ಕೆಲವು ದಿನಗಳ ಹಿಂದೆ 'ಮದ ಗಜ ರಾಜ' ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ನಟ ವಿಶಾಲ್, ಕೈ ನಡುಕದಿಂದ, ತೊದಲು ನುಡಿಯಲ್ಲಿ ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶಾಲ್‌ಗೆ ಏನಾಯಿತು ಎಂದು ಅನೇಕರು ಪ್ರಶ್ನಿಸಿದ್ದಾರೆ. ಅವರಿಗೆ ವೈರಲ್ ಜ್ವರ ಇದೆ ಎಂದು, ಅದಕ್ಕಾಗಿಯೇ ಅವರು ಕೈ ನಡುಕದಿಂದ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ. ಈ ನಡುವೆ, ಗಾಯಕಿ ಸುಚಿತ್ರಾ, ವಿಶಾಲ್ ಅವರ ಈ ಸ್ಥಿತಿಯನ್ನು ನೋಡಿ ಸಂತೋಷಪಟ್ಟಿದ್ದಾರೆ ಎಂದು ಹೇಳಿರುವುದು ವೈರಲ್ ಆಗಿದೆ.