದೇವತೆ ಥರ ಕಾಣಿಸ್ತಿದ್ದಾರೆ.
 

ನಟ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ವಜ್ರಕಾಯ ಸಿನಿಮಾದಲ್ಲಿ ನಟಿಸಿದ ನತಿ ನಭಾ ನಟೇಶ್ (Nabha Natesh) ಕನ್ನಡಿಗರಿಗೆ ಪಟಾಕ, ಪಟಾಕಿ ಪೋರಿ ಅಂತಾನೆ ಫೇಮಸ್ ಆಗಿರುವ ನಟಿ. 
 

ಸಿನಿಮಾ ಆರಂಭಿಸಿದ್ದು ಕನ್ನಡದಲ್ಲೇ ಆದ್ರೂ ಸದ್ಯ ನಭಾ ತೆಲುಗು ಚಿತ್ರರಂಗದಲ್ಲಿ(Telugu Film Industry) ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದ ನಭಾ ತೆಲುಗಿನಲ್ಲಿ ಇಲ್ಲಿವರೆಗೆ ಸುಮಾರು 9 ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

Tap to resize

ಶೃಂಗೇರಿ ಮೂಲದ ಬೆಡಗಿ ನಭಾ ನಟೇಶ್ ಸದ್ಯ ಸ್ವಯಂಭು ಎನ್ನುವ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

ಒಮ್ಮೊಮ್ಮೆ ಗ್ಲಾಮರಸ್ ಲುಕ್, ಒಮ್ಮೊಮ್ಮೆ ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಭಾ ನಟೇಶ್ ಈ ಬಾರಿ ತುಂಬಾನೆ ಟ್ರೆಡಿಶನಲ್ ಆಗಿ ಸೀರೆಯುಟ್ಟು ಡಿವೈನ್ ಲುಕ್ ನಲ್ಲಿ ಕಂಗೊಳಿಸ್ತಾ ಇದ್ದಾರೆ.
 

ತಮ್ಮ ಸೀರೆಯ ಫೋಟೋಗಳ ಜೊತೆ ನಭಾ ಮುದ್ದಾ ಕ್ಯಾಪ್ಶನ್ ಬರೆದಿದ್ದು ಆರು ಗಜಗಳೊಂದಿಗೆ (6 yard saree) ನನ್ನ ಪ್ರೇಮ ಸಂಬಂಧ. ಅಲ್ಲಿ ಮೂರು ತಲೆಮಾರುಗಳ ಪ್ರೀತಿ ಇದೆ: ನನ್ನ ಅಜ್ಜಿಯ ಬುದ್ಧಿವಂತಿಕೆ, ನನ್ನ ಅಮ್ಮನ ಕೃಪೆ ಮತ್ತು ನನ್ನ ಕನಸುಗಳು, ಎಲ್ಲವೂ ಒಂದಾಗಿ ಹರಿಯುತ್ತವೆ. ಸೀರೆ ಕೇವಲ ಬಟ್ಟೆಯ ತುಂಡು ಅಲ್ಲ, ಅದು ದಾರಗಳಲ್ಲಿ ನನ್ನ ಗುರುತಾಗಿದೆ ಎಂದು ಬರೆದುಕೊಂಡಿದ್ದಾರೆ. 
 

ನಭಾ ನಟೇಶ್ ಸೀರೆ ಲುಕ್ ನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ತುಂಬಾನೆ ಮುದ್ದಾಗಿ ಕಾಣಿಸ್ತೀರ, ಅತಿಲೋಕ ಸುಂದರಿ, ಡಿವೈಬ್ ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಹರಿಸಿದ್ದಾರೆ ಅಭಿಮಾನಿಗಳು. 
 

ಕರಿಯರ್ ಬಗ್ಗೆ ಹೇಳೋದಾದ್ರೆ ನಭಾ ನಟೇಶ್‌ಗೆ ಕೆಲವು ತಿಂಗಳುಗಳ ಹಿಂದೆ ಅಪಘಾತವಾಗಿತ್ತು. ಇದರಿಂದ ಸಿನಿಮಾ ಸ್ವಲ್ಪ ದೂರ ಉಳಿದಿದ್ದರು. 2021 ರಿಂದ ಮೂರು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದ್ದ ನಟಿ 2024 ರಿಂದ ಟಾಲಿವುಡ್‌ನಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. 
 

Latest Videos

click me!