ವಿದ್ಯಾ ಬಾಲನ್ ಸೀಕ್ರೆಟ್ ಓಪನ್ ಮಾಡಿದ ಶ್ರೇಯಾ ಘೋಷಾಲ್..! ಇಷ್ಟು ವರ್ಷ ಏನೋ ಅಂದ್ಕೊಂಡಿದ್ರಾ?

Published : Feb 21, 2025, 10:25 PM ISTUpdated : Feb 21, 2025, 10:41 PM IST

ಭಾರತದ ಬಹಳಷ್ಟು ಭಾಷೆಗಳಲ್ಲಿ ಹಾಡಿರುವ ಶ್ರೇಯಾ ಘೋಷಾಲ್ ಹಿಂದಿ ಗೀತೆಗಳನ್ನು ಹೆಚ್ಚು ಹಾಡಿದ್ದಾರೆ. ಆದರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಬಹಳಷ್ಟು ಚಿತ್ರಗೀತೆಗಳಿಗೂ ಶ್ರೇಯಾ ಧ್ವನಿ ನೀಡಿದ್ದಾರೆ. ವಿದ್ಯಾ ಬಾಲನ್ ಬಗ್ಗೆ... 

PREV
110
ವಿದ್ಯಾ ಬಾಲನ್ ಸೀಕ್ರೆಟ್ ಓಪನ್ ಮಾಡಿದ ಶ್ರೇಯಾ ಘೋಷಾಲ್..! ಇಷ್ಟು ವರ್ಷ ಏನೋ ಅಂದ್ಕೊಂಡಿದ್ರಾ?

ಭಾರತದ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಮೂಲತಃ ರಾಜಸ್ಥಾನದವರು. ಆದರೆ, ಮುಂಬೈನಲ್ಲಿ ಗಾಯಕಿಯಾಗಿ ಸೆಟ್ಲ್ ಆಗಿದ್ದಾರೆ. 

210

ಭಾರತದ ಬಹಳಷ್ಟು ಭಾಷೆಗಳಲ್ಲಿ ಹಾಡಿರುವ ಶ್ರೇಯಾ ಘೋಷಾಲ್ ಹಿಂದಿ ಗೀತೆಗಳನ್ನು ಹೆಚ್ಚು ಹಾಡಿದ್ದಾರೆ. ಆದರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಬಹಳಷ್ಟು ಚಿತ್ರಗೀತೆಗಳಿಗೂ ಶ್ರೇಯಾ ಧ್ವನಿ ನೀಡಿದ್ದಾರೆ. 

310

ಸಂದರ್ಶನವೊಂದರಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ ಒಂದು ಪ್ರಶ್ನೆ ಕೇಳಲಾಗಿದೆ. 'ನಿಮ್ಮ ಫೇವರೆಟ್ ನಟಿ ಯಾರು? ಯಾವ ನಟಿಗೆ ನಿಮ್ಮ ಧ್ವನಿ ಹೆಚ್ಚು ಸ್ಯೂಟ್ ಆಗುತ್ತೆ ಅಂತ ನಿಮಗೆ ಅನ್ನಿಸುತ್ತೆ..?
 

410

ಅಂತ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಶ್ರೇಯಾ ಕೊಟ್ಟ ಉತ್ತರ ತಮಾಷೆ ಹಾಗೂ ವಿಶೇ‍ಷವಾಗಿದೆ. ಆ ಪ್ರಶ್ನೆಗೆ ಉತ್ತರಿಸಿರುವ ಶ್ರೇಯಾ ಘೋಷಾಲ್, 'ನಾನು ಈಗಿನ ಜನರೇಶನ್ನಿನ ಎಲ್ಲಾ ನಟಿಯರಿಗೂ ಹಾಡಿದ್ದೇನೆ. 

510

ಆದರೆ, ನಾನು ಒಮ್ಮೆ ಹಳೆಯ ನಟಿಯರಿಗೆ ಹಾಡಲು ಸಾಧ್ಯವಾದರೆ, ಆ ಕಾಲಕ್ಕೆ, ಅಂದರೆ ಬ್ಲಾಕ್ & ವೈಟ್ ಕಾಲಕ್ಕೆ ಹೋಗಲು ಸಾಧ್ಯವಾದರೆ ನಾನು ವಹೀದಾ ರೆಹಮಾನ್‌ಜಿ ಹಾಗೂ ಮಧು ಬಾಲಾಜಿ ಅವರಿಗೆ ಹಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ. 

610

ಅಷ್ಟೇ ಅಲ್ಲ, ನಾನು ಬಹುಶಃ ಓಲ್ಡ್ ಹಾರ್ಟ್ ಹೊಂದಿದ್ದೇನೆ ಅಂತ ಅನ್ನಿಸುತ್ತೆ..' ಅಂತ ತಮಾಷೆ ಮಾಡಿದ್ದಾರೆ. ಜೊತೆಗೆ, ಈಗಿನ ಜನರೇಶನ್ ನಟಿಯರಲ್ಲಿ ನಾನು ಎಲ್ಲರಿಗೂ ಹಾಡಿದ್ದೇನೆ. 
 

710

ಆದರೆ, ಸಂಗೀತ ಗೊತ್ತಿರುವ ಗಾಯಕಿಯರಿಗೆ ಹಾಡಲು ನನಗೆ ಹೆಚ್ಚು ಅನುಕೂಲ ಆಗುತ್ತೆ, ಅದು ಹೆಚ್ಚು ಇಷ್ಟ ಆಗುತ್ತೆ.. ಉದಾಹರಣೆಗೆ ವಿದ್ಯಾ ಬಾಲನ್‌.. ಅವರಿಗೆ ಸಂಗೀತ ಗೊತ್ತು, ಜೊತೆಗೆ ಅವರು ಸ್ವತಃ ಹಾಡಬಲ್ಲರು. 
 

810

ಆಗ ಲಿಪ್ ಸಿಂಕ್ ಕೂಡ ಈಸಿ ಆಗುತ್ತೆ.. ಆದರೆ, ನನಗೆ ನಟಿ ಐಶ್ವರ್ಯಾ ರೈ ಕೂಡ ತುಂಬಾ ಇಷ್ಟ ಹಾಗೂ ಅವರ ಮೇಲೆ ಅಭಿಮಾನ ಜಾಸ್ತಿ. ಕಾರಣ, ನಟಿ ಐಶ್ವರ್ಯಾ ರೈ ಅವರು ಹಾಡಿಗೆ ಚೆನ್ನಾಗಿ ಎಕ್ಸ್‌ಪ್ರೆಶನ್ ಕೊಡುತ್ತಾರೆ. 

910

ಜೊತೆಗೆ, ಅವರು ಲಿಪ್ ಸಿಂಕ್ ಕೂಡ ಚೆನ್ನಾಗಿ ಮಾಡ್ತಾರೆ. ಒಂದು ಹಾಡು ಎಷ್ಟೇ ಚೆನ್ನಾಗಿ ಹಾಡಿದ್ರೂ ಕೂಡ ಅದು ಪರಿಪೂರ್ಣ ಅಂತ ಸಿನಿಮಾದಲ್ಲಿ ಅನ್ನಿಸಬೇಕಾದ್ರೆ, ಆ ಹಾಡಿಗೆ ನಟಿಸುವ ನಟಿ ಚೆನ್ನಾಗಿ ಲಿಪ್ ಸಿಂಕ್ ಮಾಡ್ಬೇಕು. 

1010

ಅದನ್ನು ಐಶ್ವರ್ಯಾ ರೈ ತುಂಬಾ ಚೆನ್ನಾಗಿ ಮಾಡ್ತಾರೆ. ಜೊತೆಗೆ, ನಾನು ಹಾಡಿದ ಮೊದಲ ಹಾಡಿಗೆ ಆಕ್ಟ್ ಮಾಡಿರೋ ನಟಿ ಐಶ್ವರ್ಯಾ ರೈ. ಸೋ, ಅವ್ರು ನನ್ ಆಲ್‌ ಟೈಮ್ ಫೇವರೆಟ್..' ಎಂದಿದ್ದಾರೆ ಗಾಯಕಿ ಶ್ರೇಯಾ ಘೋಷಾಲ್.

click me!

Recommended Stories