ಆದರೆ ಮೊದಲ ಹಾಡು ರಾಜಮೌಳಿಗೆ ಓಕೆ ಅನಿಸ್ತಿತ್ತು. ಆದ್ರೆ 'ಪಟ್ಟಾನಂದಿ ಪ್ರೇಮ... ಹಾಡು ಅವರಿಗೆ ಇಷ್ಟವಾಗಲಿಲ್ಲ. ಕೀರವಾಣಿ ಬಳಿ, 'ಅಣ್ಣ ಈ ಹಾಡು ಚೆನ್ನಾಗಿಲ್ಲ' ಅಂದ್ರಂತೆ. ಕೀರವಾಣಿ, 'ಇಲ್ಲ ರಾಜಮೌಳಿ, ರಾಘವೇಂದ್ರ ರಾವ್ ಆಯ್ಕೆ ಮಾಡಿದ್ರೆ ಅದರಲ್ಲಿ ಏನೋ ಇರುತ್ತೆ. ಹಾಡು ಚೆನ್ನಾಗಿ ಹಿಟ್ ಆಗುತ್ತೆ ನೋಡು' ಅಂದ್ರಂತೆ. 'ಸ್ಟೂಡೆಂಟ್ ನಂಬರ್ 1' ಆಡಿಯೋ ಕ್ಯಾಸೆಟ್‌ಗಳು ರಿಲೀಸ್ ಆಗಿ ಎಲ್ಲ ಹಾಡುಗಳು ಸೂಪರ್ ಹಿಟ್ ಆದವು. ಸಿನಿಮಾ ಈ ಎರಡು ಹಾಡುಗಳು ಯುವಕರು ತುಂಬ ಎಂಜಾಯ್ ಮಾಡಿದ್ರು. ಆಗ ಅಂದುಕೊಂಡೆ, 'ಓಹೋ ನಮಗೆ ಹಾಡುಗಳ ಬಗ್ಗೆ ಏನೂ ಗೊತ್ತಿಲ್ಲ' ಅಂತ ರಾಜಮೌಳಿ ನಗುತ್ತಾ ಒಂದು ಸಂದರ್ಶನದಲ್ಲಿ ಹೇಳಿದ್ರು.