ನಾಗ ಚೈತನ್ಯ ಮದುವೆಯಾದ ಮೂರೇ ತಿಂಗಳಿಗೆ ಅಚ್ಚರಿ ನಿರ್ಧಾರ ತೆಗೆದುಕೊಂಡ ಶೋಭಿತಾ

Published : Feb 21, 2025, 10:16 PM ISTUpdated : Feb 21, 2025, 10:19 PM IST

 ಹೀರೋ ನಾಗ ಚೈತನ್ಯ ಜೊತೆ ಶೋಭಿತಾ ದುಲಿಪಾಲ ಮದುವೆಯಾಗಿ ಮೂರು ತಿಂಗಳು ಅಷ್ಟೇ. ಇದೀಗ ಶೋಭಿತಾ ತೆಗೆದುಕೊಂಡ ಅಚ್ಚರಿ ನಿರ್ಧಾರ ಹೊರಬಿದ್ದಿದೆ. 

PREV
15
ನಾಗ ಚೈತನ್ಯ ಮದುವೆಯಾದ ಮೂರೇ ತಿಂಗಳಿಗೆ ಅಚ್ಚರಿ ನಿರ್ಧಾರ ತೆಗೆದುಕೊಂಡ ಶೋಭಿತಾ

ಬಾಲಿವುಡ್, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಕೆಲವು ಸಿನಿಮಾಗಳಲ್ಲಿ  ನಟಿಸಿದ ಶೋಭಿತಾ ದೂಳಿಪಾಲ, ಮೂರು ತಿಂಗಳ ಹಿಂದೆ ನಟ ನಾಗ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೈರೆಕ್ಟರ್ ಮಣಿರತ್ನಂ ಅವರ `ಪೊನ್ನಿಯನ್ ಸೆಲ್ವನ್ 1`, `ಪೊನ್ನಿಯನ್ ಸೆಲ್ವನ್ 2` ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಭಾರಿ ಜನಪ್ರೀಯತೆ ಗಳಿಸಿಕೊಂಡಿದ್ದಾರೆ.  

25

2024 ಡಿಸೆಂಬರ್ 4 ರಂದು ನಾಗ ಚೈತನ್ಯ  ಶೋಭಿತಾ ದೂಳಿಪಾಲ ಮದುವೆ ನಡೆದಿತ್ತು . ಹೈದರಾಬಾದ್‌ನಲ್ಲಿ ನಡೆದ ಈ ಮದುವೆಗೆ ಆಪ್ತರು, ಸಂಬಂಧಿಕರು ಹಾಜರಾಗಿದ್ದರು. ವಿವಾಹ ಅದ್ಧೂರಿಯಾಗಿ ನಡೆದಿತ್ತು. ಇಷ್ಟೇ ಅಲ್ಲ ದೇಶಾದ್ಯಂತ ಸದ್ದು ಮಾಡಿತ್ತು. ನಾಗ ಚೈತನ್ಯಗೆ ಇದು ಎರಡನೇ ಮದುವೆ.

35

2017ರಲ್ಲಿ ನಾಗ ಚೈತನ್ಯ, ನಟಿ ಸಮಾಂತ ರುತ್ ಪ್ರಭು ಜೊತೆ ಮದುವೆಯಾಗಿದ್ದರು. ಆದರೆ ಭಿನ್ನಾಭಿಪ್ರಾಯ, ಮನಸ್ತಾಪಗಳ ಕಾರಣ ಈ ಸಂಬಂಧ ಮುರಿದು  ಬಿದ್ದು. 2021ರಲ್ಲಿ ಇಬ್ಬರು ಅಧಿಕೃತವಾಗಿ ವಿಚ್ಚೇದನ ಪಡೆದುಕೊಂಡಿದ್ದರು. ಸಮಂತಾ ಜೊತೆ ಡಿವೋರ್ಸ್ ಆಗಲು ಶೋಭಿತಾ ಕಾರಣ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ  ಇದರ ಬಗ್ಗೆ 'ತಂಡೇಲ್' ಸಿನಿಮಾ ಪ್ರಮೋಷನ್‌ನಲ್ಲಿ ನಾಗ ಚೈತನ್ಯ ಸ್ಪಷ್ಟನೆ ಕೊಟ್ಟಿದ್ದರು. 

45
ಶೋಭಿತಾ ಜೊತೆ ಮದುವೆ

ಶೋಭಿತಾ ಜೊತೆ ಮದುವೆ ಆದ್ಮೇಲೆ ನಾಗ ಚೈತನ್ಯ ಅವರ ಬಹುನಿರೀಕ್ಷಿತ 'ತಂಡೇಲ್' ಸಿನಿಮಾ ರಿಲೀಸ್ ಆಯ್ತು. ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ನಾಗ ಚೈತನ್ಯ ಕೆರಿಯರ್‌ನಲ್ಲಿ ಒಂದು ಮೈಲಿಗಲ್ಲು ಆಯ್ತು. ಸೊಸೆ ಶೋಭಿತಾ ಕಾಲಿಟ್ಟ ಸಮಯ ಚೆನ್ನಾಗಿದೆ ಅಂತ ನಾಗಾರ್ಜುನ ಹೊಗಳಿದ್ರು.

55
ಶೋಭಿತಾ ತಗೊಂಡಿರೋ ನಿರ್ಧಾರ:

ಈಗ ಮದುವೆ ಆದ್ಮೇಲೆ ಶೋಭಿತಾ ಒಂದು ಶಾಕಿಂಗ್ ನಿರ್ಧಾರದ ಬಗ್ಗೆ ಕೆಲವು ವಿಷಯಗಳು ಹೊರಗೆ ಬಂದಿವೆ. ಮದುವೆ ಆಗೋಕೆ ಮುಂಚೆ ಬೋಲ್ಡ್ ಡ್ರೆಸ್‌ಗಳಲ್ಲಿ ಶೋಭಿತಾ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಆದರೆ ಮದುವೆ ಬಳಿಕ ಬೋಲ್ಡ್ ಡ್ರೆಸ್‌ನಿಂದ ದೂರವಿರಲು ಬಯಸಿದ್ದಾರೆ. ಇಷ್ಟೇ ಅಲ್ಲ ಯಾರ ಜೊತೆನೂ ಕ್ಲೋಸ್ ಆಗಿ ಆಕ್ಟ್ ಮಾಡಬಾರದು ಅಂತ ಡಿಸೈಡ್ ಮಾಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.  ಬಾಲಿವುಡ್‌ನಲ್ಲಿ ಬೋಲ್ಡ್ ಹೀರೋಯಿನ್ ಅಂತ ಹೆಸರು ತಗೊಂಡಿದ್ದ ಶೋಭಿತಾ ಇದೀಗ ಅಚ್ಚರಿ ನಿರ್ಧಾರ ಹಲವರಿಗೆ ಶಾಕ್ ಕೊಟ್ಟಿದೆ. ಆದರೆ ಈ ಸುದ್ದಿಯಿಂದ ನಾಗ ಚೈತನ್ಯ ಅಭಿಮಾನಿಗಳು ಖುಷಿಯಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories